ಬೆಂಗಳೂರು: ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಮೇಷ: ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ, ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ತಾಂತ್ರಿಕ, ಸಾರಿಗೆ ಹಾಗೂ ರೈಲ್ವೆ ಕ್ಷೇತ್ರದವರಿಗೆ ವಿಶೇಷ ಲಾಭವಿದೆ. ಬಂಧು-ಮಿತ್ರರಿಂದ ಪ್ರೀತಿ ಮತ್ತು ಗೌರವ ಸಿಗಲಿದ್ದು, ಆರೋಗ್ಯ ಉತ್ತಮವಾಗಿರುತ್ತದೆ.
ವೃಷಭ: ವೃತ್ತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಆತುರಪಡಬೇಡಿ. ಕಠಿಣ ಪರಿಶ್ರಮಕ್ಕೆ ಕಚೇರಿಯಲ್ಲಿ ಮನ್ನಣೆ ಸಿಗಲಿದೆ. ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ಸಣ್ಣ ವಿಚಾರಗಳಿಗೆ ಕೋಪಗೊಳ್ಳದೆ ತಾಳ್ಮೆಯಿಂದಿರಿ. ಅನಗತ್ಯ ಪ್ರಯಾಣದಿಂದ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ.
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದ್ದು, ಬಯಸಿದ ಕಡೆಗೆ ವರ್ಗಾವಣೆ ಸಿಗುವ ಸಾಧ್ಯತೆಯಿದೆ. ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ಸಮಯ. ಅನಿರೀಕ್ಷಿತ ಧನಲಾಭವಾಗಲಿದ್ದು, ಹೊಸ ವಸ್ತುಗಳು ಅಥವಾ ಆಭರಣ ಖರೀದಿಸುವ ಯೋಗವಿದೆ. ಸಾಲದ ಹೊರೆ ಕಡಿಮೆಯಾಗಲಿದ್ದು, ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಮುಖ್ಯ.
ಕಟಕ: ಬ್ರಹ್ಮ ಯೋಗದ ಪ್ರಭಾವದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ದಿನ. ದೀರ್ಘಕಾಲದ ಆಸ್ತಿ ವಿವಾದಗಳಿಗೆ ಪರಿಹಾರ ಸಿಗಬಹುದು. ಅನಿರೀಕ್ಷಿತ ಹಣದ ಆಗಮನದಿಂದ ನೆಮ್ಮದಿ ಇರಲಿದ್ದು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.
ಸಿಂಹ: ಪ್ರಮುಖ ಕೆಲಸಗಳನ್ನು ನೀವೇ ಸ್ವತಃ ಮಾಡಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದಿನವಾಗಿದ್ದು, ಕಾನೂನು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಹೊಸದಾಗಿ ಪರಿಚಯವಾಗುವವರನ್ನು ತಕ್ಷಣ ನಂಬಬೇಡಿ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಮೂಡದಂತೆ ಮಾತಿನ ಮೇಲೆ ಹಿಡಿತವಿರಲಿ; ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಕನ್ಯಾ: ಕೆಲಸದ ಹೊರೆ ಹೆಚ್ಚಾಗುವುದರಿಂದ ಸಣ್ಣ ವಿಷಯಗಳಿಗೆ ಕಿರಿಕಿರಿಯಾಗಬಹುದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ, ಆದರೆ ಸರಿಯಾದ ಹೂಡಿಕೆಯಿಂದ ಉತ್ತಮ ಲಾಭ ಸಿಗಬಹುದು. ಕಷ್ಟದ ಸಮಯದಲ್ಲಿ ಸ್ನೇಹಿತರು ಮತ್ತು ಸಂಗಾತಿಯ ಬೆಂಬಲ ದೊರೆಯಲಿದೆ.
ತುಲಾ: ತುಂಬಾ ಶುಭ ದಿನವಾಗಿದೆ. ಕಲೆ, ಸಂಗೀತ, ನಟನೆ ಹಾಗೂ ಚಲನಚಿತ್ರೋದ್ಯಮದಲ್ಲಿರುವವರಿಗೆ ವಿಶೇಷ ಲಾಭ ಮತ್ತು ಯಶಸ್ಸು ಸಿಗಲಿದೆ. ಹೊಸ ಕೆಲಸಗಳನ್ನು ಆರಂಭಿಸಬಹುದು. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುವ ಅವಕಾಶವಿದೆ. ಕೆಲಸದ ಒತ್ತಡದ ನಡುವೆಯೂ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ವೃಶ್ಚಿಕ: ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುವಿರಿ. ಹೊಸ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವುದು ಮತ್ತು ದೂರದ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ಶುಕ್ಲ ಯೋಗದಿಂದಾಗಿ ಉಳಿತಾಯದ ಕಡೆಗೆ ಹೆಚ್ಚು ಗಮನ ಹರಿಸುವಿರಿ. ಕುಟುಂಬದಲ್ಲಿ ಸಣ್ಣ ವಿಚಾರಗಳು ದೊಡ್ಡ ವಿವಾದವಾಗದಂತೆ ನೋಡಿಕೊಳ್ಳಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನಸ್ಸು: ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಪ್ರಗತಿಯ ಹಾದಿಯಲ್ಲಿ ಸಾಗುವಿರಿ. ಕೃಷಿ, ಸಣ್ಣ ವ್ಯಾಪಾರ ಹಾಗೂ ಕಾರ್ಮಿಕ ವರ್ಗದವರಿಗೆ ಉತ್ತಮ ಲಾಭವಿದೆ. ಕುಟುಂಬದಲ್ಲಿದ್ದ ಮನಸ್ತಾಪಗಳು ದೂರವಾಗಲಿವೆ. ಅನಗತ್ಯ ಪ್ರಯಾಣಗಳಿಂದ ದೈಹಿಕ ಆಯಾಸವಾಗಬಹುದು, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ.
ಮಕರ: ಇಂದು ಬಹಳ ವಿಶೇಷವಾದ ದಿನ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಮೆಚ್ಚುಗೆ ದೊರೆಯಲಿದೆ. ಸಂಗಾತಿಯ ಸಹಾಯದಿಂದ ಸ್ವಂತ ಉದ್ಯೋಗ ಆರಂಭಿಸುವ ಯೋಗವಿದೆ. ಆರ್ಥಿಕ ಸ್ಥಿತಿ ಬಲವಾಗಿದ್ದು, ಅಪಾರ ಲಾಭ ಸಿಗುವ ಸಾಧ್ಯತೆಯಿದೆ. ಮಕ್ಕಳ ಚಿಂತೆ ದೂರವಾಗಲಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಕುಂಭ: ವೃತ್ತಿಜೀವನದಲ್ಲಿ ಕೆಲವು ಸವಾಲುಗಳು ಎದುರಾದರೂ ಧೈರ್ಯದಿಂದ ನಿಭಾಯಿಸುವಿರಿ. ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ವಿರುದ್ಧ ಕೆಲಸ ಮಾಡುವವರ ಬಗ್ಗೆ ಜಾಗರೂಕರಾಗಿರಿ ಮತ್ತು ಅನಗತ್ಯ ಚಿಂತೆಗಳನ್ನು ಬಿಟ್ಟು ಜವಾಬ್ದಾರಿಗಳತ್ತ ಗಮನಹರಿಸಿ.
ಮೀನ: ಗ್ರಹಗಳ ಸ್ಥಾನ ಅನುಕೂಲಕರವಾಗಿದ್ದು, ಇಚ್ಛಾಶಕ್ತಿಯಿಂದ ಕಷ್ಟಕರ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಇದ್ದಕ್ಕಿದ್ದಂತೆ ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಜಮೀನು ಮತ್ತು ಆಸ್ತಿ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ; ಇತರರ ಮಾತಿಗೆ ಮರುಳಾಗಬೇಡಿ. ಕ್ರೀಡೆ ಮತ್ತು ರಾಜಕೀಯ ಕ್ಷೇತ್ರದವರಿಗೆ ಸ್ವಲ್ಪ ಮಾನಸಿಕ ಒತ್ತಡ ಇರಬಹುದು.