ಬೆಂಗಳೂರು, ಡಿ. 26: ಜ್ಯೋತಿಷ್ಯ ಶಾಸ್ತ್ರದ (Astro Tips) ಪ್ರಕಾರ ಶುಕ್ರವಾರ ಲಕ್ಷ್ಮೀ ದೇವಿಯ (Lakshmi Devi) ದಿನ. ಈ ದಿನ ಲಕ್ಷ್ಮೀಯನ್ನು ಪೂಜಿಸುವವರ ಮನೆಯಲ್ಲಿ ಆಕೆ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಪ್ರತಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಅದರಲ್ಲೂ ಉಪವಾಸವಿದ್ದು ಲಕ್ಷ್ಮೀಯನ್ನು ಪೂಜಿಸಿದರೆ ಅವಳ ಕೃಪೆಗೆ ಬೇಗನೆ ಪಾತ್ರರಾಗುತ್ತಾರೆ. ಲಕ್ಷ್ಮೀ ದೇವಿ ಕರುಣೆ ತೋರಿದರೆ ಹಣದ ಕೊರತೆಯೇ ಇರುವುದಿಲ್ಲ ಹಾಗೂ ಮನೆಯಲ್ಲಿ ಸಂಪತ್ತು ವೃದ್ಧಿಸುತ್ತದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಾಕಷ್ಟು ಭಕ್ತರು ತಾಯಿಯನ್ನು ಒಲಿಸುಕೊಳ್ಳಲು ನಾನಾ ಬಗೆಯ ಪೂಜೆ ಆರಾಧನೆ ಮಾಡುತ್ತಾರೆ.
ಸಂಪತ್ತು ಐಶ್ವರ್ಯ ವೃದ್ಧಿಸಿಕೊಳ್ಳಲು ಪ್ರತಿ ಶುಕ್ರವಾರ ಲಕ್ಷ್ಮೀ ತಾಯಿಯೊಂದಿಗೆ ಕುಬೇರ ಮಂತ್ರಗಳ ಪಠನೆ, ಪೂಜೆಯಿಂದ ಇನ್ನೂ ಬೇಗನೆ ಫಲ ದೊರೆಯುತ್ತೆ ಎಂದು ಪುರಾಣ ಗ್ರಂಥ ಹೇಳುತ್ತದೆ. ಹಾಗಾದರೆ ಬನ್ನಿ ಲಕ್ಷ್ಮೀ ತಾಯಿಯ ಆರಾಧನೆ, ಪೂಜೆ ಹೇಗೆ ಮಾಡಬೇಕು ಎಂಬುವುದನ್ನು ತಿಳಿಯೋಣ...
ಲಕ್ಷ್ಮೀ ದೇವಿಯ ಪೂಜೆ-ಆರಾಧನೆ ಹೀಗಿರಲಿ
- ನಸುಕಿನ ಜಾವ ಸೂರ್ಯೋದಯದ ಹೊತ್ತಿನಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು.
- ಶುಕ್ರವಾರ ಲಕ್ಷ್ಮೀಯನ್ನು ಪೂಜಿಸುವ ಮುನ್ನ ಪೂಜಾ ವಸ್ತುಗಳು ಹಾಗೂ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು.
- ಮನೆ ಹಾಗೂ ದೇವರ ಕೋಣೆಯ ಮುಂದೆ ಚಂದದ ರಂಗೋಲಿ ಹಾಕಬೇಕು. ಬಾಗಿಲಿಗೆ ಹಸಿರು ತೋರಣ ಕಟ್ಟಿ ಹೂಗಳಿಂದ ಅಲಂಕರಿಸಬೇಕು.
- ತಾಯಿಯ ಮೂರ್ತಿಯನ್ನು ತೊಳೆದು (ಫೋಟೊವಾದರೆ ಶುಭ್ರವಾದ ಬಟ್ಟೆಯಿಂದ ಒರೆಸಿ) ಮಂಟಪ ಅಥವಾ ಮಣೆಯ ಮೇಲೆ ಪ್ರತಿಷ್ಠಾಪಿಸಿ.
- ದೇವಿಗೆ ಸೀರೆ, ಹೂವು ಹಣ್ಣು, ಆಭರಣಗಳಿಂದ ಅಲಂಕರಿಸಿ.
- ಲಕ್ಷ್ಮೀಯನ್ನು ಪೂಜಿಸುವಾಗ ಕಂಚಿನ ತಂಬಿಗೆಯಲ್ಲಿ ನೀರು ತುಂಬಿ ಅದರಲ್ಲಿ ನಾಣ್ಯಗಳನ್ನು ಹಾಕಿ, ಐದು ಮಾವಿನ ಎಲೆಗಳನ್ನು ಇಟ್ಟು, ಜುಟ್ಟು ಇರುವ ತೆಂಗಿನಕಾಯಿಯನ್ನು ಇರಿಸಿ. ಹಾಗೆಯೇ ತೆಂಗಿನ ಕಾಯಿಗೆ ಕುಂಕುಮ-ಅರಿಶಿಣ ಹಚ್ಚುವುದನ್ನು ಮರೆಯದಿರಿ.
- ತುಪ್ಪದ ದೀಪ ಹಚ್ಚಿ ದೇವಿಯ ಆರಾಧನೆ ಮಾಡಿ, ಮಂತ್ರಗಳನ್ನು ಹೇಳಿ ಪೂಜಿಸಿ.
- ನಂತರ ದೇವಿಗೆ ಅಕ್ಕಿ ಪಾಯಸ ಮಾಡಿ ನೈವೇದ್ಯ ಮಾಡಿ, ಬಳಿಕ ಪ್ರಸಾದವನ್ನು ಮನೆ ಮಂದಿಗೆ ನೀಡಿ.
ಬುಧವಾರ ಪೂಜೆ ಜತೆ ಉಪವಾಸ ವ್ರತ ಮಾಡಿದವರಿಗೆ ಜೀವನದಲ್ಲಿ ಎಲ್ಲ ಕಾರ್ಯ ಸಿದ್ಧಿ
ಸಂಜೆ ಲಕ್ಷ್ಮೀ ಪೂಜೆ
ಸೂರ್ಯಾಸ್ತದ ಹೊತ್ತಿನಲ್ಲಿ ಲಕ್ಷ್ಮೀ ತಾಯಿ ಮುಂದೆ ದೀಪ ಹಚ್ಚಿ ಅವಳಿಗೆ ಆರತಿ ಮಾಡಿ ಮನೆ ಮುಂದೆ ತುಪ್ಪದ ಹಚ್ಚಿಡಬೇಕು. ಮನೆ ಬಾಗಿಲಿನಲ್ಲಿ ದೀಪ ಬೆಳಗುವುದರಿಂದ ಲಕ್ಷ್ಮೀ ಒಲಿಯುತ್ತಾಳೆ. ಇದರಿಂದ ನಿಮ್ಮ ಆರ್ಥಿಕತೆ ಸುಧಾರಣೆ ಕಂಡು ಬರುತ್ತದೆ.
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ
ಲಕ್ಷ್ಮೀ ಕುಬೇರ ಮಂತ್ರ: ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮೀ ಮಮ ಗೃಹೆ ಧನಂ ಪುರಾಯ ಪುರಾಯ ನಮಃ
ಮಹಾಲಕ್ಷ್ಮಿ ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ
ಕುಬೇರ ಮಂತ್ರ: ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ
ಈ ಮಂತ್ರಗಳನ್ನು ಪಠಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.