ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ಸಾಲ ನೀಡುವ ಅಥವಾ ಪಡೆಯುವ ಮುನ್ನ ಚಾಣಕ್ಯನ ಈ ನಿಯಮಗಳನ್ನು ಪಾಲಿಸಿ

ಚಾಣಕ್ಯ ನೀತಿ ಪ್ರಕಾರ ಸಾಲ ಪಡೆಯುವುದು ದುರಭ್ಯಾಸ ಆಗಿದ್ದು, ಹಣವನ್ನು ಪಡೆಯುವ ಮುನ್ನ ಅದರ ಅಗತ್ಯತೆ ಇದೆಯೇ ಎಂದು ಯೋಚಿಸುವುದು ಮುಖ್ಯ ಆಗುತ್ತದೆ. ನಿವಾಜವಾಗಿಯೂ ನಿಮಗೆ ಸಾಲದ ಅವಶ್ಯಕತೆ ಇದೆಯಾ? ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯಾ? ಅದು ಇದ್ದಲ್ಲಿ ಮಾತ್ರ ಸಾಲ ಮಾಡಬೇಕು ಎಂದ ಹೇಳುತ್ತದೆ.

ಚಾಣಕ್ಯ

ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ಹಣ (Money)ದ ಅಗತ್ಯತೆ ಯಾರಿಗಿಲ್ಲ ಹೇಳಿ? ದಿನ ಬೆಳಗಾದರೆ ಒಂದಲ್ಲ ಒಂದು ಹಣದ ವಹಿವಾಟು (ransaction)ಗಳೂ ನಡೆಯುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಈ ಹಣದ ವಹಿವಾಟುಗಳು ವಿವಾದದ ಮೂಲವಾಗಳೂ ಆಗುತ್ತವೆ ಅಥವಾ ನಮ್ಮವರ ನಡುವೆಯೇ ಅಂತರವನ್ನು ಹೆಚ್ಚಿಸುತ್ತವೆ. ಆದ್ದರಿಂದ ಸಾಲ (Loan)ವನ್ನು ಪಡೆಯುವಾಗ ಹಾಗೂ ಸಾಲ ನೀಡುವಾಗ ಕೆಲವು ಅಗತ್ಯ ನಿಯಮಗಳನ್ನು ಅನುಸರಿಸಬೇಕು ಎಂದು ಚಾಣಕ್ಯ (Chanakya Niti) ನೀತಿಯೂ ಸ್ಪಷ್ಟವಾಗಿ ಹೇಳಿದೆ. ಇದು ಆರ್ಥಿಕ ಭದ್ರತೆಯನ್ನು ಒದಗಿಸುವುದಲ್ಲದೆ, ಸಂಬಂಧಗಳಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುಲು ನೆರವಾಗುತ್ತದೆ.

ಸಾಲ ಪಡೆಯುವ ಮುನ್ನ ಯೋಚಿಸಿ

ಸಾಲ ಪಡೆಯುವ ಮುನ್ನ ಅದರ ಅಗತ್ಯತೆ ಹಾಗೂ ಸಾಮರ್ಥ್ಯದ ನಿರ್ಣಯ ಅತೀ ಮುಖ್ಯ. ನಿವಾಜವಾಗಿಯೂ ನಿಮಗೆ ಸಾಲದ ಅಗತ್ಯತೆ ಇದೆಯಾ? ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಸಾಮರ್ಥ್ಯೆ ನಿಮ್ಮಲ್ಲಿ ಇದೆಯಾ? ಅದು ಇದ್ದಲ್ಲಿ ಮಾತ್ರ ಸಾಲ ಮಾಡಬೇಕು ಎಂದ ಚಾಣಕ್ಯ ನೀತಿ ಹೇಳುತ್ತದೆ. ಅತಿಯಾದ ಖರ್ಚು ಅಥವಾ ಯೋಜಿತವಲ್ಲದ ಸಾಲವು ಭವಿಷ್ಯದಲ್ಲಿ ಆರ್ಥಿಕ ತೊಂದರೆ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳುಮಾಡಬಹುದು. ಇದಲ್ಲದೆ ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಲದ ಮೂಲವನ್ನು ಪರಿಗಣಿಸುವುದು ಮುಖ್ಯ. ವಿಶ್ವಾಸಾರ್ಹ ಮೂಲಗಳಾದ ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ವಿಶ್ವಾಸಾರ್ಹ ಸ್ನೇಹಿತರಿಂದ ಸಾಲ ಪಡೆಯುವುದು ಯಾವಾಗಲೂ ಸುರಕ್ಷಿತವಾಗಿರುತ್ತದೆ ಎಂಬುದನ್ನು ಚಾಣಕ್ಯ ನೀತಿ ಹೇಳುತ್ತದೆ.

Chanakya Niti: ಪತಿಯಿಂದ ಪತ್ನಿ ಬಯಸೋದು ಈ ಗುಣಗಳನ್ನು ಮಾತ್ರ

ಸಾಲ ನೀಡುವ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತೆ

ಯಾವುದೇ ವ್ಯಕ್ತಿಗೆ ಸಾಲ ನೀಡುವಾಗ ಆ ವ್ಯಕ್ತಿಯು ವಿಶ್ವಾಸಾರ್ಹನೇ? ಮತ್ತು ಸಾಲು ಮರುಪಾವತಿಸಲು ಸಮರ್ಥನಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾನೆ. ಹಣವನ್ನು ಸಾಲವಾಗಿ ನೀಡುವಾಗ ಯಾವಗಲೂ ಅವಸರ ಮಾಡಬಾರದು, ಭಾವನೆಗಳಿಗೆ ಬಲಿಯಾಗಬಾರದು. ಬದಲಿಗೆ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇದಲ್ಲದೆ ನೀವು ನೀಡಿದ ಸಾಲಕ್ಕೆ ಲಿಖಿತ ದಾಖಲೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಚಾಣಕ್ಯ.

ಚಾಣಕ್ಯನ ಈ ನೀತಿಗಳು ಇಂದಿಗೂ ಪ್ರಸ್ತುತ

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಚಾಣಕ್ಯನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯನ ನೀತಿಯಂತೆ ಸಾಲ ತೆಗೆದುಕೊಳ್ಳುವ ಮೊದಲು ನಿಮ್ಮ ಅಗತ್ಯತೆಗಳು, ಮರುಪಾವತಿ ಯೋಜನೆ ಮತ್ತು ಮೂಲವನ್ನು ಮೌಲ್ಯಮಾಪನ ಮಾಡಿ. ಸಾಲ ನೀಡುವ ಮೊದಲು ವಿಶ್ವಾಸಾರ್ಹ ವ್ಯಕ್ತಿಯನ್ನು ಆರಿಸಿ ಮತ್ತು ಲಿಖಿತ ಪುರಾವೆಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಆರ್ಥಿಕ ಭದ್ರತೆ ಹೆಚ್ಚಾಗುವುದಲ್ಲದೆ ಸಾಲ ಕೊಟ್ಟವರೊಂದಿಗೆ ಯಾವುದೇ ಮನಸ್ತಾಪ ಉಂಟಾಗುವ ಪರಿಸ್ಥಿತಿ ಎದುರಾಗುವುದಿಲ್ಲ