ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chanakya Nit: ಈ ಕೆಲಸಗಳನ್ನ ಏಕಾಂತದಲ್ಲಿ ಮಾತ್ರ ಮಾಡಬೇಕು ಎನ್ನುತ್ತಾರೆ ಚಾಣಕ್ಯ!

ಚಾಣಕ್ಯರ ಪ್ರಕಾರ, ಏಕಾಂತವು ಮನಸ್ಸಿಗೆ ಸ್ಪಷ್ಟತೆ ನೀಡುವುದಷ್ಟೇ ಅಲ್ಲ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಹಾಗಾಗಿ ಕೆಲ ವಿಷಯಗಳನ್ನು ಏಕಾಂತದಲ್ಲಿ ಮಾಡುವುದು ಉತ್ತಮ ಎಂಬುದು ಅವರ ಸಲಹೆ. ಹಾಗಾದ್ರೆ, ಚಾಣಕ್ಯರು ಸೂಚಿಸಿದಂತೆ ಯಾವ ಕಾರ್ಯಗಳನ್ನು ಏಕಾಂತದಲ್ಲಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಚಾಣಕ್ಯ ನೀತಿ

ಬೆಂಗಳೂರು: ಮನುಷ್ಯನು ಸಹಜವಾಗಿ ಸಂಘಜೀವಿ. ಅವನು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಅಥವಾ ಕೆಲಸ ಆರಂಭಿಸುವಾಗಲೂ ಇತರರ ಸಲಹೆ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಚಾಣಕ್ಯ(Chanakya) ಅವರ ಮಾತಿನ ಪ್ರಕಾರ, ಕೆಲವು ವಿಷಯಗಳಲ್ಲಿ ಏಕಾಂತವೇ ಅತ್ಯುತ್ತಮ ಸಂಗಾತಿ. ಏಕಾಂತವು ಮನಸ್ಸಿಗೆ ಸ್ಪಷ್ಟತೆ ನೀಡುವುದಷ್ಟೇ ಅಲ್ಲ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ.

ಹಾಗಾದರೆ, ಚಾಣಕ್ಯರು ಸೂಚಿಸಿದಂತೆ ಯಾವ ಕಾರ್ಯಗಳನ್ನು ಏಕಾಂತದಲ್ಲಿ ಮಾಡುವುದು ಉತ್ತಮ ಎಂಬುದನ್ನು ನೋಡೋಣ ಬನ್ನಿ..

ಅಧ್ಯಯನ

ವಿದ್ಯೆ ಜೀವನದ ಆಸ್ತಿ. ಓದುತ್ತಿರುವಾಗ ಅಥವಾ ಹೊಸ ವಿಷಯಗಳನ್ನು ಕಲಿಯುವಾಗ, ಶಾಂತ ಮತ್ತು ಏಕಾಂತ ವಾತಾವರಣ ಅತ್ಯಗತ್ಯ. ಗದ್ದಲದ ನಡುವೆ ಓದಿದರೆ ಮನಸ್ಸು ಚದುರಿಹೋಗುತ್ತದೆ, ಕಲಿತದ್ದೂ ದೀರ್ಘಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ, ವಿದ್ಯಾರ್ಥಿಗಳು ಏಕಾಂತದಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚು ಫಲಿತಾಂಶ ಪಡೆಯಬಹುದು.

ಧ್ಯಾನ ಮತ್ತು ಪೂಜೆ

ಧ್ಯಾನ, ಜಪ ಅಥವಾ ದೇವರ ಆರಾಧನೆ ಮಾಡುವಾಗ ಮನಸ್ಸಿನ ಶಾಂತಿ ಮುಖ್ಯ. ಏಕಾಂತದಲ್ಲಿ ಮಾಡಿದ ಸಾಧನೆ ಮನಸ್ಸನ್ನು ಹೆಚ್ಚು ಕೇಂದ್ರೀಕೃತಗೊಳಿಸುತ್ತದೆ ಮತ್ತು ಆತ್ಮಸಂತೋಷವನ್ನು ಹೆಚ್ಚಿಸುತ್ತದೆ. ಇದರಿಂದ ಆಧ್ಯಾತ್ಮಿಕ ಅನುಭವವೂ ಗಾಢವಾಗುತ್ತದೆ.

Chanakya Niti: ಗೌರವ ಮತ್ತು ಯಶಸ್ಸು ಬೇಕಾದರೆ ಈ 5 ಸ್ಥಳಗಳಿಗೆ ಹೋಗಬೇಡಿ!

ಹಣಕಾಸಿನ ವ್ಯವಹಾರಗಳು

ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೌಪ್ಯತೆ ಅತ್ಯಂತ ಮುಖ್ಯ. ನಿಮ್ಮ ಆದಾಯ, ಖರ್ಚು ಅಥವಾ ಸಂಪತ್ತಿನ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ. ಏಕಾಂತದಲ್ಲಿ ಯೋಚಿಸಿ, ಯೋಜನೆ ಮಾಡಿ, ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಭದ್ರತೆ ಮತ್ತು ಶಾಂತಿಗಾಗಿ ಅಗತ್ಯ.

ಆಹಾರ ಸೇವನೆ

ಆಹಾರ ಸೇವಿಸುವುದು ಕೂಡ ಒಂದು ಶ್ರದ್ಧೆಯ ಕೆಲಸ. ಊಟ ಮಾಡುವಾಗ ಮನಸ್ಸು ಶಾಂತವಾಗಿರಬೇಕು. ಮಾತನಾಡುತ್ತಾ ಅಥವಾ ಬೇರೆ ವಿಚಾರಗಳಲ್ಲಿ ತೊಡಗಿಕೊಂಡು ತಿನ್ನುವುದರಿಂದ ಆಹಾರದ ಸಾರ್ಥಕತೆ ಕಡಿಮೆಯಾಗುತ್ತದೆ. ಏಕಾಂತದಲ್ಲಿ, ಮನಸ್ಸನ್ನು ಊಟದ ಮೇಲೆ ಕೇಂದ್ರೀಕರಿಸಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು.

ಹಾಗಾಗಿ ಏಕಾಂತವೆಂದರೆ ಒಂಟಿತನವಲ್ಲ; ಅದು ಸ್ವತಃ ನಿಮ್ಮೊಂದಿಗೆ ಕಳೆಯುವ ಅಮೂಲ್ಯ ಸಮಯ. ಸರಿಯಾದ ಸಂದರ್ಭಗಳಲ್ಲಿ ಏಕಾಂತವನ್ನು ಆರಿಸಿಕೊಂಡರೆ, ಜೀವನದಲ್ಲಿ ಸ್ಪಷ್ಟತೆ, ಶಾಂತಿ ಮತ್ತು ಯಶಸ್ಸು ದೊರೆಯುತ್ತದೆ ಎಂಬುರು ಚಾಣಕ್ಯರ ಸಲಹೆ..