ಬೆಂಗಳೂರು, ಡಿ. 24: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ, ಚತುರ್ಥಿ ತಿಥಿ ಧನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಧನಿಷ್ಠ ನಕ್ಷತ್ರದ ಅಧಿಪತಿ ಕುಜ. ಹಾಗಾಗಿ ಹೆಚ್ಚಿನವರಿಗೆ ಧನ ಲಾಭದ ಸೂಚನೆ ಇದೆ. ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು ಲಾಭದಾಯಕವಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಹಾಗೂ ಯಶಸ್ಸು ಸಿಗಲಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಇನ್ನು ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಿಕ್ಕಿ ಉತ್ತಮ ವೇತನ ಕೈ ಸೇರುವ ಸಾಧ್ಯತೆ ಇದೆ. ಇದರಿಂದ ಉತ್ತಮ ದಿನವಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅದೃಷ್ಟದ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ವೇದನೆಗಳೆಲ್ಲವೂ ಮಾಯವಾಗುತ್ತದೆ. ಮುಂದಿನ ದಿನಕ್ಕೆ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ. ಭಗವಂತನ, ಹಿರಿಯರ ಆಶೀರ್ವಾದ ಬಹಳ ಮುಖ್ಯ.
ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗೋದಿಲ್ಲ. ಬೇರೆಯವರ ಸಹಕಾರ ಕೂಡ ನಿಮಗೆ ಸಿಗುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಎಲ್ಲ ಕಡೆಯಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ದಾಂಪತ್ಯ ಜೀವನದಲ್ಲೂ ಖುಷಿ ಸಿಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಶತ್ರುಗಳು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.
ನಿಮ್ಮ ಮನೆಯ ಪೂಜಾ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಒಳ್ಳೆಯದು?
ತುಲಾ ರಾಶಿ: ತುಲಾ ರಾಶಿಯವರ ಮನಸ್ಸಿಗೆ ಕಿರಿ ಕಿರಿ ಆಗುವ ಸಾಧ್ಯತೆ ಇದೆ. ಪ್ರೇಮ, ಪ್ರೀತಿ ಪ್ರಕರಣದಲ್ಲಿ ಮನಸ್ಸಿಗೆ ನೋವು, ಹಣಕಾಸಿನ ವಿಚಾರದಲ್ಲೂ ತೊಂದರೆಗಳು ಕಾಡಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ನಾನಾ ರೀತಿಯ ಯೋಚನೆಗಳು ಕಾಡಬಹುದು. ನಿಮ್ಮ ಆಸ್ತಿ ಪಾಸ್ತಿ ವಿಚಾರವಾಗಿ ತೊಂದರೆ, ಕೋರ್ಟ್, ಕಚೇರಿ ವ್ಯವಹಾರದಲ್ಲೂ ಕಿರಿಕಿರಿ ಆಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ. ನಿಮಗೆ ಆತ್ಮವಿಶ್ವಾಸ ತುಂಬಾ ಚೆನ್ನಾಗಿರುತ್ತದೆ. ಮೀಡಿಯಾ, ಮಾರ್ಕೆಟಿಂಗ್‌ನಲ್ಲಿ ಇರೋರಿಗೆ ಉತ್ತಮ ದಿನವಾಗಲಿದೆ.
ಮಕರ ರಾಶಿ: ಈ ರಾಶಿಯವರಿಗೆ ಕುಟುಂಬದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ದಿನವಾಗುತ್ತದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಪ್ರಾಪ್ತಿಯಾಗುತ್ತದೆ.
ಕುಂಭರಾಶಿ: ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಹಿಂದಿನ ಎರಡು ಮೂರು ದಿನಗಳ ನೋವು ಪರಿಹಾರವಾಗಲಿದೆ. ಮುಂದಿನ ದಿನಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಆರೋಗ್ಯದಲ್ಲೂ ಹೆಚ್ಚಿನ ಗಮನ ನೀವು ನೀಡಬೇಕಾಗುತ್ತದೆ.