ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Lakshmi Pooje: ದೀಪಾವಳಿ ಹಬ್ಬದ ಮಹತ್ವವೇನು? ಪೂಜಾ ವಿಧಿ-ವಿಧಾನಗಳನ್ನು ತಿಳಿಯಿರಿ

ನಮ್ಮ ಜೀವನದಲ್ಲಿ ಧನ ಸಂಪತ್ತು ವೃದ್ಧಿಯಾಗಬೇಕಾದ್ರೆ ಅದಕ್ಕೆ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಂಡಿರಬೇಕು. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಮತ್ತು ಆಕೆಯನ್ನು ಪೂಜಿಸುವ ಮನೆಯಲ್ಲಿ ಎಂದಿಗೂ ಸಂಪತ್ತಿಗೆ ಕೊರತೆಯಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಬಡತನ ಬರುವುದಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂದು ದೀಪಾವಳಿ ಪ್ರಯುಕ್ತ ಎಲ್ಲೆಡೆ ಲಕ್ಷ್ಮೀ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪೂಜಾ ವಿಧಾನ ಬಗ್ಗೆ ಮಾಹಿತಿ ಇಲ್ಲಿಸೆಂ

ಬೆಂಗಳೂರು: ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಕತ್ತಲೆಯ ಮೇಲೆ ಬೆಳಕಿನ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ದೀಪಾವಳಿ ಹಬ್ಬ ಸಂಕೇತಿಸುತ್ತದೆ. ದೀಪಾವಳಿ(Deepavali) ಹಬ್ಬದ ಇತಿಹಾಸ, ಮಹತ್ವ ಹಾಗೂ ಲಕ್ಷ್ಮೀ ಪೂಜಾ ವಿಧಿ-ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ.

ಬೆಳಕಿನ ಹಬ್ಬದ ಇತಿಹಾಸ

ಭಾರತದ ಪ್ರಸಿದ್ಧ ಹಬ್ಬಗಳಲ್ಲೊಂದಾದ ದೀಪಾವಳಿಯನ್ನು ಅಶ್ವಿನಿ ಮಾಸದ ಅಮಾವಾಸ್ಯೆಯ ತಿಥಿಯಂದು ಆಚರಿಸುವುದು ಸಂಪ್ರದಾಯ. ಶ್ರೀರಾಮ 14 ವರ್ಷಗಳ ವನವಾಸದ ನಂತರ ರಾವಣನನ್ನು ಸೋಲಿಸಿ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಆಗ ಅಲ್ಲಿನ ಜನರು ಪ್ರಭು ಶ್ರೀರಾಮನನ್ನು ದೀಪಗಳ ಮೂಲಕ ಸ್ವಾಗತಿಸಿಕೊಳ್ಳುತ್ತಾರೆ. ಅಂದಿನಿಂದ ಆ ಶುಭದಿನವನ್ನೇ ದೀಪಾವಳಿ ಎಂದು ಆಚರಿಸಲಾಗುತ್ತಿದೆ ಎಂಬ ನಂಬಿಕೆ ಇದೆ.

ದೀಪಾವಳಿಯ ಮಹತ್ವ

ದೀಪಾವಳಿಯು ಅಂಧಕಾರದ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ ಹಾಗೂ ಕೆಟ್ಟದರ ಮೇಲೆ ಒಳ್ಳೆಯದು ಗೆಲುವು ಸಾಧಿಸಿದ ಸಂಕೇತವಾಗಿದೆ. ಗಣೇಶ ಮತ್ತು ಲಕ್ಷ್ಮಿ ದೇವಿಯ ಆರಾಧನೆಯ ನಂತರ ಉಡುಗೊರೆಗಳ ವಿನಿಮಯವು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ.

ಹಿಂದೂಗಳು ದೀಪಾವಳಿಯನ್ನು ಅದೃಷ್ಟ ಮತ್ತು ಧನಸಂಪತ್ತನ್ನು ತರುವ ಶುಭದಿನವೆಂದು ಪರಿಗಣಿಸುತ್ತಾರೆ. ಇದನ್ನು ಹೊಸ ಆರಂಭದ ಸಂಕೇತವಾಗಿ ನೋಡಲಾಗುತ್ತದೆ ಮತ್ತು ಹೊಸ ವ್ಯಾಪಾರಗಳು, ಉದ್ಯಮಗಳನ್ನು ಆರಂಭಿಸಲು ಅತ್ಯಂತ ಶುಭದಿನವೆಂದು ನಂಬಲಾಗುತ್ತದೆ.

ಹಬ್ಬದಾಚರಣೆಗೆ ಶುಭ ಮುಹೂರ್ತ

ದೀಪಾವಳಿ ತಿಥಿಯು ಅಕ್ಟೋಬರ್ 20ರ ಮಧ್ಯಾಹ್ನ 3.44ರಿಂದ ಪ್ರಾರಂಭವಾಗಿ ಅಕ್ರೋಬರ್ 21ರ ಸಂಜೆ 5.55ಕ್ಕೆ ಮುಕ್ತಾಯವಾಗಲಿದೆ. ಸಂಜೆ 7.08ರಿಂದ 8.18ರವರೆಗೆ ತಾಯಿ ಲಕ್ಷ್ಮೀ ಪೂಜೆಗೆ ಶುಭ ಮುಹೂರ್ತವಿದೆ.

ಲಕ್ಷ್ಮೀ ಪೂಜಾ ವಿಧಿ-ವಿಧಾನಗಳು

- ಲಕ್ಷ್ಮಿ ಪೂಜೆಗೆ ಮುನ್ನ ಮನೆಯನ್ನು ಸ್ವಚ್ಛತೆಗೊಳಿಸಿ. ಬಳಿಕ ಸ್ನಾನ ಮಾಡಿ ಹೊಸ ಬಟ್ಟೆ ಅಥವಾ ಶುದ್ಧವಾದ ಬಟ್ಟೆಯನ್ನು ಧರಿಸಿ, ಎಲ್ಲೆಡೆ ಗಂಗಾ ಜಲವನ್ನು ಸಿಂಪಡಿಸಿ.

- ಮನೆಯ ಮುಂದೆ ರಂಗೋಲಿ ಹಾಕಿ, ತೋರಣ ಕಟ್ಟಿ

- ಲಕ್ಷ್ಮಿ ಪೂಜೆಗಾಗಿ, ಮೊದಲು ಸ್ವಚ್ಛವಾದ ಪೀಠದ ಮೇಲೆ ಹೊಸ ಕೆಂಪು ಬಟ್ಟೆಯನ್ನು ಹರಡಿ. ಅದರ ಮೇಲೆ ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಸ್ಥಾಪಿಸಿ, ಹೂವು ತೋರಣಗಳಿಂದ ಅಲಂಕರಿಸಿ.

- ಒಂದು ಶುದ್ಧವಾದ ಕಲಶದಲ್ಲಿ ನೀರನ್ನು ತುಂಬಿಸಿ ಪೀಠದ ಬಳಿ ಇರಿಸಿ. ಬಳಿಕ ದೇವರಿಗೆ ತಿಲಕವನ್ನು ಹಚ್ಚಿ.

- ಲಕ್ಷ್ಮಿ ಮತ್ತು ಗಣೇಶನಿಗೆ ತಾಜಾ ಹೂಗಳಿಂದ ಅಲಂಕರಿಸಿ. ಕಮಲದ ಹೂವನ್ನು ಅರ್ಪಿಸಲು ಮರೆಯದಿರಿ.

- ಅಕ್ಕಿ ಧಾನ್ಯಗಳು, ಬೆಳ್ಳಿ ನಾಣ್ಯಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳೊಂದಿಗೆ ನೈವೇದ್ಯಗಳನ್ನೂ ಅರ್ಪಿಸಿ.

- ಈ ದಿನ ನೀವು ಯಾವುದೇ ಹೊಸ ವಸ್ತು, ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಿದ್ದರೆ, ಅದನ್ನು ಲಕ್ಷ್ಮಿ ದೇವಿಯ ಬಳಿ ಇರಿಸಿ.

- ಶುದ್ಧ ದೇಸಿ ತುಪ್ಪದ ದೀಪ ಹಚ್ಚಿ, ಮನೆಯ ಮೂಲೆಯಲ್ಲಿ ಕನಿಷ್ಠ 21 ದೀಪಗಳನ್ನು ಹಚ್ಚಿ.

- ಗಣೇಶನಿಗೆ ಮೊದಲು ಆರತಿಯನ್ನು ಮಾಡಿ, ನಂತರ ಲಕ್ಷ್ಮೀಗೆ ಬೆಳಗಿ

- ಲಕ್ಷ್ಮಿ ಮತ್ತು ಗಣೇಶ ಮಂತ್ರಗಳನ್ನು ಪಠಿಸಿ.

- ಕೊನೆಯಲ್ಲಿ, ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವಾಗ, ಪೂಜೆಯ ಸಮಯದಲ್ಲಿ ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಿ

.