ಬೆಂಗಳೂರು, ಫೆ. 15: ವಿಶ್ವವಸು ನಾಮ ಸಂವತ್ಸರದ, ಉತ್ತರಾಯನ ಶರದೃತು, ಮಘೆ ಮಾಸೆ, ಕೃಷ್ಣೆ ಪಕ್ಷ, ಉತ್ತರಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಉತ್ತರಾಷಾಢ ನಕ್ಷತ್ರ ಇದ್ದು ಅಧಿಪತಿ ರವಿ. ಹಾಗಾಗಿ ಹೆಚ್ಚಿನ ರಾಶಿಯವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಾವುದೇ ತೊಂದರೆ ಬಾರದಂತೆ ಜಾಗೃತೆ ವಹಿಸಬೇಕು.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದ ಮನಸ್ಸಿನ ತೊಂದರೆ ಎಲ್ಲವೂ ಇಂದು ಬಗೆಹರಿಯುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಪ್ರೇಮ, ಪ್ರೀತಿ ಹಾಗೂ ದಾಂಪತ್ಯದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಎಲ್ಲ ರೀತಿನಿಂದಲೂ ನಿಮಗೆ ಜಯವಾಗುತ್ತದೆ. ಅದೇ ರೀತಿ ಪ್ರೀತಿ ಪಾತ್ರರಿಂದಲೂ ಉತ್ತಮ ಸಹಕಾರ ಪ್ರಾಪ್ತಿಯಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಸಿಗುತ್ತದೆ. ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು.
ಮನೆಯ ಸುಖ, ಶಾಂತಿ, ಸಮೃದ್ಧಿಗೆ ಯಾವ ರೀತಿಯ ನವಿಲಿನ ಮೂರ್ತಿಯನ್ನು ಇಟ್ಟುಕೊಳ್ಳಬೇಕು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೂ ಮುಖ್ಯವಾದ ಕೆಲವು ವಿಚಾರದಲ್ಲಿ ಹಣಕಾಸಿನ ವಿಚಾರದಲ್ಲಿ ಇವತ್ತು ಅವಸರ ಮಾಡಲು ಹೋಗುವುದು ಒಳ್ಳೆಯದಲ್ಲ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕೋರ್ಟ್, ವ್ಯವಹಾರ ಯಾವುದೇ ಬೇಡ. ಆಸ್ತಿ ಪಾಸ್ತಿ ವಿಚಾರ, ಹಾಗೂ ತಾಯಿಯ ಆರೋಗ್ಯ ವಿಚಾರವಾಗಿ ತುಂಬಾನೇ ತಲೆಕೆಡಿಸಿಕೊಳ್ಳುವ ದಿನವಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮ ದಿನವಾಗಲಿದೆ. ಮಾಧ್ಯಮ, ಮಾರ್ಕೆಟಿಂಗ್ ವ್ಯವಹಾರ ಮಾಡೋರಿಗೆ ಅದೃಷ್ಟ ಖುಲಾಯಿಸಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಸಂಸಾರದ ತಾಪತ್ರಯಗಳು ಇಂದು ಜಾಸ್ತಿಯಾಗುತ್ತವೆ. ಆದರೂ ಆರ್ಥಿಕ ಸುಭದ್ರತೆಯ ಬಗ್ಗೆ ನೋಡಿಕೊಂಡರೆ ಯಾವುದೇ ರೀತಿಯ ತೊಂದರೆ ಇಂದು ಬರುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನದ ಕ್ಷೇಷ ಬಗೆಹರಿಯುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಬರಬಹುದು. ಅದೇ ರೀತಿ ಮುಖ್ಯ ನಿರ್ಧಾರದಲ್ಲಿ ಯಾರ ಸಹಕಾರ ಸಿಗದೆ ಇರಬಹುದು.
ಮೀನ ರಾಶಿ: ಮೀನ ರಾಶಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಇಷ್ಟಾರ್ಥ ಸಿದ್ದಿಯಾಗಲಿದೆ. ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.