ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಬುಧವಾರ ಗಣೇಶನ ಆರಾಧನೆ ಶ್ರೇಯಸ್ಕರ: ಪೂಜೆ ಹೇಗೆ ಮಾಡಬೇಕು ಏನ್ ಮಾಡ್ಬೇಕು? ಇಲ್ಲಿದೆ ವಿವರ

ಬುಧವಾರವನ್ನು ಗಣೇಶನಿಗೆ ಸಮರ್ಪಿಸಲಾಗಿದ್ದು, ಈ ದಿನ ಆತನನ್ನು ಪೂಜಿಸುವುದರಿಂದ ಜ್ಞಾನ, ಸಮೃದ್ಧಿಗೆ ಎದುರಾಗಿರುವ ಅಡೆತಡೆ ನಿವಾರಣೆಯಾಗುತ್ತದೆ. ಈ ದಿನ ಹಸಿರು ಬಣ್ಣವನ್ನು ಧರಿಸುವುದು ಮತ್ತು ಗಣೇಶನಿಗೆ ಹಸಿರು ವಸ್ತುಗಳನ್ನು, ವಿಶೇಷವಾಗಿ ಗರಿಕೆ ಹುಲ್ಲನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಬುಧವಾರ ಗಣೇಶನ ಈ ಮಂತ್ರ ಪಠಿಸಿ

ಗಣೇಶ(ಸಂಗ್ರಹ ಚಿತ್ರ) -

Profile
Sushmitha Jain Nov 12, 2025 10:41 AM

ಬೆಂಗಳೂರು: ಗಣಪತಿಯನ್ನು ವಿಘ್ನ ವಿನಾಶಕನೆಂದು ಕರೆಯುತ್ತಾರೆ. ವಿಘ್ನಗಳನ್ನೆಲ್ಲ ನಾಶ ಮಾಡಿ ಭಕ್ತರ ಸಂಕಷ್ಟಗಳನ್ನು ನಿವಾರಿಸುವ ಸಂಕಟಮೋಚನನಾಗಿದ್ದಾನೆ ನಮ್ಮ ಗಣಪ. ಬುಧವಾರ ಗಣಪತಿ ದೇವರಿಗೆ ಮೀಸಲಾದ ದಿನ. ಈ ದಿನದಂದು ನಾವು ವಿನಾಯಕನನ್ನು ಭಕ್ತಿಯಿಂದ ಆರಾಧನೆ ಮಾಡಿದಲ್ಲಿ ನಮ್ಮ ವೃತ್ತಿ, ಆರೋಗ್ಯ, ಸಂಸಾರ, ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ನಂಬಿಕೆಯ ಪ್ರಕಾರ ಬುಧವಾರ ಗಣೇಶನನ್ನು ಆರಾಧಿಸುವುದರಿಂದ ವ್ಯಕ್ತಿಯೊಬ್ಬನ ಜಾತಕದಲ್ಲಿ ಬುಧನ ಸ್ಥಾನ ಬಲವಾಗುತ್ತದೆ. ಹಾಗೇ ಗಣೇಶನನ್ನು ಪೂಜಿಸುವುದರಿಂದ ಬುಧ ಗ್ರಹಕ್ಕೆ ಸಂಬಂಧಿಸಿದ ದೋಷಗಳು ದೂರಾಗುತ್ತದೆ

ಬುಧವಾರ ಗಣೇಶ ಪೂಜೆಯ ವಿಧಾನ ಹೇಗೆ?

ಬುಧವಾರ ಸೂರ್ಯಾಸ್ತದ ಬಳಿಕ ಗಣೇಶನನ್ನು ಆರಾಧನೆ ಮಾಡುವುದು ಶ್ರೇಯಸ್ಕರ. ಈ ಸಂದರ್ಭದಲ್ಲಿ ಗಣಪತಿ ದೇವರಿಗೆ ಪ್ರಿಯವಾದ ಗರಿಕೆ ಹುಲ್ಲನ್ನು ಸಮರ್ಪಿಸಬೇಕು. ಈ ದಿನದಂದು ಬಡವರಿಗೆ ಅಥವಾ ಅಗತ್ಯವಿರುವವರಿಗೆ ಹೆಸರು ಕಾಳನ್ನು ದಾನ ಮಾಡಬೇಕು ಮಾತ್ರವಲ್ಲದೇ ಹೆಸರು ಕಾಳಿನಿಂದ ತಯಾರಿಸಿದ ಭಕ್ಷ್ಯವನ್ನು ಗಣಪತಿಗೆ ಸಮರ್ಪಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ.

ಇನ್ನು, ಬುಧವಾರದ ವಿಘ್ನ ನಿವಾರಕನಿಗೆ ಹೆಸರು ಕಾಳನ್ನು ಸಮರ್ಪಿಸುವುದರಿಂದ ಮನೆಯಲ್ಲಿ ಸಂಪತ್ತಿನ ವೃದ್ಧಿಯಾಗುತ್ತದೆ. ಇನ್ನು ವೃತ್ತಿ ಜೀವನದಲ್ಲಿ ಉನ್ನತಿಯನ್ನು ಬಯಸುವವರು ಬುಧವಾರ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ.

ಈ ಸುದ್ದಿಯನ್ನು ಓದಿ: Astro Tips: ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನೋಡಬಾರದು; ಸಮಸ್ಯೆಗಳು ಎದುರಾಗಬಹುದು ಎಚ್ಚರ

ಇದರ ಜತೆಗೆ ಬುಧವಾರ ಸ್ವಲ್ಪ ಕೊತ್ತಂಬರಿ ಸೇವಿಸಿ ಮನೆಯಿಂದ ಹೊರಟರೆ ನೀವು ಆ ದಿನ ಮಾಡಬೇಕಾಗಿರುವ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ! ಇನ್ನು ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸುವುದರಿಂದ ನಿಮಗೆ ಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ನಿಮ್ಮ ಜಾತಕದಲ್ಲಿ ಬುಧ ಗ್ರಹದ ಪ್ರಭಾವ ಬಲಶಾಲಿಯಾಗಬೇಕಾದರೆ, ‘ಓಂ ಬ್ರಾಂ ಬ್ರಿಂ ಬ್ರೌಂ ಸಃ ಬುಧಾಯ ನಮಃ’ ಅಥವಾ ‘ಓಂ ಬುಧಾಯ ನಮಃ’ ಎಂಬ ಬೀಜ ಮಂತ್ರವನ್ನು ಪ್ರತೀ ದಿನ 108 ಬಾರಿ ಜಪಿಸುವುದು ಫಲಕರ. ಇನ್ನು ಬುಧವಾರ ಜಗನ್ಮಾತೆಯನ್ನು ಧ್ಯಾನಿಸಿ ದುರ್ಗಾ ಸಪ್ತಶತಿಯನ್ನು ಪಾರಾಯಣ ಮಾಡುವುದರಿಂದ ಶತ್ರು ನಾಶವಾಗಿ ನಿಮ್ಮ ಜೀವನದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ.

ಬುಧವಾರ ನೀವು ಪಠಿಸಬುದಾದ ಕೆಲವು ಮಂತ್ರಗಳು

ಧಾರ್ಮಿಕ ನಂಬಿಕೆಗಳ ಪ್ರಕಾರ, ಬುಧವಾರವು ಗಣೇಶನ ದಿನ. ಈ ದಿನ ಗಣಪತಿಯ ಆರಾಧನೆಯು ವಿಶೇಷ ಮಹತ್ವನ್ನು ಒಳಗೊಂಡಿದೆ. ಈ ದಿನದಂದು ನೀವು ಈ ಮಂತ್ರಗಳನ್ನು ಪಠಿಸಿದ್ರೆ ಶುಭ ಫಲ ಸಿಗುತ್ತದೆ.

ಓಂ ಗ್ಲೌಂ ಗೌರೀಪುತ್ರ, ವಕ್ರತುಂಡ, ಗಣಪತಿ ಗುರು ಗಣೇಶ
ಗ್ಲೌಂ ಗಣಪತಿ, ರಿದ್ದಿ ಪತಿ, ಸಿದ್ದಿ ಪತಿ ಮೇರೆ ಕರ ದೂರ ಕ್ಲೇಶ
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ದಿದ್ ಪ್ರಚೊದಯಾತ್
ಓಂ ನಮೋ ಗಣಪತಯೇ ಕುಬೇರ ಏಕದ್ರಿಕೋ ಫಟ್ ಸ್ವಾಹಾ