ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 27th: ಇಂದು ಈ ರಾಶಿಯ ಮೇಲೆ ಶನಿಶ್ವೇರನ ಕೃಪಕಟಾಕ್ಷ; ಮುಟ್ಟಿದ್ದೆಲ್ಲ ಚಿನ್ನ

ನಿತ್ಯ ಭವಿಷ್ಯ ಡಿಸೆಂಬರ್ 27, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಶುಕ್ಷ ಪಕ್ಷ, ಸಪ್ತಮಿ ತಿಥಿ, ಉತ್ತರ ಭಾದ್ರಾಪದ ನಕ್ಷತ್ರದ ಡಿಸೆಂಬರ್ 27ನೇ ತಾರೀಖಿನ ಈ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು, ಡಿ. 27: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರ ಭಾದ್ರಾಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರವಾಗಿ ತಿಳಿಸಿದ್ದಾರೆ.

ಮೇಷ ರಾಶಿ: ಉತ್ತರ ಭಾದ್ರಪದ ನಕ್ಷತ್ರದ ಅಧಿಪತಿ ಶನಿ. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಮೀಟಿಂಗ್, ಮುಖ್ಯದಾದ ಕೆಲಸ ಮಾಡಲು ಹೋಗಬೇಡಿ. ಇಂದು ಯಾವುದೇ ಕೆಲಸ ಕಾರ್ಯಗಳು ನಿಮ್ಮ ಪರವಾಗಿ ನಡೆಯಲಾರದು.

ವೃಷಭ ರಾಶಿ: ಇಂದು ವೃಷಭ ರಾಶಿಯವರ ಮನಸ್ಸಿಗೆ ನೆಮ್ಮದಿ ಇರಲಿದ್ದು, ಮಿತ್ರರಿಂದ ಧನ ಆಗಮನ‌ವಾಗುತ್ತದೆ. ಗುಂಪು ಕೆಲಸದಿಂದ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಹೆಚ್ಚಿರುತ್ತದೆ. ಆದರೂ ಕೂಡ ಕೆಲಸ ಕಾರ್ಯದಲ್ಲಿ ಸಂಪೂರ್ಣ ಯಶಸ್ಸನ್ನು ನೀವು ಪಡೆದುಕೊಳ್ಳಬಹುದು.

ಕಟಕ ರಾಶಿ: ಕಟಕ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಇಂದು ಹೆಚ್ಚು ಅದೃಷ್ಟದ ದಿನವಾಗಲಿದ್ದು, ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಾಯವಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನವಾಗಲಿದ್ದು, ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಯಾರ ಸಹಕಾರವೂ ನಿಮಗೆ ಪ್ರಾಪ್ತಿಯಾಗುವುದಿಲ್ಲ.‌ ಸ್ವಲ್ಪ ದಿನದಲ್ಲೆ ಇದಕ್ಕೆಲ್ಲ ಪರಿಹಾರ ಸಿಗಲಿದೆ.

ನಿಮ್ಮ ಮನೆಯ ಪೂಜಾ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಒಳ್ಳೆಯದು?

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಎಲ್ಲ ಕಡೆಯಿಂದ ನಿಮಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ‌ಸಿಗುತ್ತದೆ. ಶತ್ರುಗಳು ಹಿಮ್ಮೆಟುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ಮನಸ್ಸಿಗೆ ನೆಮ್ಮದಿ ‌ಸಿಗುತ್ತದೆ. ಆದರೂ ಮುಖ್ಯವಾದ ಕೆಲಸ ಕಾರ್ಯದಲ್ಲಿ ಅಡೆ ತಡೆಗಳು ಎದುರಾಗಬಹುದು. ಕೆಲವೊಂದು ಮನಸ್ಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ಭಾವುಕತೆ ಹೆಚ್ಚಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಸಂಸಾರದ ವಿಚಾರದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿರುವವರಿಗೆ ಉತ್ತಮ ದಿನವಲ್ಲ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು.

ಮಕರ ರಾಶಿ: ಈ ರಾಶಿಯವರಿಗೆ ಅತೀ ಉತ್ತಮ ದಿನವಾಗಿದೆ. ಆತ್ಮವಿಶ್ವಾಸ ತುಂಬಾ ಚೆನ್ನಾಗಿ ಇರಲಿದ್ದು, ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಬಂಧು ಬಾಂಧವರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು.

ಕುಂಭರಾಶಿ: ಈ ರಾಶಿಯವರು ಆರ್ಥಿಕತೆಯ ಸುಧಾರಣೆ, ಖರ್ಚು ವೆಚ್ಚದ ಬಗ್ಗೆ ಗಮನ ನೀಡಬೇಕಾಗುತ್ತದೆ. ಆದರೂ ಕುಟುಂಬದವರಿಂದ ನೆಮ್ಮದಿ ಲಭ್ಯ.

ಮೀನ ರಾಶಿ: ಮೀನ ರಾಶಿಯವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿದ್ದಾನೆ. ಇದರಿಂದ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ವೇದನೆ ಎಲ್ಲವೂ ಬಗೆಹರಿಯಲಿದೆ.