ಬೆಂಗಳೂರು: ಮಾನವನ ಜೀವನದಲ್ಲಿ ಲಾಭ-ನಷ್ಟಗಳು ಸಾಮಾನ್ಯ. ಕೆಲ ಸಂದರ್ಭಗಳಲ್ಲಿ ನಷ್ಟ ಎದುರಾಗಿದ್ರೆ, ಮತ್ತೊಮ್ಮೆ ಸಂಪತ್ತು ಕೂಡ ಲಭಿಸುತ್ತದೆ. ಆದರೆ ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ನಮ್ಮ ಸುತ್ತ ನಡೆಯುವ ಸಣ್ಣ-ಪುಟ್ಟ ಸಂಗತಿಗಳನ್ನು ಗಮನಿಸಲು ಸಮಯವೂ ಕಡಿಮೆ, ಗಮನವೂ ಕಡಿಮೆ. ಜ್ಯೋತಿಷ್ಯ ಮತ್ತು ಶಕುನ ಶಾಸ್ತ್ರಗಳ(Astro Tips) ಪ್ರಕಾರ, ನಾವು ಮನೆ ಬಿಟ್ಟು ಹೊರಡುವಾಗ ಅಥವಾ ದಾರಿಯಲ್ಲಿ ಕಾಣುವ ಕೆಲವು ಸೂಚನೆಗಳು ನಮ್ಮ ಭವಿಷ್ಯಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಬಹುದು. ಇವುಗಳನ್ನು ಅರಿತುಕೊಳ್ಳಲು ಮನಸ್ಸಿನ ಶಾಂತಿ ಹಾಗೂ ಗಮನ ಬಹಳ ಮುಖ್ಯವಾಗಿದ್ದು, ನಾವಿಂದು ಶುಭ ಸೂಚನೆಗಳನ್ನು ನೀಡುವ ಸಂಗತಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ…
ಇವುಗಳು ಕಣ್ಣಿಗೆ ಕಂಡರೆ ಶುಭ
ತುರ್ತು ಕೆಲಸಕ್ಕಾಗಿ ಹೊರಡುವಾಗ ದಾರಿಯಲ್ಲಿ ಶಂಖ-ಗಂಟೆ, ಸ್ವಸ್ತಿಕ ಚಿಹ್ನೆ, ನಾಣ್ಯ ಅಥವಾ ಕುದುರೆಕಾಲು ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಮನೆಯಲ್ಲಿ ಅಥವಾ ದೇವರ ಮಂದಿರದಲ್ಲಿ ಇಟ್ಟರೆ ಅದೃಷ್ಟ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಯಶಸ್ಸನ್ನು ತರುವ ಕಬ್ಬು
ಹಾಗೇ, ದಾರಿಯಲ್ಲಿ ಕಬ್ಬಿನ ರಾಶಿ ಕಾಣುವುದು ಅಥವಾ ಹಸು ಹಾಗೂ ಅದರ ಶಬ್ದ ಕೇಳುವುದು ಕೂಡ ಶುಭ ಸಂಕೇತ. ಇದು ಕೈಗೊಂಡ ಕೆಲಸ ಯಶಸ್ವಿಯಾಗುವುದನ್ನು ಸೂಚಿಸುತ್ತದೆ ಮತ್ತು ಸಂಪತ್ತು ನಿಮ್ಮತ್ತ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.
Astro Tips: ದಾರಿದ್ರ್ಯ ಮತ್ತು ಅಡೆತಡೆಗಳಿಂದ ಮುಕ್ತಿ ಬೇಕೇ?; ಹಾಗಾದ್ರೆ ನೀರಿಗೆ ಇವುಗಳನ್ನು ಬೆರಸಿ ಸ್ನಾನ ಮಾಡಿ
ಹಣ ಕೆಳಗೆ ಬಿದ್ದರೆ ಏನರ್ಥ
ಹಣದ ವ್ಯವಹಾರ ಮಾಡುವಾಗ ಹಣ ಕೆಳಗೆ ಬೀಳುವುದು ಸಹ ಒಳ್ಳೆಯ ಸೂಚನೆ ಎಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಲಾಭದ ಆರಂಭವಾಗಬಹುದು ಮತ್ತು ಆದಾಯದಲ್ಲಿ ಏರಿಕೆಯನ್ನು ಸೂಚಿಸುತ್ತದೆ ಎಂಬ ನಂಬಿಕೆ ಇದೆ.
ಶುಭ ಶಕುನ ಸೂಚಿಸುವ ನವಿಲು
ಮನೆಯಿಂದ ಹೊರಡುವಾಗ ನವಿಲು ತನ್ನ ರೆಕ್ಕೆಗಳನ್ನು ಹರಡುವುದು ಕಂಡರೆ ಅದನ್ನು ಅತ್ಯಂತ ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದರಿಂದ ನೀವು ಕೈಗೊಂಡ ಕೆಲಸ ಶೀಘ್ರದಲ್ಲಿ ಪೂರ್ಣಗೊಳ್ಳುತ್ತದೆ ಮತ್ತು ಹಣದ ಲಾಭವೂ ದೊರೆಯಬಹುದು. ಹಾಗೆಯೇ, ದಾರಿಯಲ್ಲಿ ಕಸ ಗುಡಿಸುವವರನ್ನು ನೋಡುವುದೂ ಹಣ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸಿನ ಸೂಚನೆಯಾಗಿದೆ.
ಇವರು ಎದುರಿಗೆ ಬಂದರೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ
ಹೊಂದಲಿದ್ದೀರಿ ಎಂದರ್ಥ
ಇದಲ್ಲದೆ, ಮನೆಯಿಂದ ಹೊರಡುವಾಗ ಪುಟ್ಟ ಹುಡುಗಿ ನಗುತ್ತಿರುವುದು ಅಥವಾ ನೀರು ತುಂಬಿದ ಬಿಂದಿಗೆ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡುವುದು ಲಕ್ಷ್ಮಿ ದೇವಿಯ ಕೃಪೆಯ ಸಂಕೇತವೆಂದು ಹೇಳಲಾಗುತ್ತದೆ. ಇದು ನಿಮ್ಮ ಆರ್ಥಿಕ ಸಮಸ್ಯೆಗಳು ಶೀಘ್ರದಲ್ಲೇ ನಿವಾರಣೆಯಾಗುವುದನ್ನು ಸೂಚಿಸುತ್ತದೆ.
ಒಟ್ಟಾರೆ, ಇಂತಹ ಶಕುನಗಳು ನಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳ ಸೂಚನೆಗಳೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳ ಫಲವನ್ನು ಅನುಭವಿಸಲು ಮನಸ್ಸಿನ ಶಾಂತಿ ಮತ್ತು ನಂಬಿಕೆ ಅತ್ಯಂತ ಮುಖ್ಯ.