ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದಶಮಿ ತಿಥಿ ಪೂರ್ವಭಾದ್ರಪ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಮೇಷ ರಾಶಿಗೆ ಇಂದು ಇಷ್ಟಾರ್ಥ ಸಿದ್ದಿ, ನೆಮ್ಮದಿ ತರುವ ದಿನವಾಗಲಿದೆ. ಮಿತ್ರರಿಂದ ಧನಾಗಮನ, ಅತ್ಯಂತ ಸಂತಸದ ದಿನ.
ವೃಷಭ ರಾಶಿ: ಕಾರ್ಯಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ಅದೃಷ್ಟದ ದಿನವಾಗಲಿದೆ. ಹಿರಿಯರಿಂದ ಆಶೀರ್ವಾದ ಪಡೆಯಲು ಮರೆಯಬೇಡಿ. ಅದರಿಂದ ಮಾತ್ರ ಕಾರ್ಯಸಿದ್ಧಿಯಾಗಲಿದೆ.
ಕಟಕ ರಾಶಿ: ಕಷ್ಟದ ದಿನ. ಮುಖ್ಯವಾದ ನಿರ್ಧಾರಗಳನ್ನು ಈ ದಿನ ಮಾಡದೇ ಇರುವುದು ಒಳ್ಳೆಯದು. ಮನಸ್ಸಿಗೆ ಸಮಾಧಾನ ಇರುವುದಿಲ್ಲ.
ಸಿಂಹ ರಾಶಿ: ಅತ್ಯುತ್ತಮ ದಿನ. ಪಾರ್ಟರ್ ಶಿಪ್‌ನಲ್ಲಿ ಯಶಸ್ಸು. ಮನಸ್ಸಿಗೆ ನೆಮ್ಮದಿ ಇರಲಿದೆ.
ಕನ್ಯಾ ರಾಶಿ: ಶತ್ರುಗಳು, ಅಡೆತಡೆಗಳು ಹಿಮ್ಮೆಟ್ಟುತ್ತವೆ. ಹೀಗಾಗಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ತುಲಾ ರಾಶಿ: ಪ್ರೇಮ, ಪ್ರೀತಿ, ದಾಂಪತ್ಯದಲ್ಲಿ ಸ್ವಲ್ಪ ಸೋಲು ಅನುಭವಿಸಬೇಕಾಗಬಹುದು. ಸಾಧಾರಣವಾದ ದಿನವಾಗಲಿದೆ.
ವೃಶ್ಚಿಕ ರಾಶಿ: ಅಸ್ತಿ, ಪಾಸ್ತಿ ವಿಚಾರಗಳು, ಮನೆಯ ವಿಚಾರಗಳು, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.
ಧನಸ್ಸು ರಾಶಿ: ಅತ್ಯುತ್ತಮ ದಿನ. ಪರಾಕ್ರಮದಿಂದ ಸಾಧನೆ ಮಾಡುವ ದಿನ. ಅಣ್ಣ, ತಮ್ಮಂದಿರು ಸ್ನೇಹಿತರು, ನೆರೆಹೊರೆಯವರೆಲ್ಲ ನಿಮ್ಮೊಂದಿಗೆ ಇರುತ್ತಾರೆ.
ಮಕರ ರಾಶಿ: ಸುಖ ಸ್ಥಾನದಲ್ಲಿ ಚಂದ್ರ ಬಂದಿರುವುದರಿಂದ ಮನೆಯಲ್ಲಿ ಸುಖ, ಹೆಚ್ಚು ಹಣವನ್ನು ಮನೆಯವರಿಗಾಗಿ ಖರ್ಚು ಮಾಡುತ್ತೀರಿ, ಧನಾಗಮನ ಕೂಡ ಸಾಧ್ಯ.
ಕುಂಭರಾಶಿ: ರಾಶಿಗೆ ಚಂದ್ರ ಬಂದಿರುವುದರಿಂದ ಇರುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ. ಹಿಂದಿನ ಮೂರು-ನಾಲ್ಕು ದಿನಗಳಿಂದ ಇದ್ದ ಎಲ್ಲ ಕ್ಲೇಶಗಳಿಗೂ ಇಂದು ಸಮಾಧಾನ ಪ್ರಾಪ್ತಿಯಾಗುತ್ತದೆ.
ಸೋಮವಾರ ಈ ಬಿಳಿ ವಸ್ತುಗಳನ್ನು ದಾನ ಮಾಡಿದರೆ ಶಿವನ ಕೃಪೆ, ಐಶ್ವರ್ಯ ಮತ್ತು ಮನಶಾಂತಿ ದೊರೆಯುತ್ತದೆ!
ಮೀನ ರಾಶಿ: ಸ್ವಲ್ಪ ಮಾತುಕತೆಗಳಲ್ಲಿ ಜಾಗರೂಕತೆ ಅವಶ್ಯಕ. ಮಿತ್ರರಲ್ಲಿ ಒಡಕು ಉಂಟಾಗುವ ಭಯ ಕಾಡುವ ಸಾಧ್ಯತೆ ಇದೆ. ಎರಡು ದಿನಗಳ ಬಳಿಕ ಎಲ್ಲವೂ ಪರಿಹಾರವಾಗುತ್ತದೆ.