Vastu Tips: ನಿಮ್ಮ ಮನೆಯ ಸ್ನಾನಗೃಹ ಯಾವ ದಿಕ್ಕಿನಲ್ಲಿದೆ? ಈ ದಿಕ್ಕಿನಲ್ಲಿದ್ದರೆ ಅನಾರೋಗ್ಯ ತಪ್ಪಿದ್ದಲ್ಲ
Vastu Tips for Toilets: ಸ್ನಾನಗೃಹಗಳು ಮತ್ತು ಶೌಚಾಲಯಗಳು ನಕಾರಾತ್ಮಕತೆಯನ್ನು ಸೃಷ್ಟಿಸುತ್ತವೆ ಮತ್ತು ಈ ಸ್ಥಳಗಳ ಪರಿಣಾಮದಿಂದಾಗಿ, ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಇದರೊಂದಿಗೆ, ಮನೆಯ ಸದಸ್ಯರ ಆರೋಗ್ಯವು ಆಗಾಗ ಹದಗೆಡಬಹುದು. ಅದಕ್ಕಾಗಿಯೇ ಈ ಸ್ಥಳಗಳನ್ನು ವಾಸ್ತುಪ್ರಕಾರವೇ ನಿರ್ಮಿಸುವುದು ಒಳ್ಳೆಯದು.
ಸಾಂದರ್ಭಿಕ ಚಿತ್ರ -
ಬೆಂಗಳೂರು: ನಮ್ಮ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ(Vastu Shasthra) ಹೆಚ್ಚಿನ ಮಹತ್ವ ಇದ್ದು, ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಕೋಣೆಗಳೂ ವಾಸ್ತು ನಿಯಮದ(Vastu Tips) ಪ್ರಕಾರ ಇರಬೇಕು, ಇದಕ್ಕೆ ಅಡುಗೆ ಕೋಣೆಯೂ ಹೊರತಾಗಿಲ್ಲ. ಹೇಗೆ ಮನೆಯ ಮುಖ್ಯ ದ್ವಾರ, ದೇವಾಲಯ, ಮಲಗುವ ಕೋಣೆಯನ್ನು ನಿರ್ಮಿಸುವಾಗ ವಾಸ್ತು ನಿಯಮಗಳನ್ನು ಅನುಸರಿಸಬೇಕೋ ಹಾಗೇ ಸ್ನಾನಗೃಹ ಕಟ್ಟುವಾಗಲು ವಾಸ್ತುವನ್ನು ನೋಡಿಕೊಂಡು ನಿರ್ಮಿಸುವುದು ಒಳ್ಳೆಯದು.
ಅದರಲ್ಲೂ ಮನೆಯಲ್ಲಿರುವ ಸ್ನಾನಗೃಹಕ್ಕೆ ವಿಶೇಷ ವಾಸ್ತು ನಿಯಮಗಳಿದ್ದು, ಈ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿಯ (Negative Energy) ಪ್ರಭಾವ ಹೆಚ್ಚಿರುತ್ತದೆ. ಹಾಗಾಗಿ ಬಾತ್ ರೂಮ್ ನಿರ್ಮಿಸುವಾಗ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ.
ಅಲ್ಲದೇ ವಾಸ್ತುವನ್ನು ಸರಿಯಾಗಿ ಬಳಸಿಕೊಂಡು ಶೌಚ ಗೃಹವನ್ನು ನಿರ್ಮಿಸಿದ್ದರೆ ನಕಾರಾತ್ಮಕ ವಿಷಯಗಳಿಂದ ರಕ್ಷಣೆಯನ್ನೂ ಪಡೆಯಬಹುದು. ವಾಸ್ತು ಪ್ರಕಾರ, ಸ್ನಾನಗೃಹಕ್ಕೆ ಸಂಬಂಧಿಸಿದ ಕೆಲವು ವಿಷಯಗಳತ್ತ ಗಮನ ಹರಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಬಾತ್‌ರೂಮ್ ವಾಸ್ತುವಿಗೆ ಸಂಬಂಧಿಸಿದಂತೆ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ಈ ಕೆಳಗಿದೆ.
ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು
ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಬಾತ್‌ರೂಂ ಅನ್ನು ನಿರ್ಮಿಸಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿತವಾಗಿದ್ದು, ಟಾಯ್ಲೆಟ್ ಸೀಟ್ ಪಶ್ಟಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರದ್ದರೆ ಸೂಕ್ತ ಎಂದು ಹೇಳಲಾಗಿದೆ.
ತಪ್ಪಿಯೂ ಈ ದಿಕ್ಕಿನಲ್ಲಿ ಕಟ್ಟಬೇಡಿ
ಮನೆಯಲ್ಲಿ ಶೌಚಗೃಹ ಕಟ್ಟಲು ತಪ್ಪಿಯೂ
ದಕ್ಷಿಣ ಅಥವಾ ಆಗ್ನೇಯ ಇಲ್ಲವೇ ನೈಋತ್ಯ ದಿನಕ್ಕನ್ನೂ ಆಯ್ಕೆ ಮಾಡಿಕೊಳ್ಳಬೇಡಿ. ವಾಸ್ತು ಪ್ರಕಾರ ಅಡಿಗೆ ಮತ್ತು ಸ್ನಾನಗೃಹ ಎಂದಿಗೂ ಪರಸ್ಪರ ವಿರುದ್ಧವಾಗಿ ಅಥವಾ ಪಕ್ಕದಲ್ಲಿ ಇರಬಾರದು.
ಖಾಲಿ ಬಕೆಟ್ ಇಡಬೇಡಿ
ವಾಸ್ತುಶಾಸ್ತ್ರದ ಪ್ರಕಾರ ವಾಶ್ ರೂಮ್ ಅಲ್ಲಿ ಖಾಲಿ ಬಕೆಟ್ ಇಡುವುದು ಅಶುಭ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬೆಳಗ್ಗೆ ಎದ್ದು ಖಾಲಿ ಬಕೆಟ್ ನೋಡಿದಾಗ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರಲಿದೆ ಎಂದು ನಂಬಲಾಗಿದೆ. ಹಾಗಾಗಿ ಸ್ನಾನಗೃಹದಲ್ಲಿರುವ ಬಕೆಟ್ ಅಥವಾ ಟಬ್ ಯಾವಾಗಲೂ ನೀರಿನಿಂದ ತುಂಬಿರುವಂತೆ ನೋಡಿಕೊಳ್ಳಿ.
ಈ ಸುದ್ದಿಯನ್ನು ಓದಿ : Vastu Tips: ಮಹಡಿ ಮೆಟ್ಟಿಲುಗಳ ಕೆಳಗೆ ಇವು ಇರಲೇಬಾರದು
ಗಾಢವಾದ ಬಣ್ಣ ಬಾಹಿರ
ಬಾತ್‌ರೂಂಗೆ ಎಂದಿಗೂ ಗಾಢವಾದ ಬಣ್ಣಗಳನ್ನು ಆಯ್ಕೆ ಮಾಡಬೇಡಿ. ಅದಷ್ಟು ತಿಳಿ ಬಣ್ಣಗಳಿರಲಿ. ವಾಸ್ತು ಪ್ರಕಾರ ಬಾತ್‌ರೂಂಗೆ ನೀಲಿ ಬಣ್ಣ ಸೂಕ್ತವಾಗಿದ್ದು, ಇದು ಸಂತೋಷದ ಸಂಕೇತವಾಗಿದೆ. ಇನ್ನು ಬಳಸುವ ಬಣ್ಣಗಳನ್ನು ಸರಿಯಾಗಿ ಆಯ್ಕೆ ಮಾಡಬೇಕು. ತಿಳಿ ಬಣ್ಣಗಳನ್ನೇ ಆಯ್ಕೆ ಮಾಡಬೇಕು. ಸ್ವಿಚ್ ಬೋರ್ಡ್, ಗೀಸರ್ ಸೇರಿದಂತೆ ಮುಂದಾತ ವಸ್ತುಗಳು ಆಗ್ನೇಯ ದಿಕ್ಕಿನಲ್ಲಿ ಇಡಬೇಕು.
ಕಿಟಕಿ ಅಳವಡಿಸುವುದನ್ನು ಮರೆಯಬೇಡಿ
ಶೌಚ ಗೃಹ ನಿರ್ಮಿಸುವಾಗ ಅದಕ್ಕೆ ಕಿಟಕಿಗಳನ್ನು ಅಳವಡಿಸುವುದನ್ನು ಮರೆಯಬೇಡಿ. ಪೂರ್ವ, ಉತ್ತರ ಅಥವಾ ಪಶ್ಟಿಮಕ್ಕೆ ಕಿಟಕಿಯ ಮುಖ ಭಾಗ ಬರುವಂತೆ ಹಾಕಿಸಿ. ಇದರಿಂದ ಒಂದು ಸದುಪಯೋಗ ಇದ್ದು, ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ಓಡಿಸಲು ಈ ಕಿಟಕಿ ನೆರವಾಗಲಿದ್ದು, ಸಂಕಷ್ಟಗಳು ದೂರ ಆಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.