ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಸಂಪತ್ತು ವೃದ್ಧಿಗೆ ಮನೆ ಬಳಿ ಈ ಗಿಡಗಳನ್ನು ನೆಡಿ

Vastu tips for palnt: ವಾಸ್ತು ಶಾಸ್ತ್ರವನ್ನು ತಪ್ಪದೆ ಪಾಲಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತ್ರದ ಪ್ರಕಾರ ಅನಾದಿ ಕಾಲದಿಂದಲೂ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಇದರೊಂದಿಗೆ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವುದು ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಅಂತಹ ಗಿಡಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Shastra) ವಿಶೇಷ ಸ್ಥಾನಮಾನ ಇದೆ. ಮನೆ ಖರೀದಿ, ನಿರ್ಮಾಣದಿಂದ ಹಿಡಿದು ಮನೆಯಲ್ಲಿ ಇಡುವ ವಸ್ತುಗಳವರೆಗೆ ಎಲ್ಲದಕ್ಕೂ ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತದೆ. ಮನೆಯ ಖುಷಿ, ಸಮೃದ್ಧಿ, ಸಂಪತ್ತು ದುಪ್ಪಟ್ಟು ಮಾಡುವಲ್ಲಿ ವಾಸ್ತು ಬಹಳ ಪ್ರಮುಖ ಪಾತ್ರವಹಿಸುತ್ತದೆ. ವಾಸ್ತುವಿನ ನಿಯಮಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡ ಸಾಕಷ್ಟು ಶುಭ ಫಲಗಳನ್ನು ಪಡೆಯಬಹುದು. ಹಾಗಾಗಿ ಹೇಗೆ ಮನೆ ಕಟ್ಟುವಾಗ ಪ್ರತಿಯೊಂದು ಕೋಣೆಗಳು, ಅಡುಗೆ ಮನೆ ಎಲ್ಲದಕ್ಕೂ ವಾಸ್ತು ನೋಡಿತ್ತೀರೋ ಹಾಗೇ ನೀವು ಮನೆ ಮುಂದೆ, ಅಂಗಳದಲ್ಲಿ ಸಸಿಗಳನ್ನು ನೆಡವಾಗಲೂ ವಾಸ್ತುವಿನ ನಿಯಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ತಜ್ಞರು.

ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳನ್ನು ಮನೆಯ ಮುಖ್ಯದ್ವಾರದಲ್ಲಿ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ(Postive Energy ಯ ಓಡಾಟ ಹೆಚ್ಚಾಗುತ್ತದೆ. ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಇಂತಹ ಗಿಡಗಳು ಕೇವಲ ಆಕರ್ಷಕವಾಗಿ ಕಾಣೋದು ಮಾತ್ರವಲ್ಲದೆ ಮನೆಗೆ ಉತ್ತಮ ಲಾಭವನ್ನು ಕೂಡ ತಂದು ಕೊಡುತ್ತವೆ. ಅಂತಹ ಗಿಡಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಶ್ವತ್ಥ ಮರ

ಹಿಂದೂ ಧರ್ಮದಲ್ಲಿ ಅಶ್ವತ್ಥ ವೃಕ್ಷವನ್ನು ಬಹಳ ಶುಭವೆಂದು ಪರಿಗಣಿಸಲಾಗಿದ್ದು, ಪುರಾಣಗಳ ಪ್ರಕಾರ ಅಶ್ವತ್ಥ ಮರವನ್ನು ದೈವಿಕ ಮರ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೇವರು ಅಶ್ವತ್ಥ ಮರದಲ್ಲಿ ನೆಲೆಸುತ್ತಾನೆ ಎಂಬ ನಂಬಿಕೆ ಇದ್ದು, ಇದು ಮನೆಯಲ್ಲಿನ ನಕಾರಾತ್ಮಕ ತೆಗೆದುಹಾಕುತ್ತದೆ. ಮತ್ತು ಸಂತೋಷವನ್ನು ನೀಡುತ್ತದೆ. ಇದನ್ನು ಮನೆಯ ಮುಂದೆ ನೆಟ್ಟರೆ ಮನೆಯಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ. ಅಲ್ಲದೆ ಮನೆಯು ಸಂತೋಷ, ಶಾಂತಿ, ಸಂಪತ್ತು ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ ಎನ್ನಲಾಗುತ್ತದೆ.

ತೆಂಗಿನ ಮರ

ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಗೌರವ ಅಥವಾ ಯಶಸ್ಸನ್ನು ಪಡೆಯದಿದ್ದರೆ ನೀವು ತೆಂಗಿನ ಗಿಡವನ್ನು ನೆಡಬೇಕು. ಜ್ಯೋತಿಷ್ಯದ ಪ್ರಕಾರ ಮನೆಗೆ ತೆಂಗಿನ ಮರವೂ ಶುಭವಾಗಿ ಪರಿಣಮಿಸುತ್ತದೆ. ಮನೆ ಸಮೀಪ ತೆಂಗಿನ ಮರವನ್ನು ನೆಟ್ಟರೆ ಗೌರವವೂ ಹೆಚ್ಚಾಗುವುದೆಂಬ ನಂಬಿಕೆ ಇದೆ. ತೆಂಗಿನ ಮರ ನೆಟ್ಟರೆ ಜೀವನದ ಪ್ರತಿಯೊಂದು ಹಂತದಲ್ಲೂ ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಆದರೆ ಸಸ್ಯವನ್ನು ನೆಟ್ಟು ಬಿಡುವುದು ಮಾತ್ರವಲ್ಲದೇ ಅದರ ಕಾಳಜಿ ವಹಿಸುವುದೂ ಮುಖ್ಯ. ಈ ಮರವು ಬೆಳೆದಷ್ಟು ನೀವು ಅಭಿವೃದ್ಧಿ ಹೊಂದುವುದಲ್ಲದೇ ಗೌರವವನ್ನೂ ಪಡೆಯುವಿರಿ.

ಈ ಸುದ್ದಿಯನ್ನು ಓದಿ: Viral Video: ಅಂಗಡಿಯವನಿಗೆ ಮೆಣಸಿನ ಪುಡಿ ಎರಚಿ ಆಭರಣ ದೋಚಲು ಯತ್ನಿಸಿದ ಮಹಿಳೆ; ಸಿಕ್ಕಿಬಿದ್ದಿದ್ದು ಹೇಗೆ?

ನೆಲ್ಲಿಕಾಯಿ ಮರ

ಮನೆಯ ಮುಂದೆ ನೆಲ್ಲಿಕಾಯಿ ಗಿಡ/ಮರ ಇದ್ದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದು ಮನೆ ಮುಂದುಗಡೆ ಇದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಸುತ್ತಮುತ್ತ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಕಾಪಾಡುತ್ತದೆ.

ಬೇವಿನ ಮರ

ವಾಸ್ತು ಪ್ರಕಾರ, ಇದು ಕೂಡ ಅದೃಷ್ಟದ ಗಿಡವಾಗಿದ್ದು, ಈ ಶುಭ ಗಿಡ ಗಾಳಿಯನ್ನು ಶುದ್ಧೀಕರಿಸುತ್ತದೆ. ಈ ಗಿಡ ಯಾವುದೇ ರೀತಿಯ ವಾತಾವರಣದಲ್ಲೂ ಚೆನ್ನಾಗಿ ಬೆಳೆಯುತ್ತದೆ. ಅಲ್ಲದೇ ಈ ಬೇವಿನ ಮರದಲ್ಲಿ ದೈವಿಕ ಶಕ್ತಿಗಳು ನೆಲೆಯಾಗಿದ್ದು, ಬೇವಿನ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡವುದರಿಂದ ಪಿತೃದೋಷ ನಿವಾರಣೆಗೊಳ್ಳುತ್ತದೆ.

ಬಾಳೆ ಗಿಡ

ಬಾಳೆ ಗಿಡದಲ್ಲಿ ವಿಷ್ಣು ನೆಲೆಸಿದ್ದಾನೆ ಎಂದು ಹೇಳಲಾಗಿದ್ದು, ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆಯಲ್ಲಿ ಬಾಳೆ ಗಿಡ ನೆಡುವುದು ಯಾವಾಗಲೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಬಾಳೆ ಮರವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದ್ದು, ಈ ಗಿಡ ಮನೆಯಲ್ಲಿದ್ದರೆ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುದು. ಮನೆಯಲ್ಲಿ ಹಣ ಹಾಗೂ ಆಭರಣ ಇಡುವ ಕಡೆ ಈ ಗಿಡ ಇಟ್ಟರೆ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆ ಇದೆ.