ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಸಂಜೆ ಸಮಯದಲ್ಲಿ ಈ ಕೆಲಸಗಳನ್ನು ಮಾಡಬೇಡಿ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ!

ಸಂಜೆ ಸಮಯವನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ಕಾರ್ಯಗಳನ್ನು ತಪ್ಪಿಸಿ, ಪೂಜೆ, ದೀಪ ಹಚ್ಚುವುದು ಮುಂತಾದ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ತಪ್ಪು ಕಾರ್ಯಗಳು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ನಂಬಿಕೆ ಇದೆ.

ಜ್ಯೋತಿಷ್ಯ ಶಾಸ್ತ್ರ

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ಮತ್ತು ನಿಯಮವಿದೆ ಎಂದು ನಂಬಲಾಗುತ್ತದೆ. ಆ ನಿಯಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಶಾಂತಿ, ಸಮತೋಲನ ಮತ್ತು ದೇವರ ಕೃಪೆ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳು ಹೇಳುತ್ತವೆ. ಆದರೆ ಕೆಲವೊಮ್ಮೆ ತಿಳಿದಿದ್ದರೂ ಅಥವಾ ತಿಳಿಯದೇ ತಪ್ಪು ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಅದರ ಪರಿಣಾಮಗಳನ್ನು ನಂತರ ಅನುಭವಿಸಬೇಕಾಗುತ್ತದೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಹಾಗಾದ್ರೆ ಸಂಜೆ ಯಾವ ಕೆಲಸಗಳನ್ನು ಮಾಡಬಾರದು..? ಇದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ(Astro Tips) ಏನು..? ಎಂಬುದನ್ನು ತಿಳಿದುಕೊಳ್ಳೋಣ..

ಸೂರ್ಯಾಸ್ತದ ಹೊತ್ತಿನಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಸಮಯದಲ್ಲಿ ದೇವರ ಪೂಜೆ, ದೀಪ ಹಚ್ಚುವುದು ಮುಂತಾದ ಸಕಾರಾತ್ಮಕ ಕಾರ್ಯಗಳನ್ನು ಮಾಡುವುದು ಉತ್ತಮ. ಆದರೆ ಕೆಲವು ಕಾರ್ಯಗಳನ್ನು ಈ ಸಮಯದಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ.

ಸಂಜೆಯ ವೇಳೆ ಮನೆಯ ಮುಖ್ಯ ಬಾಗಿಲನ್ನು ಮುಚ್ಚದೇ ತೆರೆದಿಡುವುದು ಶುಭವೆಂದು ಪರಿಗಣಿಸಲಾಗಿದೆ. ಜಾನಪದ ನಂಬಿಕೆಯ ಪ್ರಕಾರ, ಈ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುತ್ತಾಳೆ, ಆದ್ದರಿಂದ ಬಾಗಿಲು ತೆರೆದಿಟ್ಟರೆ ಅವಳ ಆಶೀರ್ವಾದ ಲಭಿಸುತ್ತದೆ ಎಂದು ನಂಬುತ್ತಾರೆ.

ಇದೇ ರೀತಿ, ಸಂಜೆ ವೇಳೆ ಬೆಳ್ಳುಳ್ಳಿ, ಈರುಳ್ಳಿ ಮತ್ತು ಸೂಜಿ ಮುಂತಾದ ವಸ್ತುಗಳನ್ನು ಯಾರಿಗೂ ಕೊಡುವುದು ಅಥವಾ ಮನೆಯಿಂದ ಹೊರಗೆ ಹಾಕುವುದು ಅಶುಭವೆಂದು ಹೇಳಲಾಗಿದೆ. ಇದರಿಂದ ಮನೆಯೊಳಗೆ ನಕಾರಾತ್ಮಕತೆ ಹೆಚ್ಚಾಗಿ, ಕುಟುಂಬದ ಸದಸ್ಯರ ನಡುವಿನ ಒಗ್ಗಟ್ಟು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

Astro Tips: ದಾರಿದ್ರ್ಯ ಮತ್ತು ಅಡೆತಡೆಗಳಿಂದ ಮುಕ್ತಿ ಬೇಕೇ?; ಹಾಗಾದ್ರೆ ನೀರಿಗೆ ಇವುಗಳನ್ನು ಬೆರಸಿ ಸ್ನಾನ ಮಾಡಿ

ಕೆಲವು ಪೌರಾಣಿಕ ಉಲ್ಲೇಖಗಳ ಪ್ರಕಾರ, ಸಂಜೆ ಸಮಯದಲ್ಲಿ ಆಹಾರ ಸೇವಿಸುವುದು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಇದು ಜೀರ್ಣಕ್ರಿಯೆ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲೂ ಅಡಚಣೆಗಳು ಎದುರಾಗಬಹುದು ಎಂದು ಹೇಳುತ್ತಾರೆ.

ಹಣದ ವ್ಯವಹಾರಗಳ ವಿಷಯದಲ್ಲೂ ಸಂಜೆ ಸಮಯವನ್ನು ತಪ್ಪಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಸಾಲ ನೀಡುವುದು ಅಥವಾ ಪಡೆಯುವುದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಹಾಗೆಯೇ, ಈ ಸಮಯದಲ್ಲಿ ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಜಗಳ, ಅಳಲು ಅಥವಾ ಕಲಹಗಳಿಂದ ದೂರವಿದ್ದು ಸಂತೋಷದ ವಾತಾವರಣವನ್ನು ಉಳಿಸಬೇಕು.

ಒಟ್ಟಿನಲ್ಲಿ, ಸಂಜೆ ಸಮಯವನ್ನು ಭಕ್ತಿ, ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಳಿಗೆ ಮೀಸಲಿಡಬೇಕು. ಈ ರೀತಿಯಾಗಿ ಜೀವನವನ್ನು ನಡೆಸಿದರೆ ಮನೆಯಲ್ಲಿ ಸುಖ-ಸಮೃದ್ಧಿ ಮತ್ತು ಉತ್ತಮ ವಾತಾವರಣ ನೆಲೆಸುತ್ತದೆ ಎಂಬ ನಂಬಿಕೆ ಇದೆ.