ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ರಾಶಿಯವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ತೃತೀಯ ತಿಥಿ, ಪೂರ್ವಭಾದ ನಕ್ಷತ್ರದ ಈ ದಿನ ಎಲ್ಲ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಮಾಹಿತಿ ನೀಡಿದ್ದಾರೆ.

ಇಂದು ಈ  ರಾಶಿಯವರಿಗೆ ಸಿಗಲಿದೆ ಭಾರಿ ಯಶಸ್ಸು

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ತೃತೀಯ ತಿಥಿ ಪೂರ್ವಭಾದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿಕೊಟ್ಟಿದ್ದಾರೆ.

ಮೇಷ ರಾಶಿ: ಇಂದು ಪೂರ್ವಭಾದಾ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ‌ ‌ಮಧ್ಯಾಹ್ನವರೆಗೂ ಬಹಳಷ್ಟು ಶುಭ ಫಲ ಇರಲಿದೆ. ಮಿತ್ರರಿಂದ ಧನಾಗಮನದ ಜತೆಗೆ ಮನಸ್ಸಿಗೆ ನೆಮ್ಮದಿಯೂ ಸಿಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ಮನಸ್ಸಿಗೆ ಕ್ಷೇಶ ಉಂಟಾಗುವ ಸಾಧ್ಯತೆ ಇದೆ. ಮಿತ್ರರು ನಿಮ್ಮಿಂದ ದೂರವಾಗಿ ಒಬ್ಬಂಟಿಯಾಗಬಹುದು.

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಮಧ್ಯಾಹ್ನವರೆಗೂ ಬೇಸರವಾಗುವ ಸಂದರ್ಭ ಬರಬಹುದು. ಮಧ್ಯಾಹ್ನ ಬಳಿಕ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಿತ್ರರಿಂದ ಖುಷಿ ಇಷ್ಟಾರ್ಥ ಸಿದ್ದಿ ಕೂಡ ಆಗಲಿದೆ. ಅತ್ಯಂತ ಸಂತೋಷದಾಯಕವಾಗಿ ದಿನ ಕಳೆಯುತ್ತೀರಿ‌

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಧ್ಯಾಹ್ನವರೆಗೂ ಕೆಲಸದಲ್ಲಿ ಯಾವುದೇ ಪ್ರಗತಿ ಕಾಣುವುದಿಲ್ಲ ಎನ್ನುವ ಬೇಸರ ಕಾಡಬಹುದು.‌ ಮಧ್ಯಾಹ್ನ ಬಳಿಕ ಎಲ್ಲ ರೀತಿಯ ಭಾಗ್ಯೋದಯ ನಿಮಗೆ ಸಿಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಅಂದುಕೊಂಡ ಕೆಲಸಗಳು ನೆರವೇರವೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಕೂಡ ಮನಸ್ಸಿನಲ್ಲಿ ಹೆಚ್ಚಾಗಿ ಬೇಸರ ಇರುತ್ತದೆ. ಹೆಚ್ಚಿನ ಕ್ಷೇಷಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ಎಲ್ಲದಕ್ಕೂ ಪರಿಹಾರ ಸಿಗಲಿದ್ದು ಉತ್ತಮ ದಿನ ನಿಮ್ಮದು ಆಗಲಿದೆ. ಮುಖ್ಯವಾದ ಕೆಲಸಗಳಿಗೆ ಇಂದು ಮಾರ್ಗ ದರ್ಶನ ಕೂಡ ನಿಮಗೆ ಸಿಗಲಿದೆ‌.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನದವರೆಗೂ ಎಲ್ಲರಿಂದಲೂ ಉತ್ತಮ ಸಹಕಾರ ಸಿಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ಮಟ್ಟಿಗೆ ಇತರರಿಂದ ಬೇಸರವಾಗುವ ಸಾಧ್ಯತೆ ಇದೆ. ಇತರರಿಂದ ನೋವು ಕಾಡುವ ಸಾಧ್ಯತೆಯು ಇರಲಿದೆ. ಎರಡು ದಿನಗಳವರೆಗೆ ಯಾವುದೇ ಮುಖ್ಯ ನಿರ್ಧಾರ ಬೇಡ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೂ ಇಂದು ಸಾಮಾಜಿಕ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ನಿಮ್ಮ ಪ್ರೀತಿ ಪಾತ್ರರ ಜತೆ ಉತ್ತಮ ಸಮಯವನ್ನು ನೀವು ಕಳೆಯುತ್ತೀರಿ. ಮನಸ್ಸಿಗೆ ತೃಪ್ತಿ ಸಿಗಲಿದೆ. ಇಂದು ಯಾವುದೇ ಕೆಲಸ ಕಾರ್ಯಗಳಿಗೆ ಶುಭ ಫಲ ಉಂಟಾಗಲಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಸ್ವಲ್ಪ ಯೋಚನೆಗಳು ಇರುತ್ತವೆ. ಎಲ್ಲ ಕೆಲಸದಲ್ಲೂ ಅತೀಯಾದ ಯೋಚನೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ.‌ ಮಧ್ಯಾಹ್ನ ಬಳಿಕ ಎಲ್ಲ ಕೆಲಸಗಳಿಗೂ ಪ್ರತಿಫಲ ಪ್ರಾಪ್ತಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.

ಇದನ್ನು ಓದಿ:Daily Horoscope: ಬುಧನ ವಕ್ರಸ್ಥಾನದಿಂದ ಈ ರಾಶಿಯವರಿಗೆಲ್ಲ ಗಂಡಾಂತರ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ತಾಪತ್ರಯಗಳು ಇಂದು ಹೆಚ್ಚಾ ಗಬಹುದು. ಆದರೆ ನಿಮ್ಮ ಕ್ರಿಯಾಶೀಲತೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದೇ ರೀತಿ ಏನೋ ಒಂದು ಮನಸ್ಸಿನಲ್ಲಿ ಬದಲಾವಣೆ ಕೂಡ ಆಗಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಅತ್ಯುತ್ತಮ ದಿನವಾಗಲಿದೆ. ಆದರೆ ಮಧ್ಯಾಹ್ನ ಬಳಿಕ ಸಂಸಾರದ ತಾಪತ್ರಯಗಳು ಹೆಚ್ಚಾಗಬಹುದು. ಮುಖ್ಯವಾದ ವಿಚಾರದಲ್ಲಿ ಇತರರಿಂದ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ.

ಮಕರ ರಾಶಿ: ಮಕರ ರಾಶಿಯವರು ಮಧ್ಯಾಹ್ನವರೆಗೂ ಸಂಸಾರದ ವಿಚಾರವಾಗಿ ಹೆಚ್ಚಿನ ಗಮನ‌ ನೀಡಬೇಕಾಗುತ್ತದೆ. ಸಂಸಾರದ ಬಗ್ಗೆಯೇ ಹೆಚ್ಚು ಯೋಚಿಸಬೇಕಾಗುತ್ತದೆ. ‌ಆದರೆ ಮಧ್ಯಾಹ್ನ ಬಳಿಕ ಎಲ್ಲ ಸಮಸ್ಯೆಗೂ ಪರಿಹಾರ ಸಿಗಲಿದ್ದು ಮನೆಯವರೊಂದಿಗೂ ಉತ್ತಮ ಸಮಯ ಕಳೆಯಲಿದ್ದೀರಿ.

ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯುತ್ತಮ ಫಲ ಸಿಗಲಿದೆ. ಆದರೆ ಸಂಸಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಂಸಾರಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಅನೇಕ ಯೋಚನೆ, ನೋವು ಇರುತ್ತದೆ. ಆರೋಗ್ಯದಲ್ಲೂ ಏರುಪೇರು ಆಗುತ್ತದೆ. ಆದರೆ ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಇದಕ್ಕೆ ಪರಿಹಾರ ಸಿಗಲಿದೆ. ಮುಂದಿನ ದಿನಗಳಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.