ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರಿಸ್‌ಮಸ್‌ ಹಬ್ಬದ ಇತಿಹಾಸ, ಮಹತ್ವ, ಆಚರಣೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

ಕ್ರಿಸ್‌ಮಸ್‌ ವರ್ಷದ ಕೊನೆಯಲ್ಲಿ ಬರುವ ಬಹುದೊಡ್ಡ ಹಬ್ಬವಾಗಿದ್ದು, ಕ್ರೈಸ್ತರು ಡಿಸೆಂಬರ್ 24ರ ಮಧ್ಯರಾತ್ರಿಯಿಂದಲೇ ಚರ್ಚುಗಳಿಗೆ ತೆರಳಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನದ ಹಬ್ಬವೇ ಕ್ರಿಸ್‌ಮಸ್. ಶ್ರದ್ಧೆ, ಭಕ್ತಿ, ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದ ಇತಿಹಾಸ ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ಬಗ್ಗೆ ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಕ್ರಿಸ್‌ಮಸ್‌ (Christmas) ಹಬ್ಬವು ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪವಿತ್ರ ಹಾಗೂ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಡಿಸೆಂಬರ್ 25ರಂದು ಕ್ರಿಸ್‌ಮಸ್‌ ದಿನವನ್ನು ಆಚರಿಸಲಾಗುತ್ತದೆ. ಎಲ್ಲ ಕ್ರೈಸ್ತ ಭಾಂದವರು ತುಂಬಾ ಖುಷಿಯಿಂದ, ಭಕ್ತಿ- ಭಾವದಿಂದ ಒಟ್ಟಾಗಿ ಕ್ರಿಸ್ತನ ಜನುಮ ದಿನದ ಸಂಭ್ರಮನ್ನು ಆಚರಿಸುತ್ತಾರೆ. ವರ್ಷದ ಕೊನೆಯಲ್ಲಿ ಬರುವ ಬಹುದೊಡ್ಡ ಹಬ್ಬವಿದಾಗಿದ್ದು, ಕ್ರೈಸ್ತ ಬಂಧುಗಳು ಡಿಸೆಂಬರ್ 24ರ ಮಧ್ಯರಾತ್ರಿಯಿಂದಲೇ ಚರ್ಚುಗಳಿಗೆ ತೆರಳಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನದ ಹಬ್ಬವೇ ಕ್ರಿಸ್‌ಮಸ್ ಆಗಿದ್ದು, ಶ್ರದ್ಧೆ, ಭಕ್ತಿ, ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದ ಇತಿಹಾಸ(History )ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು(Importance) ಬಗ್ಗೆ ಇಲ್ಲಿದೆ ಮಾಹಿತಿ.

ಹಿನ್ನಲೆ ಏನು?

ಒಂದು ಕಾಲದಲ್ಲಿ ಕ್ರಿಸ್‌ಮಸ್‌ ಹಬ್ಬವು ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಕ್ರೈಸ್ತರ ಪ್ರಾಬಲ್ಯವಿದ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಇದು ವಿಶ್ವದಾದ್ಯಂತ ಆಚರಿಸಲಾಗುವ ಹಬ್ಬವಾಗಿ ಬೆಳೆದಿದೆ. ಮಾನವಕುಲವನ್ನು ಪಾಪದಿಂದ ರಕ್ಷಿಸಲು ದೇವರು ತನ್ನ ಮಗನಾದ ಏಸುಕ್ರಿಸ್ತನನ್ನು ಭೂಮಿಗೆ ಕಳುಹಿಸಿದನು ಎಂಬ ನಂಬಿಕೆ ಕ್ರೈಸ್ತ ಧರ್ಮದಲ್ಲಿ ಇದೆ. ಮಾನವ ಕಲ್ಯಾಣಕ್ಕಾಗಿ ಯೇಸು ಕ್ರಿಸ್ತನು ತನ್ನ ಪ್ರಾಣವನ್ನೇ ತ್ಯಾಗ ಮಾಡಿದನು ಎಂಬ ಭಾವನೆಯೇ ಕ್ರಿಸ್‌ಮಸ್‌ ಹಬ್ಬದ ಮೂಲ ಹಿನ್ನಲೆ.

ಕ್ರಿಸ್‌ಮಸ್ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅದ್ಭುತ ಸಂದೇಶಗಳು

ಇತಿಹಾಸ ಏನೇಳುತ್ತದೆ?

ಕ್ರಿಸ್‌ಮಸ್‌ ಆಚರಣೆಯ ಇತಿಹಾಸ ಹಲವು ಶತಮಾನಗಳ ಹಿಂದಿನದು. ಮೊದಲಿಗೆ ಈ ಹಬ್ಬವನ್ನು ರೋಮ್‌ನಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಕ್ರೈಸ್ತ ಧರ್ಮ ಪ್ರಚಲಿತಕ್ಕೆ ಬರಲು ಮುನ್ನ, ರೋಮ್‌ನಲ್ಲಿ ಡಿಸೆಂಬರ್ 25ರಂದು ಸೂರ್ಯ ದೇವರ ಜನ್ಮದಿನವನ್ನು ಆಚರಿಸುವ ಸಂಪ್ರದಾಯ ಇತ್ತು. ಆ ಕಾಲದಲ್ಲಿ ರೋಮನ್ ಚಕ್ರವರ್ತಿಗಳು ಸೂರ್ಯ ದೇವರನ್ನು ಪ್ರಮುಖ ದೇವತೆಯಾಗಿ ಪೂಜಿಸುತ್ತಿದ್ದರು.

ಕ್ರಿ.ಶ. 4ನೇ ಶತಮಾನಕ್ಕೆ ಬಂದಾಗ ರೋಮ್‌ನಲ್ಲಿ ಕ್ರೈಸ್ತ ಧರ್ಮ ವೇಗವಾಗಿ ವಿಸ್ತರಿಸಿತು. ಕ್ರಿ.ಶ. 336ರ ವೇಳೆಗೆ ಏಸುಕ್ರಿಸ್ತನನ್ನು ‘ಸೂರ್ಯನ ಅವತಾರ’ ಎಂದು ಒಪ್ಪಿಕೊಂಡ ಕ್ರೈಸ್ತರು, ಡಿಸೆಂಬರ್ 25ರಂದು ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಈ ದಿನ ಕ್ರಿಸ್‌ಮಸ್‌ ಹಬ್ಬವಾಗಿ ವಿಶ್ವದಾದ್ಯಂತ ಪ್ರಸಿದ್ಧಿಯಾಯಿತು.

ಮಹತ್ವ

ಕ್ರಿಸ್‌ಮಸ್‌ ಹಬ್ಬವನ್ನು ಒಳಿತಿನ ಗೆಲುವಿನ ಸಂಕೇತವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸಮುದಾಯಕ್ಕೆ ಇದು ಹೊಸ ಆರಂಭದ ದಿನವೆಂದು ಕೂಡಾ ಪರಿಗಣಿಸಲಾಗಿದೆ. ಪ್ರೀತಿ, ಶಾಂತಿ, ತ್ಯಾಗ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತದೆ.

ಇನ್ನು ಕ್ರಿಸ್‌ಮಸ್‌ಗೆ ಮುನ್ನದ ದಿನವಾದ ಡಿಸೆಂಬರ್ 24ರ ಮಧ್ಯರಾತ್ರಿ ಕ್ರೈಸ್ತರು ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ. ಏಸುಕ್ರಿಸ್ತನ ಜೀವನ, ತ್ಯಾಗ ಮತ್ತು ಮಾನವತೆಗೆ ನೀಡಿದ ಸಂದೇಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಡಿಸೆಂಬರ್ 25ರಂದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು, ಉಡುಗೊರೆಗಳನ್ನು ನೀಡುವುದು ಹಾಗೂ ಸಂಭ್ರಮಾಚರಣೆ ನಡೆಸುವುದು ಸಂಪ್ರದಾಯ.