BBK 12: ಮೂರನೇ ವಾರದಲ್ಲೇ ಬಿಗ್ ಬಾಸ್ ಕನ್ನಡ 12 ಫೈನಲ್: ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್
ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ 100ನೇ ದಿನಕ್ಕೆ ಅಥವಾ 100 ದಿನ ಕಳೆದು ಒಂದೆರಡು ವಾರದಲ್ಲಿ ಫಿನಾಲೆ ನಡೆಯುತ್ತೆ. ಇದು ಕಳೆದ 11 ಸೀಸನ್ನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಆಗಿಲ್ಲ.. ಕೇವಲ ಮೂರನೇ ವಾರದಲ್ಲೇ ಫೈನಲ್ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

Bigg Boss Kannada -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಶುರುವಾದ ಮೊದಲ ದಿನವೇ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನಿಡಲಾಗುತ್ತಿದೆ. ಒಂದರ ಹಿಂದೆ ಒಂದರಂತೆ ಆಘಾತ ಅನುಭವಿಸುತ್ತಿದ್ದಾರೆ. ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಆಚೆ ಹೋಗಬೇಕಾಯಿತು. ಒಂಟಿ ಸದಸ್ಯರ ಗುಂಪು ಒಮ್ಮತದಿಂದ ಚರ್ಚಿಸಿ ಸ್ಪಂದನಾ, ಗಾಯಕ ಮಾಳು ಹಾಗೂ ರಕ್ಷಿತಾ ಶೆಟ್ಟಿ ಪೈಕಿ ಒಬ್ಬರನ್ನು ಹೊರಗೆ ಕಳುಹಿಸಬೇಕಿತ್ತು. ಅದರಂತೆ ಇವರೆಲ್ಲ ರಕ್ಷಿತಾ ಅವರನ್ನು ಆಯ್ಕೆ ಮಾಡಿ ಎಲಿಮಿನೇಟ್ ಮಾಡಿದ್ದಾರೆ. ಇದೀಗ ಎರಡನೇ ದಿನ ಊಹಿಸಲಾಗದ ಟ್ವಿಸ್ಟ್ ನೀಡಲಾಗಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ 100ನೇ ದಿನಕ್ಕೆ ಅಥವಾ 100 ದಿನ ಕಳೆದು ಒಂದೆರಡು ವಾರದಲ್ಲಿ ಫಿನಾಲೆ ನಡೆಯುತ್ತೆ. ಇದು ಕಳೆದ 11 ಸೀಸನ್ನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಆಗಿಲ್ಲ.. ಕೇವಲ ಮೂರನೇ ವಾರದಲ್ಲೇ ಫೈನಲ್ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದನ್ನ ಕೇಳಿ ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಈ ವಿಚಾರ ರಿವೀಲ್ ಆಗಿದೆ.
‘‘ಈ ಸೀಸನ್ನಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡೋದಕ್ಕೆ ನೂರು ದಿನಗಳ ಕಾಲ ಕಾಯಬೇಕಿಲ್ಲ.. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ.. ನಿಮಲ್ಲಿ ಯಾರು, ಯಾವಾಗ ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು.. ಒಬ್ಬೊಬ್ಬರಾಗಿ ಹೋಗಬಹುದು.. ಗುಂಪು-ಗುಂಪಾಗಿ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್ ಭಯದಿಂದ ಮುಕ್ತರಾಗಬೇಕಾದರೆ ಅದಕ್ಕೆ ಒಂದೇ ದಾರಿ’’ ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೇಳಿದ್ದಾರೆ.
ಈ ವಿಚಾರ ಕೇಳಿ ಮನೆಯ ಸದಸ್ಯರಿಗೆ ಢವ-ಢವ ಶುರುವಾಗಿದೆ. ಅಸಲಿಗೆ ಬಿಗ್ ಬಾಸ್ ಮೂರನೇ ವಾರದಲ್ಲಿ ಮುಗಿಯುವುದಿಲ್ಲ.. ಈ ಬಾರಿ ಎರಡು ಫೈನಲ್ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಪೈಕಿ ಮೊದಲ ಫೈನಲ್ ಮೂರನೇ ವಾರದಲ್ಲಿ ನಡೆಯಲಿದೆಯಂತೆ. ಈ ಮೂಲಕ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಿಗ್ ಬಾಸ್ ನೀಡುತ್ತಿದ್ದು, ಸ್ಪರ್ಧಿಗಳಿಗೆ ಉಸಿರಾಡಲೂ ಅವಕಾಶ ಸಿಗದಂತಾಗಿದೆ.
BBK 12: ಬಿಗ್ ಬಾಸ್ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ