ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 21st: ಇಂದು ಈ ರಾಶಿಯವರು ಮುಖ್ಯ ನಿರ್ಧಾರ ಮಾಡುವಾಗ ಜಾಗೃತರಾಗಿರಿ!

ನಿತ್ಯ ಭವಿಷ್ಯ ಡಿಸೆಂಬರ್ 21, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಪೌಸ ಮಾಸೆ, ಶುಕ್ಷ ಪಕ್ಷದ, ಪ್ರತಿಪಾ ತಿಥಿ ,ಪೂರ್ವಾಷಾಡ ನಕ್ಷತ್ರದ ಡಿಸೆಂಬರ್ 21 ನೇ ತಾರೀಖಿನ ಭಾನು ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

(ಸಂಗ್ರಹ ಚಿತ್ರ)

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ ಕೃಷ್ಣ ಪಕ್ಷದ, ಪ್ರತಿಪಾ ತಿಥಿ ಪೂರ್ವಾಷಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಪೂರ್ವಾಷಢ ನಕ್ಷತ್ರದ ಅಧಿಪತಿ ಶುಕ್ರ. ಹಾಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರುತ್ತದೆ. ಹಿಂದಿನ ನಾಲ್ಕು ದಿನಗಳಲ್ಲಿ ಇದ್ದ ಮನಸ್ಸಿನ ಕ್ಲೇಷ ಎಲ್ಲವೂ ಮಯವಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಕ್ಲಿಷ್ಟಕರವಾದ ದುನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಇಂದು ಬೇಡ. ಮನಸ್ಸಿನಲ್ಲಿ ಆತಂಕಗಳು ಬರುವ ಸಾಧ್ಯತೆಗಳು ಕೂಡ ಹೆಚ್ಚು ಇದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾದ ದಿನವಾಗಿದೆ.ಪ್ರೀತಿ ಪಾತ್ರರಿಂದ ಎಲ್ಲ ರೀತಿಯ ಸಹಕಾರ ನಿಮಗೆ ಸಿಗುತ್ತದೆ. ದಾಂಪತ್ಯದಲ್ಲಿ ಕೂಡ ಹೆಚ್ಚಿನ ನೆಮ್ಮದಿ ಇದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಿಸಬಹುದು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನ ವಾಗಿದೆ.ಮಕ್ಕಳಿಂದ ಸಂಸಾರದಲ್ಲಿ ನಿಮಗೆ ಯೋಚನೆ ಹೆಚ್ಚಾಗುತ್ತದೆ. ಅದೇ ರೀತಿ ನಿಮ್ಮ ಪ್ರೀತಿ ಪಾತ್ರರಿಂದ ತೊಂದರೆಯಾಗುವ ಸಾಧ್ಯತೆ ಜಾಸ್ತಿ ಇದೆ.

ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಈ ಫೋಟೊ ಇಡಬೇಕು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ವ್ಯವಹಾರಗಳು ಇಂದು ಬೇಡ. ಕೋರ್ಟ್, ಕಛೇರಿ ವ್ಯವಹಾರ ಯಾವುದೆ ಬೇಡ.. ಸಂಸಾರದ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ಗೋಚರ ಇರುತ್ತದೆ. ಮಾಸ್ ಮೀಡಿಯಾ, ಪ್ರತಿಕೋದ್ಯಮದಲ್ಲಿ ಇರೋರಿಗೆ ಲಾಭದಾಯಕವಾಗಿದೆ.‌

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಕುಟುಂಬದಲ್ಲಿ ನೆಮ್ಮದಿ ಇದ್ದು ಸಂತೋಷ ಸಹಕಾರ ಸಿಗುತ್ತದೆ.‌ ಉತ್ತಮವಾದ ದಿನ ನಿಮ್ಮದು ಆಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೂ ಅತೀ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ತುಮೂಲಗಳು ಬಗೆಹರಿಯಲಿದೆ.

ಮಕರ ರಾಶಿ: ಈ ರಾಶಿಯವರಿಗೆ ಕಷ್ಟಕರವಾದ ಗೋಚರ ಇರಲಿದ್ದು ಮುಖ್ಯವಾದ ಯಾವುದೆ ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಕೆಲವೊಂದು ವಿಚಾರದಲ್ಲಿ ಅಂದುಕೊಂಡಂತೆ ನಡೆಯದೇ ಇರಬಹುದು.

ಕುಂಭರಾಶಿ: ಇಂದು ಅತೀ ಉತ್ತಮವಾದ ಗೋಚರ ಇರುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಹಾಗೂ ಧನ ಆಗಮನ ಕೂಡ ಆಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಇರುತ್ತದೆ. ಆದ್ರೆ ಕೆಲಸ ಕಾರ್ಯದಲ್ಲಿ ಜವಾಬ್ದಾರಿ ಹೆಚ್ಚು ಇರುತ್ತದೆ. ಎಲ್ಲ ಕೆಲಸ ಕಾರ್ಯದ ಬಗ್ಗೆ ಆಸಕ್ತಿ ಯಿಂದ ಗಮನ ನೀಡಬೇಕಾಗುತ್ತದೆ.