ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 30, 2026: ಇಂದು ಆರ್ಥಿಕವಾಗಿ ಭಾರಿ ನಷ್ಟವಾಗಲಿದೆ ಎಚ್ಚರ

Horoscope Today March 30: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ದ್ವಾದಶಿ ತಿಥಿ, ಮಘಾ ನಕ್ಷತ್ರದ ಮಾರ್ಚ್ 30ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂಟರ್‌ನೆಟ್‌ ಚಿತ್ರ

ಬೆಂಗಳೂರು, ಮಾ. 30: ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಮಘಾ ನಕ್ಷತ್ರದ ಅಧಿಪತಿ ಕೇತು ಹೀಗಾಗಿ ಹೆಚ್ಚಿನ ರಾಶಿಯವರ ಮೇಲೆ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೂ ಕೂಡ ನಿಮ್ಮ ಪರಿಶ್ರಮ ಪ್ರಮುಖವಾಗಿರಲಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಸಂಸಾರದ ತಾಪತ್ರಯಗಳು ಜಾಸ್ತಿಯಾಗುತ್ತವೆ. ಸಂಸಾರದ ಜವಾಬ್ದಾರಿಗಳು ಕೂಡ ಹೆಚ್ಚಾಗಿರಲಿದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಲಾಭ ಉಂಟಾಗಲಿದ್ದು ಅತೀ ಹೆಚ್ಚಿನ ಗೌರವ ಪ್ರಾಪ್ತಿಯಾಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ತೊಂದರೆಗಳು ಬಗೆಹರಿಯುವ ಸಾಧ್ಯತೆ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಹಿಂದಿನ ಎರಡು ಮೂರು ದಿನ ಕಾಡಿದ ನೋವೆಲ್ಲ ಮಾಯವಾಗಲಿದೆ. ಮುಂದಿನ ದಿನಕ್ಕೆ ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗಲಿದೆ.

ಅಡುಗೆ ಮನೆಯ ಈ ವಾಸ್ತು ದೋಷ ಕುಟುಂಬ ಕಲಹಕ್ಕೆ ಕಾರಣವಾಗಬಹುದು

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮಿತ್ರತ್ವದಲ್ಲಿ ಒಡಕು ಕಾಣುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರೂ ಕೂಡ ದೂರವಾಗಲಿದ್ದಾರೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಧನಾಗಮನದ ಸೂಚನೆ ಕೂಡ ಇದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅದೃಷ್ಟ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು, ಒಳ್ಳೆಯ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಇದ್ದು, ಅದೃಷ್ಟದ ದಿನವಾಗಲಿದೆ. ಹಿಂದಿನ ದಿನದಲ್ಲಿ ಇದ್ದ ನೋವಿಗೆ ಪರಿಹಾರ ದೊರೆಯಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಇಂದು ತೆಗೆದುಕೊಳ್ಳಬೇಡಿ. ಯಾರ ಸಹಕಾರವೂ ದೊರೆಯಲಾರದು.

ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಪಾರ್ಟನರ್‌ ಶಿಪ್‌ ವ್ಯವಹಾರದಲ್ಲಿ ಜಯ ಸಿಗಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗಲಿದೆ. ಶತ್ರುಗಳು ಹಿಮ್ಮೆಟ್ಟಲಿದ್ದಾರೆ.