ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 7th: ಧನು ರಾಶಿಗೆ ಕುಜನ ಪ್ರವೇಶ: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

ನಿತ್ಯ ಭವಿಷ್ಯ ಡಿಸೆಂಬರ್ 7, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ ಆರ್ದ್ರಾ ನಕ್ಷತ್ರದ ಡಿಸೆಂಬರ್ 7ನೇ ತಾರೀಖಿನ ಈ ದಿನ ಧನು ರಾಶಿಯನ್ನು ಕುಜ ಪ್ರವೇಶ ಮಾಡಲಿದ್ದಾನೆ.‌ ಹೀಗಾಗಿ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು, ಡಿ. 7: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ಆರ್ದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ. ಇಲ್ಲಿದೆ ವಿವರ:

ಮೇಷ ರಾಶಿ: ಮೇಷ ರಾಶಿಯವರ ಭಾಗ್ಯ ಸ್ಥಾನಕ್ಕೆ ಕುಜ ಬರುವುದರಿಂದ ಅದೃಷ್ಟದ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಬರಬಹುದು.‌ ಹಾಗಾಗಿ ಭಗವಂತನ ಅನುಗ್ರಹಕ್ಕಾಗಿ ಹೆಚ್ಚು ಪ್ರಯತ್ನ ನೀವು ಮಾಡಬೇಕಾಗುತ್ತದೆ. ಹಿಂದಿನ ಎರಡು ದಿನದಲ್ಲಿ ನಿಮಗೆ ದಾಂಪತ್ಯದಲ್ಲಿ, ಮಿತೃತ್ವದಲ್ಲಿ ಒಡಕು ಬಂದಿತ್ತು.‌ ಅದೆಲ್ಲವೂ ಈಗ ಮಾಯವಾಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ರೀತಿಯ ಸಹಕಾರ ನಿಮಗೆ ಸಿಗುವುದಿಲ್ಲ. ಆದ್ದರಿಂದ ಬೇರೆಯವರನ್ನು ವಿವೇಕವಾಗಿ ನೀವು ಮಾತನಾಡಿಸಬೇಕಾಗುತ್ತದೆ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಈ ಗೋಚರ ಕಷ್ಟದ್ದಾಗಲಿದೆ. ಕುಜ ನಿಮ್ಮ ಷಷ್ಠ ಭಾವದಲ್ಲಿ ಇರುವಾಗ ನೀವು ಹೇಳಿದ್ದೆಲ್ಲ ನೇರವೇರಿತ್ತು. ಆದರೆ ಈಗ ಸಹೋದ್ಯೋಗಿ, ಮಿತೃತ್ವದಲ್ಲಿ ಒಡಕು ಮೂಡುವ ಸಂದರ್ಭ ಬರಬಹುದು. ಹಾಗಾಗಿ ನಿಮ್ಮ ಕೋಪ, ಸಿಟ್ಟನ್ನು ಹತೋಟಿಯಲ್ಲಿ ಇಡುವ ಮೂಲಕ ಪ್ರತಿಕ್ರಿಯೆ ನೀಡಬೇಕು.

ಕಟಕ ರಾಶಿ: ಕಟಕ ರಾಶಿಯವರಿಗೆ ಅತೀ ಉತ್ತಮ ಫಲ ಗೋಚರವಾಗಲಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ಶತ್ರುಗಳು ಹಿಮ್ಮೆಟ್ಟುವ ಸಾಧ್ಯತೆ ಇದೆ. ಕೆಲಸ ಕಾರ್ಯದಲ್ಲೂ ಕೂಡ ಜಯವನ್ನು ಕಾಣಲಿದ್ದೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸ್ವಲ್ಪ ಕಷ್ಟದದ ದಿನವಾಗಲಿದೆ. ದಾಂಪತ್ಯ, ಪ್ರೀತಿ, ಪ್ರೇಮ ಪ್ರಕರಣದಲ್ಲಿ ಕ್ಷೇಷ ಉಂಟಾಗುವ ಸಾಧ್ಯತೆ ಇದೆ.‌ ಹಣಕಾಸಿನ ವ್ಯವಹಾರದಲ್ಲೂ ನಷ್ಟ ಉಂಟಾಗಲಿದೆ. ಇನ್ನು ಮಕ್ಕಳ ವಿಚಾರದಲ್ಲಿ ಪೋಷಕರು ಹೆಚ್ಚು ಜಾಗೃತೆ ವಹಿಸಬೇಕಾಗುತ್ತದೆ.

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಿವಾರಿಸಲಿದೆ ಅಡುಗೆ ಮನೆಯ ಈ ವಸ್ತು

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನೆಯಲ್ಲಿ, ಸಂಸಾರದಲ್ಲಿ ತೊಂದರೆಗಳು ಕಾಡುತ್ತಿರುತ್ತದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿ ಇರುವವರಿಗೂ ಅಷ್ಟೊಂದು ಸುಖದ ದಿನ ವಾಗಲಾರದು.‌ ಎಲ್ಲರ ಜತೆ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ.‌ ಸಾಮಾಜಿಕ ವ್ಯವಹಾರದಲ್ಲಿ ಜಯವನ್ನು ಕಾಣುತ್ತೀರಿ. ಸೋಶಿಯಲ್ ಮೀಡಿಯಾ, ಯೂಟ್ಯೂಬ್‌ನಲ್ಲಿ ಇರುವವರಿಗೂ ಲಾಭದಾಯಕ ದಿನ ಆಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಹಣಕಾಸಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಸಾಮಾಜಿಕ ವ್ಯವಹಾರ, ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಲಿದೆ. ಮನೆಯಲ್ಲಿ ಯಾವುದೇ ರೀತಿಯ ಜಗಳ ಆಗದಂತೆ ನೋಡಿಕೊಳ್ಳುವುದು ಮುಖ್ಯ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ನಿಮ್ಮ ರಾಶಿಗೆ ಕುಜ ಬಂದಿದ್ದಾನೆ‌‌. ಹಾಗಾಗಿ ಮಿತ್ರತ್ವದಲ್ಲಿ ಇದ್ದ ಒಡಕು ದೂರವಾಗಬಹುದು.‌ ಅದೇ ರೀತಿ ಕೆಲವೊಂದು ವಿಚಾರದಲ್ಲಿ ನೀವು ಮುನ್ನಡೆಯನ್ನು ಸಾಧಿಸಬಹುದು.

ಮಕರ ರಾಶಿ: ಈ ದಿನ ಮಕರ ರಾಶಿಯವರಿಗೆ ಕಷ್ಟವಾಗಲಿದ್ದು, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ವ್ಯವಹಾರ, ಪಾರ್ಟನರ್‌ಶಿಪ್‌ನಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ.‌

ಕುಂಭರಾಶಿ: ಕುಂಭ ರಾಶಿಯವರಿಗೆ ಅತ್ಯುತ್ತ ದಿನ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.‌ ಗುಂಪು ಕೆಲಸದಿಂದ ನಿಮಗೆ ಯಶಸ್ಸು ಸಿಗಬಹುದು. ರಾಜಕೀಯದಲ್ಲಿ ಇರುವವರಿಗೂ ಅತೀ ಉತ್ತಮ ದಿನವಾಗಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ತದಲ್ಲಿ ಭಾರೀ ಯಶಸ್ಸು ಸಿಗಲಿದ್ದು ಗೌರವ ಪ್ರಾಪ್ತಿಯಾಗುತ್ತದೆ.‌ ಕಾರ್ಯ ಕ್ಷೇತ್ರ ಅಲ್ಲದೆ ವೈಯಕ್ತಿಕವಾಗಿ ಕೂಡ ನೆಮ್ಮದಿ ಕಾಣುತ್ತೀರಿ.