ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷದ ಚತುರ್ಥಿ ತಿಥಿ, ಆರ್ದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಬುಧ ವಕ್ರಿ ಇದ್ದ ಕಾರಣ ಮೇಷ ರಾಶಿ ಅವರಿಗೆ ಈ ದಿನ ದಾಂಪತ್ಯ ಜೀವನದಲ್ಲಿ, ಪ್ರೀತಿ ಪ್ರೇಮ ಪ್ರಕರಣದಲ್ಲಿ ಕಲಹ ಉಂಟಾಗಬಹುದು. ಹೀಗಾಗಿ ಈ ದಿನ ಸಾಕಷ್ಟು ಮಾನಸಿಕ ಕಿರಿಕಿರಿ ನೀವು ಅನುಭವಿಸಲಿರುವ ಕಾರಣ ಕ್ಲಿಷ್ಟಕರವಾದ ದಿನ ಇದಾಗಲಿದೆ. ಮುಖ್ಯವಾದ ವಿಚಾರಗಳಿಗೆ ನಿಮಗೆ ಬೇಕಾದ ಸಹಕಾರ ಇಂದು ಸಿಗಲಾರದು. ಪ್ರೀತಿ ಪಾತ್ರರಿಂದ ನೋವು ಉಂಟಾಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಬುಧನು ವಕ್ರಿಯಾಗಿದ್ದು ಧನಾತ್ಮಕವಾಗಿ ಪರಿಣಾಮ ಬೀರಲಿದೆ. ಈ ದಿನ ಮುಖ್ಯವಾದ ತೊಂದರೆ ತಾಪತ್ರಯ ಎಲ್ಲವೂ ಬಗೆಹರಿಯಲಿದೆ. ಹೀಗಾಗು ಈ ದಿನ ನಿಮಗೆ ಅತ್ಯುತ್ತಮವಾದ ದಿನವಾಗುತ್ತದೆ. ಮನಸ್ಸಿಗೆ ನೆಮ್ಮದಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಕ್ಲಿಷ್ಟಕರವಾದ ದಿನವಾಗಿದೆ. ದಾಂಪತ್ಯ ಜೀವನ, ಪ್ರೇಮ , ಪ್ರೀತಿ ಇತ್ಯಾದಿ ವಿಚಾರದಲ್ಲಿ ಜಾಸ್ತಿ ಕಿರಿಕಿರಿ ಸಮಸ್ಯೆ ಉಂಟಾಗಲಿದೆ. ನೀವು ಅಂದು ಕೊಂಡ ಕೆಲಸಗಳಿಗೆ ಅನಗತ್ಯ ಸಮಸ್ಯೆ, ಗೊಂದಲ ಏರ್ಪಡಲಿದೆ. ಯಾವುದೆ ಹೊಸ ಯೋಜನೆ ಈ ದಿನ ಮಾಡುವುದು ಬೇಡ. ಸಂಸಾರ, ಪ್ರೀತಿ ,ಪ್ರೇಮ ಇತ್ಯಾದಿ ವಿಚಾರದಲ್ಲಿ ಸಾಕಷ್ಟು ಗಮನ ಹರಿಸಿ ಮುನ್ನಡೆದರೆ ಉತ್ತಮ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಮಿಶ್ರ ಫಲ ಇರಲಿದೆ. ಈ ಹಿಂದಿನ ಗೊಂದಲ, ವೈಮಸ್ಸು ಎಲ್ಲ ಸಮಸ್ಯೆ ಈಗ ಪರಿಹಾರ ಆಗಲಿದೆ. ದಿನವಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ನೆಮ್ಮದಿ ಗೌರವ ಪ್ರಾಪ್ತವಾಗಲಿದೆ. ಸಂಸಾರ ತಾಪತ್ರಯ ಇತ್ಯಾದಿ ಸಮಸ್ಯೆ ಕೂಡ , ಕುಟುಂಬದ ವ್ಯಾಜ್ಯ ಇತ್ಯಾದಿ ಬಗೆಹರಿಯಲಿದೆ. ಅನಿರೀಕ್ಷಿತ ಧನಾಗಮನ ಆಗಲಿದೆ. ಆರೋಗ್ಯ ಸಮಸ್ಯೆ ಈ ದಿನ ಕಾಡುವ ಸಾಧ್ಯತೆ ಇದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಬುಧನು ವಕ್ರಿಯಾಗಿದ್ದು ಈ ದಿನ ಕ್ಲಿಷ್ಟಕರವಾದ ದಿನವಾಗಿದೆ. ವ್ಯಾಪಾರ, ವ್ಯವಹಾರ , ಕುಟುಂಬ ಸಂಬಂಧಗಳಿಂದ ಅನೇಕ ವಿಚಾರದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಗುರುಹಿರಿಯರ ನಿಂಧನೆ ಮಾಡುವ ಪ್ರಸಂಗಗಳು ಎದುರಾಗಬಹುದು ಹೀಗಾಗಿ ಸಾಧ್ಯವಾದಷ್ಟು ಆಲೋಚನೆಯಿಂದ ಮಾತುಕತೆ ನಡೆಸಿದರೆ ಬಹಳ ಉತ್ತಮ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಬುಧನು ವಕ್ರನಾಗಿದ್ದು ಧನಾತ್ಮಕ ಫಲಿತಾಂಶ ಗೋಚರಿಸಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಉಂಟಾದ ಗೊಂದಲ , ವೈಮನಸ್ಸು ದೂರಾಗಲಿದೆ, ನೆಮ್ಮದಿ ಪ್ರಾಪ್ತಿಯಾಗಲಿದೆ. ಸಹೋದರಿ, ಸಹೋದರರಿಂದ ಹೆಚ್ಚಿನ ನೆಮ್ಮದಿ , ಗೌರವ ಪ್ರಾಪ್ತಿಯಾಗಲಿದೆ. ಸಂಸಾರ ತಾಪತ್ರಯ ಇತ್ಯಾದಿ ಸಮಸ್ಯೆ ಪರಿಹಾರವಾಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಬುಧ ವಕ್ರಿಯಾಗಿರುವುದು ಸಂಸಾರ ವಿಚಾರಗಳಿಗೆ ಅಧಿಕ ಮಹತ್ವ ನೀಡಬೇಕು. ಕಾರ್ಯಕ್ಷೇತ್ರದಲ್ಲಿ ಇಂದು ಸ್ವಲ್ಪ ಕ್ಲಿಷ್ಟಕರವಾದ ದಿನ ಎಂದು ಹೇಳಬಹುದು. ಇಂದು ಅನಿರೀಕ್ಷಿತ ಧನವ್ಯಯವಾಗಲಿದೆ. ವ್ಯಾಪಾರ , ವ್ಯವಹಾರ ಹಾಗೂ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಯೋಚಿಸಬೇಕಾದ ಪರಿಸ್ಥಿತಿ ಬರಲಿದೆ. ಹಳೆ ಕಿರಿಕಿರಿ ಮಾನಸಿಕ ಸಮಸ್ಯೆ ಎಲ್ಲ ಪುನಃ ಕಾಡುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಕ್ಲಿಷ್ಟಕರವಾದ ದಿನವಾಗಿದೆ. ಸ್ನೇಹಿತರು, ಹಿತೈಷಿಗಳ ನಡುವೆ ವೈಮನಸ್ಸು ಮೂಡಲಿದೆ. ಮಿತ್ರತ್ವ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಹಣ ವ್ಯಯ ಆಗುವ ಸಾಧ್ಯತೆ ಇದೆ. ಅನಗತ್ಯವಾಗಿ ನಿಂಧನೆ ಅಪಮಾನಗಳಿಗೆ ನೀವು ಗುರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ವ್ಯಾಪಾರ ವ್ಯವಹಾರದಿಂದ ಆದಷ್ಟು ಜಾಗೃತೆ ವಹಿಸಿರಿ.
ಕುಂಭ ರಾಶಿಓದಿ:Vastu Tips: ನಿಮ್ಮ ಮನೆಯ ಸ್ನಾನಗೃಹ ಯಾವ ದಿಕ್ಕಿನಲ್ಲಿದೆ? ಈ ದಿಕ್ಕಿನಲ್ಲಿದ್ದರೆ ಅನಾರೋಗ್ಯ ತಪ್ಪಿದ್ದಲ್ಲ
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಉತ್ತಮವಾಗಿ ಇರಲಾರದು. ವ್ಯಾಪಾರ ವ್ಯವಹಾರ, ಪ್ರೀತಿ ಸಂಬಂಧದಲ್ಲಿ ಜಗಳ, ಮನಸ್ಥಾಪ ಉಂಟಾಗುವ ಸಾಧ್ಯತೆ ಇದೆ. ಈ ದಿನ ಯಾವುದೇ ಮುಖ್ಯ ವಿಚಾರಗಳ ನಿರ್ಣಯ ತೆಗೆದುಕೊಳ್ಳುವುದು ಬೇಡ. ಮಿತ್ರರಿಂದ ಸಂಬಂಧ ಹಾಳಾಗಿ ವೈಮನಸ್ಸು ಉಂಟಾಗಲಿದೆ. ಹೀಗಾಗಿ ವ್ಯವಹರಿಸುವಾಗ ಸಂವಹನ ಮಾಡುವಾಗ ಆದಷ್ಟು ಜಾಗರೂಕತೆಯಿಂದ ಇರಬೇಕು.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬುಧನು ವಕ್ರಿಯಾಗಿದ್ದರೂ ಕೂಡ ಅತ್ಯುತ್ತಮವಾದ ದಿನವಾಗಿ ಗೋಚರವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಅಂದುಕೊಂಡ ಕೆಲಸ ಕಾರ್ಯ ಸಾಗಲಿದ್ದು ಧನಾಗಮನವಾಗಲಿದೆ. ಕೆಲಸ ಕಾರ್ಯ ಎಲ್ಲವೂ ಈಗ ಸರಾಗವಾಗಿ ಆಗಲಿದೆ. ಹಳೆಯ ವೈಮನಸ್ಸು ಎಲ್ಲವೂ ದೂರಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೆಲವು ಅವಕಾಶಗಳನ್ನು ಬಳಸುವ ವಿಚಾರಕ್ಕೆ ಸಾಕಷ್ಟು ಜಾಗೃತಿಯಿಂದ ಇರಬೇಕು.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಸ್ವಲ್ಪ ಕಡಿಮೆಯಾಗಲಿದೆ. ಈ ದಿನ ನಿಮ್ಮ ಆಪ್ತರ ಸಹಕಾರ ಸಿಗಲಿದ್ದು ಭಾಗ್ಯೋದಯವಾಗಲಿದೆ. ವ್ಯಾಪಾರ ವ್ಯವಹಾರ ಎಲ್ಲ ವಿಚಾರದಲ್ಲೂ ಆದಷ್ಟು ಜಾಗೃತೆಯಿಂದ ವ್ಯವಹರಿಸಬೇಕು. ಈ ದಿನ ಮಾತಿನ ಮೇಲೆ ಆದಷ್ಟು ಹಿಡಿತ ಕಾಯ್ದುಕೊಳ್ಳಬೇಕು. ಧ್ಯಾನ , ಯೋಗ, ಮಂತ್ರ ಪಠಣೆ ಇಂತವುಗಳನ್ನು ಮಾಡುವುದರಿಂದ ಮಾನಸಿಕ ಖಿನ್ನತೆಯ ಸಮಸ್ಯೆ ಕಡಿಮೆಯಾಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಉತ್ತಮ ಫಲ ಇರಲಿದೆ. ಮನಸ್ಸಿಗೆ ಸಾಕಷ್ಟು ಗೊಂದಲಗಳು ದೂರಾಗಿ ನೆಮ್ಮದಿ ಪ್ರಾಪ್ತಿಯಾಗಲಿದೆ. ಕೆಲವು ಸಮಸ್ಯೆಗಳು ಉದ್ಭವಿಸಿದರೂ ಶೀಘ್ರವೇ ಆ ಸಮಸ್ಯೆ ಪರಿಹಾರ ಕಾಣಲಿದೆ. ವ್ಯಾಪಾರ ವ್ಯವಹಾರ ಇತರ ಮಾತುಕತೆಯಲ್ಲಿ ತುಂಬಾ ಜಾಗರೂಕತೆಯಿಂದ, ವಿವೇಕಯುತವಾಗಿ ವ್ಯವಹರಿಸಬೇಕು. ಯಾವುದೆ ವಿಚಾರ ನಿರ್ಲಕ್ಷಿಸದೆ ಪರಮರ್ಶಿಸಿದರೆ ಅನೇಕ ಗೊಂದಲಗಳು ಕೂಡ ಬಗೆಹರಿಯಲಿದೆ.