ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ಉತ್ತರ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಉತ್ತರ ಪಾಲ್ಗುಣಿ ನಕ್ಷತ್ರದ ಅಧಿಪತಿ ರವಿ ಆಗಿದ್ದಾನೆ. ಹಾಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಇಂದು ಮಧ್ಯಾಹ್ನದವರೆಗೂ ಕೂಡ ನಾನಾ ರೀತಿಯ ಚಿಂತನೆಗಳು ಬರುತ್ತವೆ. ಮನೆಯ ವಿಚಾರ ಹಣಕಾಸಿನ ವಿಚಾರದಲ್ಲಿ ತೊಂದರೆ ಇರುತ್ತದೆ. ಮಧ್ಯಾಹ್ನ ಬಳಿಕ ಸಾಮಾಜಿಕವಾಗಿ ಜಯವನ್ನು ಕಾಣುತ್ತೀರಿ. ಶತ್ರುಗಳನ್ನು ಕೂಡ ಹಿಮ್ಮೆಟ್ಟಲಿದ್ದೀರಿ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಕೂಡ ತಾಯಿಯ ಆರೋಗ್ಯ, ಮನೆಯ ಜವಾಬ್ದಾರಿಗಳು ಕಾಡುತ್ತವೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ನಿಮ್ಮ ಬುದ್ದಿವಂತಿಕೆ ಉಪಯೋಗಿಸಿ ಯಶಸ್ಸು ಕಾಣುತ್ತೀರಿ
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೂ ಮಧ್ಯಾಹ್ನವರೆಗೂ ಉತ್ತಮವಾದ ದಿನ ವಾಗಿದೆ. ಎಲ್ಲ ಕೆಲಸ ಕಾರ್ಯ ಚಟುವಟಿಕೆಯಲ್ಲಿ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ತಾಯಿಯ ಆರೋಗ್ಯ ಹಾಗೂ ಮನೆಯ ವಿಚಾರವಾಗಿ ನೀವು ಗಮನ ನೀಡಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸಂಸಾ ರದ ವಿಚಾರದಲ್ಲಿ ಮನಸ್ಸಿಗೆ ಸ್ವಲ್ಪ ಕ್ಷೇಷ ಇರುತ್ತದೆ.ಮಧ್ಯಾಹ್ನ ಬಳಿಕ ಬಂಧು ಮಿತ್ರರ ಸಮಗಮದಿಂದ ಎಲ್ಲ ಯೋಚನೆಗಳಿಗೂ ಪರಿಹಾರ ದೊರಕುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರು ಮಧ್ಯಾಹ್ನವರೆಗೂ ನೀವು ನಿಮ್ಮ ಬಗ್ಗೆಯೇ ಯೋಚನೆ ಮಾಡಬೇಕಾಗುತ್ತದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿಯನ್ನು ಕಾಣುತ್ತೀರಿ. ಅದೇ ನೆಮ್ಮದಿಯನ್ನು ನೀವು ಮಧ್ಯಾಹ್ನ ಬಳಿಕ ಕುಟುಂಬದ ಜೊತೆ ಹಂಚಿ ಸಂತೋಷವನ್ನು ಕಾಣುತ್ತೀರಿ.
Vastu Tips: ತುಳಸಿ ಕಟ್ಟೆಯ ಬಳಿ ಈ ಗಿಡಗಳನ್ನು ನೆಡಿ; ಹಣದ ಸಮಸ್ಯೆ ನಿಮ್ಮ ಬಳಿ ಸುಳಿಯುವುದೂ ಇಲ್ಲ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರದಲ್ಲಿ ಯಾವುದೇ ವಿಚಾರಗಳು ನಿಮ್ಮ ಪರ ನಡೆಯುದಿಲ್ಲ. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮುಂದೆ ಏನು ಮಾಡಬೇಕು ಎನ್ನುವ ಮಾರ್ಗದರ್ಶನ ನಿಮಗೆ ದೊರೆಯುತ್ತದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಆದರೂ ಕೂಡ ಮಿತ್ರರ ಸಹಕಾರ ದಿಂದ ನಿಮಗೆ ಒಳಿತು ಆಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ. ಎಲ್ಲವನ್ನೂ ಕಳೆದು ಕೊಳ್ಳುವ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಇರುತ್ತದೆ. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರಲಿದೆ. ಮಿತ್ರರಿಂದ ಧನ ಆಗಮನದ ಸೂಚನೆ ಕೂಡ ಇದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರು ಮಧ್ಯಾಹ್ನ ವರೆಗೂ ಅನೇಕ ರೀತಿಯ ಅಡೆ- ತಡೆಯನ್ನು ನೀವು ನೋಡಬಹುದು.ಮಧ್ಯಾಹ್ನ ಬಳಿಕ ಎಲ್ಲವೂ ಬಗೆಹರಿದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ದೊರಕುತ್ತದೆ..
ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಕೂಡ ಮನಸ್ಸಿಗೆ ಕ್ಷೇಷ ಕಂಡು ಬರುತ್ತದೆ. ಮಧ್ಯಾಹ್ನ ಬಳಿಕ ಭಾಗ್ಯೋದಯವಾದ ದಿನವಾಗುತ್ತದೆ.
ಕುಂಭರಾಶಿ: ಕುಂಭ ರಾಶಿ ಅವರಿಗೂ ಮಧ್ಯಾಹ್ನ ವರೆಗೂ ಬಹಳಷ್ಟು ಉತ್ತಮವಾದ ದಿನ ವಾಗಿದೆ. ಮಧ್ಯಾಹ್ನ ಬಳಿಕ ನಿಮ್ಮ ಸ್ನೇಹಿತರಿಂದ ಮನಸ್ತಾಪ ಉಂಟಾಗಬಹುದು. ಆದರೆ ಧಾನ್ಯದಿಗಳನ್ನು ಮಾಡಿ ನೀವು ಸಮಯ ಕಳೆಯಬೇಕಾಗುತ್ತದೆ
ಮೀನ ರಾಶಿ: ಮೀನ ರಾಶಿ ಅವರಿಗೂ ಉತ್ತಮವಾದ ದಿನ ವಾಗಿದೆ. ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಸಾಮಾಜಿಕ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.