ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ, ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಚಿತ್ತ ನಕ್ಷತ್ರ ಇದ್ದು ಕೊನೆಯ ಕಾರ್ತಿಕ ಸೋಮವಾರವಾಗಿದೆ. ಹಾಗಾಗಿ ಎಲ್ಲ ರಾಶಿಯವರು ದೇವರಿಗೆ ದೀಪವನ್ನು ಹಚ್ಚುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಚಿತ್ತ ನಕ್ಷತ್ರದ ಅಧಿಪತಿ ಕುಜ ಆಗಿದ್ದಾನೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನ ವಾಗಿದೆ. ಶತ್ರುಗಳು ನಿಮ್ಮನ್ನು ಹೆಮ್ಮೆಟ್ಟಬಹುದು. ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲವನ್ನೂ ನೀವು ಸಾಧಿಸಬಹುದು.. ಆದರೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಪ್ರೇಮ, ಪ್ರೀತಿ,ದಾಂಪತ್ಯ ವಿಚಾರದಲ್ಲಿ ಸ್ವಲ್ಪ ಜಾಸ್ತಿನೇ ಬೇಸರ ಆಗಬಹುದು. ಆದ್ದರಿಂದ ಸ್ವಲ್ಪ ನೀವು ಗಂಭೀರವಾಗಿ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಬಿಸಿನೆಸ್ ವ್ಯವಹಾರದಲ್ಲಿ ಇಂದು ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಸಂಸಾರದ ವಿಚಾರದಲ್ಲಿ ಇಂದು ನೆಮ್ಮದಿ ಇರುವುದಿಲ್ಲ. ಕೋರ್ಟ್, ಕಛೇರಿ ವ್ಯವಹಾರ ಬಗ್ಗೆ ಇಂದು ಬೇಸರವಾಗಬಹುದು.ತಾಯಿಯ ಆರೋಗ್ಯದ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ವಹಿಸ ಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆ ಯಲ್ಲಿ ಹೆಚ್ಚಿನ ಯಶಸ್ಸು ನೀವು ಕಾಣು ತ್ತೀರಿ. ಸೋಷಿಯಲ್ ಮೀಡಿಯಾ,ಟಿವಿ ಇತ್ಯಾದಿಯಲ್ಲಿ ಕೆಲಸ ಮಾಡೋರಿಗೆ ಅತೀ ಹೆಚ್ಚಿನ ಪ್ರಗತಿ ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮನೆ ವ್ಯವಹಾರ ಬಗ್ಗೆ ಹೆಚ್ಚಿನ ತಲೆನೋವು ಇರುತ್ತದೆ. ಮನೆಯವರ ಜೊತೆ ಜಗಳ, ಮನಸ್ತಾಪ ಇಂದು ಆಗಬಹುದು. ನಿಮ್ಮ ಕೋಪವನ್ನು ನೀವು ಹತೋಟಿಗೆ ತರಲೇಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಅಂದುಕೊಂಡ ಕೆಲಸ ಕಾರ್ಯಗಳು ನಡೆಯಲಿದೆ. ಮುಖ್ಯವಾದ ವಿಚಾರದಲ್ಲಿ ಮುನ್ನಡೆಯನ್ನು ನೀವು ಕಾಣುತ್ತೀರಿ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ.ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಮುಖ್ಯವಾದ ನಿರ್ಧಾರದಲ್ಲಿ ಅತೀ ಹೆಚ್ಚಿನ ಒಡಕು ಕಾಣಬಹುದು. ತುಂಬಾನೇ ಜಗಳ ಆಗುವ ಪ್ರಮೇಯ ಒದಗಿ ಬರಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದ್ದು ಕಾರ್ಯಕ್ಷೇತ್ರದಲ್ಲಿ ಧನ ಆಗಮನಾಗಲಿದೆ. ನಿಮ್ಮ ಮಿತ್ರರಿಂದ ಅತೀ ಹೆಚ್ಚಿನ ಸಂತೋಷವನ್ನು ಗಳಿಸಬಹುದು. ಇಷ್ಟಾರ್ಥ ಸಿದ್ದಿಯಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ ಪ್ರಾಪ್ತಿ ಯಾಗುತ್ತದೆ. ಅತೀ ಹೆಚ್ಚಿನ ಜವಾಬ್ದಾರಿಗಳನ್ನು ನೀವು ನಿಭಾಯಿಸಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಭಾಗ್ಯೋದಯವಾಗಲಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಸಮಸ್ಯೆ ಎಲ್ಲವೂ ನಿವಾರಣೆಯಾಗಲಿದೆ. ಹಿಂದಿನ ಬೇಸರ ಎಲ್ಲವೂ ಬಗೆಹರಿಯಲಿದೆ.ಮುಂದಿನ ದಿನಗಳಿಗೆ ಉತ್ತಮ ಮಾರ್ಗ ದರ್ಶನ ಸಿಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದರೂ ಬೇರೆಯವರ ಬಗ್ಗೆ ಕ್ಲಿಷ್ಟಕರವಾದ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಬಹುದು. ಆದ್ದರಿಂದ ಅತೀ ಹೆಚ್ಚಿನ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ಕಡೆಯಿಂದ ಸಹಕಾರ ಸಿಗುತ್ತದೆ. ಬಹಳ ವಿವೇಚನೆಯಿಂದ ಕೆಲಸ ಕಾರ್ಯ ಗಳನ್ನು ಮಾಡುವುದು ಅಗತ್ಯವಾಗಿರುತ್ತದೆ.