ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷದ ಸಪ್ತಮಿ ತಿಥಿ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಗುರು ವಕ್ರಾ ಆರಂಭ ಮಾಡ್ತಾ ಇದ್ದಾನೆ. ಹಾಗಾಗಿ ಕೆಲವೊಂದು ರಾಶಿಗೆ ಬಹಳಷ್ಟು ಬದಲಾವಣೆ ಆಗಲಿದೆ. ಮೇಷ ರಾಶಿಯವರಿಗೆ ಕಾರ್ಯಕ್ಷೇತ್ರದ ಅವಕಾಶಗಳು ವಾಪಾಸ್ಸು ಒದಗಿ ಬರಬಹುದು. ಆದರೆ ಅಣ್ಣ- ತಮ್ಮಂದಿರ ಜೊತೆ ಗೊಂದಲ ಉಂಟಾಗುವ ಸಂದರ್ಭ ಬರಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಆಸ್ತಿ ಪಾಸ್ತಿ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ಧನ ಆಗಮನವಾಗುವ ಸಾಧ್ಯತೆ ಇದೆ. ಹಿಂದೆ ಕೈ ಬಿಟ್ಟು ಹೊಂದಂತಹ ಹಣ ಇಂದು ನಿಮ್ಮ ಪಾಲಿಗೆ ಬರುವ ಸಾಧ್ಯತೆ ಇದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ನಿಮ್ಮ ವ್ಯಕ್ತಿತ್ವಕ್ಕೆ ಇರುವಂತಹ ತೊಂದರೆ ಕಾಡಬಹುದು. ಅದನ್ನು ನೀವು ಸರಿಪಡಿಸಬೇಕಾಗುತ್ತದೆ. ಎಲ್ಲರ ಜೊತೆ ನೀವು ವಿನಯತೆಯಿಂದ ನಿಭಾಯಿಸಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಗುರು ವಕ್ರಿಯಾಗುವುದರಿಂದ ನಿಮ್ಮ ಮಿತೃತ್ವದಲ್ಲಿ ಉಂಟಾದ ಒಡಕುಗಳು ಕಾಡಬಹುದು. ಇದರಿಂದ ಬಹಳಷ್ಟು ವಿನಯತೆಯಿಂದ ನೀವು ಇರಬೇಕಾಗುತ್ತದೆ.
ಇದನ್ನು ಓದಿ: Vastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಗುರು ವಕ್ರಿಯಾಗುವುದರಿಂದ ಕೆಲವೊಂದು ವಿಷಯದಲ್ಲಿ ಶುಭ ಫಲಗಳು ಬರುತ್ತವೆ. ಕೆಲವು ಮಿತೃತ್ವದಲ್ಲಿ ಒಡಕುಗಳು ಉಂಟಾಗಿದ್ದನ್ನು ಸರಿಪಡಿಸಲು ಒಂದು ಅವಕಾಶ ಒದಗಿ ಬರಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿ ಗಳು ಹೆಚ್ಚಾಗಿ ಒಳಿತು ಆಗಲಿದೆ. ಕೆಲಸ ಕಾರ್ಯದಲ್ಲಿ ಗೌರವ ಹೆಚ್ಚಾಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಹಿಂದಿನ ದಿನ ಉಂಟಾದ ಮಿತೃತ್ವದಲ್ಲಿ ಸರಿ ಆಗಬಹುದು. ಮದುವೆ, ಸಂತಾನ ಪ್ರಾಪ್ತಿ ಇತ್ಯಾದಿ ಆಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿನ ಕ್ಷೇಷಕ್ಕೆ ಸಂಬಂಧಿಸಿದಂತೆ ತೊಂದರೆ ಉಂಟಾಗ ಬಹುದು. ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಹಿಂದಿನ ದಿನದಲ್ಲಿ ಒಡೆದು ಹೋದ ಮಿತೃತ್ವಗಳು ಸರಿ ಆಗಬಹುದು. ದಾಂಪತ್ಯ ಕೂಡ ಸರಿ ಹೋಗಬಹುದು.
ಮಕರ ರಾಶಿ: ಮಕರ ರಾಶಿ ಅವರಿಗೆ ಹಳೆಯ ಶತ್ರುತ್ವ ಮರುಕಳಿಸಬಹುದು. ಅದನ್ನು ಸಂಪೂರ್ಣ ವಾಗಿ ನಿಭಾಯಿಸಲು ನೀವು ಸಿದ್ದ ಇರಬೇಕು..
ಕುಂಭರಾಶಿ: ಕುಂಭ ರಾಶಿ ಅವರಿಗೆ ಒಳ್ಳೆಯ ಸಂದರ್ಭ ಮರುಕಳಿಸಬಹುದು. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಸಂತಾನ ಭಾಗ್ಯ, ಮದುವೆ ಭಾಗ್ಯ ಬರಬಹುದು.
ಮೀನ ರಾಶಿ: ಮೀನ ರಾಶಿ ಅವರಿಗೆ ಮನೆಯಲ್ಲಿ ಸುಖ ಸಂತೋಷದ ನೆಮ್ಮದಿ ಸಿಗಲಿದೆ. ನೀವು ಸರಿಯಾದ ರೀತಿಯಲ್ಲಿ ಕೆಲಸವನ್ನು ಮಾಡಿಕೊಂಡು ಭಗವಂತನಲ್ಲಿ ಮನನ ಮಾಡಿಕೊಂಡರೆ ಎಲ್ಲವೂ ಸರಿಯಾಗಲಿದೆ.