ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಅಕ್ಟೋಬರ್ 28, 2026: ಉದ್ಯೋಗ, ವ್ಯವಹಾರದಲ್ಲಿ ಜಾಕ್‌ಪಾಟ್‌ ಹೊಡೆಯುವ ದಿನ

Horoscope Today October 28th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ದ್ವಿತೀಯ ತಿಥಿ, ಕೃತಿಕಾ ನಕ್ಷತ್ರದ ಅಕ್ಟೋಬರ್‌ 28ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಮನಸ್ಸಿಗೆ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಸಂಸಾರದಲ್ಲೂ ಹೆಚ್ಚಿನ ಖುಷಿ, ನೆಮ್ಮದಿ ಸಿಗಲಿದ್ದು ಆರ್ಥಿಕವಾಗಿಯೂ ಯಶಸ್ಸು ಗಳಿಸುತ್ತೀರಿ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ನೀವು ಕಾಣುತ್ತೀರಿ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮಿತ್ರತ್ವದಲ್ಲಿ ಇಂದು ಒಡಕು ಉಂಟಾಗುವ ಸಾಧ್ಯತೆ ಇದೆ.‌

ಕಟಕರಾಶಿ: ಇಂದು ಭಾಗ್ಯೋದಯದ ದಿನವಾಗಿದ್ದು, ಗಜಕೇಸರಿ ಯೋಗವು ನಿಮಗೆ ಇರುತ್ತದೆ. ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಂದ ನಿಮಗೆ ಹೆಚ್ಚಿನ ಅನುಕೂಲವಾಗುತ್ತದೆ.

‌ಸಿಂಹ ರಾಶಿ: ಇಂದು ಕಷ್ಟದ ದಿನವಾಗಲಿದೆ. ಅದೃಷ್ಟ ಪರೀಕ್ಷೆಗಳು ನಡೆಯುತ್ತಿರುತ್ತವೆ. ಕೆಲಸದಲ್ಲಿ ಒಡಕುಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಮುಖ್ಯ ನಿರ್ಧಾರವನ್ನು ಇಂದು ಕೈಗೊಳ್ಳುವುದು ಬೇಡ.

ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಎಲ್ಲಿರಬೇಕು? ದಾಂಪತ್ಯ ಸುಖಕ್ಕೆ ವಾಸ್ತು ಹೇಳುವ ನಿಯಮ ಇದು!

ಕನ್ಯಾ ರಾಶಿ: ಉತ್ತಮ ದಿನವಾಗಿರಲಿದೆ. ಹಿರಿಯರ, ದೊಡ್ಡವರ ಆಶೀರ್ವಾದ ಅತ್ಯಗತ್ಯವಾಗುತ್ತದೆ.‌ ವ್ಯವಹಾರದಲ್ಲೂ ಅತೀ ಹೆಚ್ಚಿನ ಲಾಭ ಗಳಿಸುತ್ತೀರಿ.

ತುಲಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಬಹಳನೇ ಭಾವುಕವಾದ ದಿನ ನಿಮ್ಮದಾಗುತ್ತದೆ.‌ ಯಾರು ಕೂಡ ನಿಮ್ಮ ಪರವಾಗಿ ಇರದೇ ಇರಬಹುದು‌.

ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಲಿದ್ದು ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಿ‌. ಪಾರ್ಟನರ್‌ಶಿಪ್‌ ಹಾಗೂ ದಾಂಪತ್ಯದಲ್ಲಿ ಹೆಚ್ಚಿನ ಯಶಸ್ಸು ಕಾಣುತ್ತೀರಿ.

ಧನು ರಾಶಿ: ಉತ್ತಮ ದಿನವಾಗಲಿದೆ. ಶತ್ರು ನಾಶ ಹಾಗೂ ಧ್ವಂಸವಾಗಲಿದ್ದು ಹೆಣ್ಣುಮಕ್ಕಳನ್ನು ಎದುರು ಹಾಕದಂತೆ ನೋಡಿಕೊಳ್ಳಬೇಕು.

ಮಕರ ರಾಶಿ: ಇಂದು ಕಷ್ಟದ ದಿನವಾಗಲಿದೆ. ಪ್ರೇಮ, ಪ್ರೀತಿ ವಿಚಾರದಲ್ಲಿ ಬೇಸರ ಉಂಟಾಗಬಹುದು.ಅದೇ ರೀತಿ ಮಹಿಳೆಯರಿಂದತೊಂದರೆ ಎದುರಾಗಬಹುದು.

ಕುಂಭ ರಾಶಿ: ಇಂದು  ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿ ಗಮನ ಇರಲಿ.

ಮೀನ ರಾಶಿ: ಇಂದು ಉತ್ತಮ ದಿನವಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋರಿಗೆ ಲಾಭ ದೊರೆಯಲಿದೆ. ಹಿಂದಿನ ದಿನದಲ್ಲಿ ಇದ್ದ ಸಮಸ್ಯೆ ನಿವಾರಣೆಯಾಗುತ್ತದೆ.