Daily Horoscope: ಈ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಚತುರ್ಥಿ ತಿಥಿ, ಉತ್ತರ ಭಾದ್ರಪದ ನಕ್ಷತ್ರದ ಈ ದಿನದ ಭವಿಷ್ಯ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರವಾಗಿ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಚತುರ್ಥಿ ತಿಥಿ ಉತ್ತರಭಾದ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ (Daily Horoscope) ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಉತ್ತರ ಭಾದ್ರಪದ ನಕ್ಷತ್ರ ಇದ್ದು ಮೇಷ ರಾಶಿಯವರಿಗೆ ಅಷ್ಟೊಂದು ಶುಭದಾಯಕವಾಗಿಲ್ಲ. ನಿಮ್ಮ ಮಿತ್ರರಿಂದ ಅಷ್ಟು ಸಹಕಾರ ದೊರೆಯಲಾರದು. ನಿಮ್ಮ ಉದ್ಯೋಗಿಗಳಿಂದ ಅಷ್ಟೊಂದು ಒಳಿತು ಉಂಟಾಗುವುದಿಲ್ಲ. ಆದ್ದರಿಂದ ಸ್ವಲ್ಪ ಕ್ಷೇಶ ಉಂಟಾಗಲಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನ ಆಗಲಿದೆ. ಮಿತ್ರರಿಂದ ಧನಾಗಮನವಾಗುವ ಸಾಧ್ಯತೆ ಇದೆ. ಇಡೀ ತಿಂಗಳಿನಲ್ಲಿ ಅತೀ ಹೆಚ್ಚಿನ ಸಂತೋಷ ಹೊಂದಿದ ದಿನ ಆಗಲಿದೆ. ಅತ್ಯಂತ ಖುಷಿಯಿಂದ ದಿನ ಕಳೆಯುತ್ತೀರಿ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಲೀಡರ್‌ಶಿಪ್ ಕ್ವಾಲಿಟಿ ಜತೆಗೆ ಎಲ್ಲರನ್ನು ನಿಭಾಯಿಸುವ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಭಾಗ್ಯೋದಯದ ದಿನ ಆಗಲಿದೆ. ಹಿಂದಿನ ದಿನಗಳಲ್ಲಿ ಇದ್ದ ಹೆಚ್ಚಿನ ಕ್ಷೇಶ ದೂರ ಆಗಲಿದೆ. ಹಿರಿಯರ ಆಶಿರ್ವಾದ ನಿಮಗೆ ಪ್ರಾಪ್ತಿಯಾಗಲಿದೆ. ಒಟ್ಟಿನಲ್ಲಿ ಉತ್ತಮ ದಿನ ನಿಮ್ಮದಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸ್ವಲ್ಪ ಶೋಭೆ ತರುವ ದಿನ ಆಗಲಿದೆ. ಯಾವುದೇ ಮುಖ್ಯ ನಿರ್ಧಾರವನ್ನು ಮಾಡಲು ಹೋಗಬೇಡಿ. ಎಲ್ಲ ವಿಚಾರದಲ್ಲೂ ಸೋಲಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರಿಂದ ಯಾವುದೇ ಅಕ್ಕರೆಗಳು ನಿಮಗೆ ಸಿಗದೆ ಇರಬಹುದು. ನಾಳೆ ಎಲ್ಲವೂ ಈ ಸಮಸ್ಯೆ ಪರಿಹಾರವಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೂ ಇಂದು ಉತ್ತಮ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯದಲ್ಲೂ ಅತೀ ಹೆಚ್ಚಿನ ನೆಮ್ಮದಿ ಸಿಗಲಿದೆ. ಇತರರಿಂದಲೂ ಸಹಕಾರ ಪ್ರಾಪ್ತಿಯಾಗಲಿದೆ. ಇವತ್ತಿನ ದಿನ ಒಳಿತಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮ ದಿನ ಆಗಲಿದ್ದು ಕಾರ್ಯ ಕ್ಷೇತ್ರದಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಶತ್ರುಗಳಿಂದ ಯಾವುದೇ ರೀತಿಯ ಭಾದೆಗಳು ಇರುವುದಿಲ್ಲ.
ಇದನ್ನು ಓದಿ:Daily Horoscope: ದಿನ ಭವಿಷ್ಯ- ಶತಭಿಷಾ ನಕ್ಷತ್ರದ ಈ ರಾಶಿಗೆ ಇಂದು ಭಾರೀ ಯಶಸ್ಸು!
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ ಆಗಲಿದೆ. ವ್ಯವಹಾರ ಮಾಡುವವರಿಗೆ ಸ್ವಲ್ಪ ಕಷ್ಟವಾಗಲಿದೆ. ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಲಿದೆ. ಆದ್ದರಿಂದ ಬಹಳ ಹುಷಾರಾಗಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಲಬೇಕು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನೆಯ ಜವಾಬ್ದಾರಿಗಳು ಹೆಚ್ಚಾಗಬಹುದು. ವಾಹನ ಸೌಕರ್ಯಗಳತ್ತ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಡ್ಯಾಕುಮೆಂಟ್, ಕೋರ್ಟ್ ಇತ್ಯಾ ದಿಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸ್ವಲ್ಪ ಮಟ್ಟನ ಹಣಕಾಸಿನ ತೊಂದರೆ ಕಾಡಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಬಂಧು ಬಾಂಧವರಿಂದ ಸಂತೋಷ ಪ್ರಾಪ್ತಿಯಾಗಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ .
ಕುಂಭರಾಶಿ: ಕುಂಭ ರಾಶಿಯವರಿಗೆ ಸಂಸಾರದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಹಣಕಾಸಿನ ವೆಚ್ಚಗಳು ಕೂಡ ಜಾಸ್ತಿಯಾಗಲಿದೆ. ದೊಡ್ಡ ರೀತಿಯ ಖರ್ಚುಗಳು ಇಂದು ಉಂಟಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನ ಆಗಲಿದ್ದು, ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಹಿಂದೆ ಇದ್ದ ತೊಂದರೆ ನಿವಾರಣೆಯಾಗಲಿದೆ. ಇತರರಿಂದ ಸಹಕಾರ ಪ್ರಾಪ್ತಿಯಾಗಲಿದೆ. ಸಂತೋಷದಿಂದ ದಿನ ಕಳೆಯುತ್ತೀರಿ.