ಬೆಂಗಳೂರು: ಹಿಂದೂ ಧರ್ಮದಲ್ಲಿ ಶನಿವಾರವನ್ನು ಶನಿದೇವನಿಗೆ ಸಮರ್ಪಿತ ದಿನ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಮಾಡುವ ಕೆಲವು ಕೆಲಸಗಳು ವ್ಯಕ್ತಿಯ ಜೀವನದ ಮೇಲೆ ಶುಭ ಅಥವಾ ಅಶುಭ ಪರಿಣಾಮ ಬೀರುತ್ತವೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ಕೆಲವು ವಸ್ತುಗಳನ್ನು ಶನಿವಾರದಂದು ಖರೀದಿಸುವುದು ಅಥವಾ ಬಳಸುವುದು ಶನಿದೇವನ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಶನಿ ಗ್ರಹವು ಕರ್ಮಫಲದಾತನಾಗಿರುವುದರಿಂದ, ಅವನ ಕೃಪೆ ಇದ್ದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ; ಕೋಪಗೊಂಡರೆ ಅನೇಕ ರೀತಿಯ ಅಡೆತಡೆಗಳು ಎದುರಾಗಬಹುದು ಎನ್ನುವ ನಂಬಿಕೆ ಇದೆ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಶನಿವಾರ ಈ ವಸ್ತುಗಳನ್ನು ಖರೀದಿಸಬಾರದು..? ಕಂಡುಕೊಂಡರೆ ಏನಾಗುತ್ತದೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಸಾಸಿವೆ ಎಣ್ಣೆ ಖರೀದಿಸುವುದನ್ನು ಏಕೆ ತಪ್ಪಿಸಬೇಕು?
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಶನಿವಾರದಂದು ಸಾಸಿವೆ ಎಣ್ಣೆ ಖರೀದಿಸುವುದು ಶುಭವಲ್ಲ. ಇದು ಅನಗತ್ಯ ಖರ್ಚು, ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬದ ಕಲಹಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಇದೇ ಎಣ್ಣೆಯನ್ನು ಶನಿದೇವನಿಗೆ ಅರ್ಪಿಸುವುದು ಅಥವಾ ಶನಿ ದೇವಸ್ಥಾನದಲ್ಲಿ ದಾನ ಮಾಡುವುದು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗುತ್ತದೆ. ಶನಿ ದೋಷದಿಂದ ಬಳಲುತ್ತಿರುವವರು ಕಪ್ಪು ನಾಯಿಗೆ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ನೀಡಿದರೆ ಒಳಿತಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಕಬ್ಬಿಣದ ವಸ್ತುಗಳ ಖರೀದಿ ಅಶುಭ ಯಾಕೆ?
ಕಬ್ಬಿಣವನ್ನು ಶನಿದೇವನ ಲೋಹ ಎಂದು ಕರೆಯಲಾಗುತ್ತದೆ. ಆದ್ದರಿಂದ ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದರಿಂದ ಶನಿ ದೋಷ ಹೆಚ್ಚಾಗಬಹುದು ಎಂದು ನಂಬಲಾಗಿದೆ. ಆದರೆ ಕಬ್ಬಿಣದ ಪಾತ್ರೆಗಳು ಅಥವಾ ಇತರ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದರಿಂದ ಶನಿಯ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದು ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎನ್ನುವ ನಂಬಿಕೆಯಿದೆ.
Astro Tips: ನಿಮ್ಮ ಮನೆಯಲ್ಲಿನ ತುಳಸಿ ಗಿಡದ ಎಲೆಗೆಗಳು ಒಣಗಿದ್ಯಾ? ಹಾಗಾದ್ರೆ ಈ ತಪ್ಪು ಮಾಡಬೇಡಿ
ಉಪ್ಪಿನ ಖರೀದಿ ಸಾಲದ ಸಮಸ್ಯೆ ಹೆಚ್ಚಿಸುತ್ತದೆಯೇ?
ಶನಿವಾರದಂದು ಉಪ್ಪು ಖರೀದಿಸುವುದರಿಂದ ಮನೆಯ ಆರ್ಥಿಕ ಸ್ಥಿತಿ ಕುಸಿಯಬಹುದು ಎಂದು ಅನೇಕರು ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಉಪ್ಪು ಖರೀದಿಸಿದರೆ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ. ಆದ್ದರಿಂದ ಉಪ್ಪಿನ ಖರೀದಿಯನ್ನು ಬೇರೆ ದಿನಗಳಲ್ಲಿ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ.
ಮಾಂಸಾಹಾರ ಮತ್ತು ಮದ್ಯ ಸೇವನೆಯಿಂದ ದೂರವಿರಿ
ಶನಿವಾರದಂದು ಮಾಂಸಾಹಾರ ಮತ್ತು ಮದ್ಯ ಸೇವಿಸುವುದು ಶನಿದೇವನಿಗೆ ಇಷ್ಟವಲ್ಲ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಈ ಅಭ್ಯಾಸಗಳಿಂದ ಮಾನಸಿಕ ಅಶಾಂತಿ, ಕುಟುಂಬದ ಸಮಸ್ಯೆಗಳು ಹಾಗೂ ಅನಗತ್ಯ ತೊಂದರೆಗಳು ಹೆಚ್ಚಾಗಬಹುದು ಎನ್ನಲಾಗುತ್ತದೆ. ಆದ್ದರಿಂದ ಈ ದಿನ ಸಾತ್ವಿಕ ಆಹಾರ ಸೇವನೆಗೆ ಆದ್ಯತೆ ನೀಡುವುದು ಉತ್ತಮ.
ಈ ವಸ್ತುಗಳನ್ನು ಕೂಡ ಖರೀದಿಸಬೇಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕಪ್ಪು ಬೂಟುಗಳು, ಕತ್ತರಿ, ಪೊರಕೆ, ಶಾಯಿ, ಗ್ರೈಂಡರ್ ಹಾಗೂ ಬೆಂಕಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇವು ಕುಟುಂಬದಲ್ಲಿ ಒತ್ತಡ, ಕಲಹ ಮತ್ತು ಆರ್ಥಿಕ ನಷ್ಟವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ ಇದೆ.
Astro Tips: ದೇವರ ಮನೆಯಲ್ಲಿ ಪೂಜೆ ಮಾಡುವಾಗ ಹೇಗೆ ಕುಳಿತುಕೊಳ್ಳಬೇಕು? ಈ ಬಗ್ಗೆ ಶಾಸ್ತ್ರ ಏನೇಳುತ್ತದೆ..?; ಇಲ್ಲಿದೆ ಉತ್ತರ
ಶನಿವಾರ ಯಾವ ಆಹಾರಗಳಿಂದ ದೂರವಿರಬೇಕು?
ಈ ದಿನ ಮಸೂರ ಬೇಳೆ, ಸೊಪ್ಪು, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಮೊಸರು ಮತ್ತು ಉಪ್ಪಿನಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಕೆಲ ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಇವು ಶನಿಯ ಪ್ರತಿಕೂಲ ಪರಿಣಾಮವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆಯಿದೆ. ಬದಲಾಗಿ ಸರಳ ಮತ್ತು ಸಾತ್ವಿಕ ಆಹಾರ ಸೇವಿಸುವುದು ಶುಭಕರವೆಂದು ಪರಿಗಣಿಸಲಾಗಿದೆ.
ಶನಿ ದೋಷ ನಿವಾರಣೆಗೆ ಸರಳ ಪರಿಹಾರಗಳು
ಶನಿದೇವನಿಗೆ ಎಳ್ಳಿನ ಎಣ್ಣೆಯ ದೀಪ ಹಚ್ಚಿ.
ಕಪ್ಪು ಎಳ್ಳು ಅಥವಾ ಕಬ್ಬಿಣದ ವಸ್ತುಗಳನ್ನು ದಾನ ಮಾಡಿ.
ಹನುಮಾನ್ ಚಾಲೀಸಾ ಅಥವಾ ಶನಿ ಸ್ತೋತ್ರ ಪಠಿಸಿ.
ಬಡವರಿಗೆ ಆಹಾರ ಮತ್ತು ವಸ್ತ್ರ ದಾನ ಮಾಡಿ.
ಕಾಗೆಗಳಿಗೆ ಆಹಾರ ನೀಡುವುದು ಕೂಡ ಶುಭಕರವೆಂದು ಪರಿಗಣಿಸಲಾಗಿದೆ.