ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ರೇವತಿ ನಕ್ಷತ್ರದ ಈ ದಿನ ಈ ರಾಶಿಯವರಿಗೆ ಬಹಳಷ್ಟು ಯಶಸ್ಸು!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿ, ರೇವತಿ ನಕ್ಷತ್ರದ ಈ ದಿನ ಆಗಸ್ಟ್ 14 ನೇ ತಾರೀಖಿನ ಗುರುವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ರೇವತಿ ನಕ್ಷತ್ರ ಇಂದು ಈ ರಾಶಿಗೆ ಯಶಸ್ಸು!

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಷಷ್ಠಿ ತಿಥಿ ,ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ( Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ರೇವತಿ ನಕ್ಷತ್ರ ಇದ್ದು ಇದರ ಅಧಿಪತಿ ಬುಧನಾಗಿದ್ದಾನೆ. ಹಾಗಾಗಿ ಇಂದು ಬಹಳ ವಿವೇಚನೆಯಿಂದ ಕೆಲಸ ಮಾಡಬೇಕು.‌ ಮೇಷ ರಾಶಿ ಅವರಿಗೆ‌ ‌ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮಾತು ಕಡಿಮೆ ಮಾಡಿದರೆ ಅದೇ ನಿಮಗೆ ಶುಭಕರವಾಗಿ ಇರುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನ ಆಗಲಿದೆ. ನೀವು ಏನೇ ಮಾತನಾಡಿದರೂ ಇಂದು ಯಾರಿಂದ ನಿಮಗೆ ಬೇಸರ ಉಂಟಾಗುವುದಿಲ್ಲ. ಮಿತ್ರರಿಂದ ಧನ ಆಗಮನದ ಜೊತೆಗೆ ಇಷ್ಟಾರ್ಥ ಸಿದ್ದಿ ಕೂಡ ಆಗಲಿದೆ

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇದ್ದವರಿಗೆ ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸಿನ ಜೊತೆಗೆ ಚೆನ್ನಾಗಿ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿರಿ. ಇದರಿಂದ ಕೆಲವರಿಗೆ ಹೊಟ್ಟೆ ಕಿಚ್ಚು ಮತ್ಸರ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವರು ನಿಮ್ಮನ್ನು ಪ್ರಶಂಸೆ ಮಾಡಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾಗ್ಯೋದಯವಾದ ದಿನ ಆಗಲಿದೆ. ಮನಸ್ಸಿಗೂ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಹಿಂದಿನ ಮೂರು ನಾಲ್ಕು ದಿನಗಳಿಂದ ತೊಂದರೆ ಮಾಡಿದವರು ನಿಮ್ಮ ಜೊತೆ ಮನವೊಲಿಸಲು ಬರಬಹುದು. ಧ್ಯಾನ ಇತ್ಯಾದಿ ಮಾಡುವ ಮೂಲಕ ಸಮಯವನ್ನು ಕಳೆಯಿರಿ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಮನಸ್ಸಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇರಲಿದೆ. ಯಾವುದು ಅಂದು ಕೊಂಡಂತೆ ಆಗುವುದಿಲ್ಲ ಎನ್ನುವ ಹತಾಶೆ ನಿಮ್ಮಲ್ಲಿ ಬರಬಹುದು. ಯಾರ ಜೊತೆಗೆ ಮಾತನಾಡಲು ನೀವು ಇಷ್ಟ ಪಡುವುದಿಲ್ಲ.‌ ಆದರೆ ಎರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೂ ಇಂದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಬೇರೆ ಯವ ರಿಂದ ನಿಮಗೆ ಸಹಕಾರ ಖಂಡಿತ ಪ್ರಾಪ್ತಿ ಯಾಗಲಿದೆ. ಆದರೆ ಆ ಸಹಕಾರ ಎಲ್ಲರಿಗೂ ತೋರುವಂತೆ ಇರುವುದಿಲ್ಲ. ಸೂಕ್ಷ್ಮವಾಗಿ ಇವುಗಳು ನಿಮಗೆ ಬಹಳಷ್ಟು ಒಳಿತು ಮಾಡಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಉತ್ತಮ ದಿನ ಆಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಜಯ ಕೂಡ ಪ್ರಾಪ್ತಿ ಯಾಗಲಿದೆ.‌ ಆದರೆ ಅದನ್ನು ದೊಡ್ಡದಾಗಿ ಹೇಳಿಕೊಳ್ಳುವ ರೀತಿ ಇರುವುದಿಲ್ಲ. ಇದರಿಂದ ನಿಮಗೆ ಸಂತೋಷವು ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸ್ವಲ್ಪ ಕ್ಷೇಷಕರವಾದ ದಿನ ಆಗಲಿದೆ. ಬಿಸಿನೆಸ್ ವ್ಯವಹಾರ ಮಾಡೋರಿಗೆ ಸ್ವಲ್ಪ ಕಷ್ಟ ತೊಂದರೆ ಆಗಬಹುದು. ಕ್ರಿಯಾತ್ಮಕ ಚಟುವಟಿಕೆಯ ಇತ್ಯಾದಿ ಕೆಲಸ ಮಾಡುವವರಿಗೂ ಕಷ್ಟ ಆಗಲಿದೆ. ಯಾವುದೇ ಮುಖ್ಯ ನಿರ್ಧಾರ ಇಂದು ಮಾಡಬೇಡಿ

ಈ ಸುದ್ದಿಯನ್ನೂ ಓದಿ:Daily Horoscope: ದಿನ ಭವಿಷ್ಯ- ಶತಭಿಷಾ ನಕ್ಷತ್ರದ ಈ ರಾಶಿಗೆ ಇಂದು ಭಾರೀ ಯಶಸ್ಸು!

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕೋರ್ಟ್ ವ್ಯವಹಾರದಲ್ಲಿ ಯಾರು ಇರುತ್ತೀರಿ. ಅವರಿಗೆ ಅಷ್ಟು ಶುಭಕರ ವಾಗಿಲ್ಲ.‌ಮುಂಚೆಯೇ ಅದಕ್ಕೆ ತಯಾರಾಗಿ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಇಂದು ಹೋಗಬೇಡಿ. ಬಿಸಿನೆಸ್ ವ್ಯವಹಾರದಲ್ಲೂ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮ ವಾದ ದಿನ‌ ಆಗಲಿದೆ. ನೀವು ಆಡಿದ ಮಾತಿನಿಂದ ಇತರರಿಗೆ ಸಮಾಧಾನ ನೀಡಲಿದೆ. ಬೇರೆಯವರಿಗೆ ಸಂತಸ ಪ್ರಾಪ್ತಿ ಯಾಗಲಿದೆ. ಮನಸ್ಸಿಗೆ ನೆಮ್ಮದಿ ಬಂಧು ಬಾಂಧವರಿಂದ ಸಂತೋಷ ಪ್ರಾಪ್ತಿ ಯಾಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಸ್ವಲ್ಪ ಕ್ಷೇಷ ಉಂಟಾಗುವ ಸಾಧ್ಯತೆ ಇರುತ್ತದೆ.‌ನಿಮ್ಮ ಮಾತನ್ನು ಕೇಳಲು ಯಾರು ತಯಾರು ಇರುವುದಿಲ್ಲ. ನಿಮ್ಮ ಮಾತನ್ನು ತಿರಸ್ಕಾರ ಮಾಡುವವರು ಇಂದು ಹೆಚ್ಚು ಜನ ಇದ್ದಾರೆ. ಆದರೆ ಸಮಾಧಾನಯುತವಾಗಿ ಇರುವುದು ಮುಖ್ಯ ವಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಬುಧ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಮಾತಿಗೆ ವಿರುದ್ಧ ವಾಗಿ ಮಾತ ನಾಡುವವರು ಹೆಚ್ಚಾಗಿ ಇರುತ್ತಾರೆ. ಬೇರೆಯವರ ಜೊತೆ ಹೆಚ್ಚಾಗಿ ಮಾತ ನಾಡದೇ ಧ್ಯಾನ ಇತ್ಯಾದಿ ಮಾಡಿ. ದಿನ ನಿತ್ಯ ಶ್ಲೋಕ ಪಠಣ ಇತ್ಯಾದಿ ಮಾಡುವ ಅಭ್ಯಾಸ ಮಾಡಿಕೊಳ್ಳಿ.