Vastu Tips: ಮೊಬೈಲ್ ವಾಲ್‌ಪೇಪರ್ ನಲ್ಲಿ ಬಳಸಲೇಬಾರದ ಚಿತ್ರ, ಬಣ್ಣಗಳು ಯಾವುದು ಗೊತ್ತೇ?
ವಾಸ್ತು ಶಾಸ್ತ್ರ ಬರೆಯುವಾಗ ಯಾವುದೇ ಆಧುನಿಕ ತಂತ್ರಜ್ಞಾನಗಳು ಇಲ್ಲದೇ ಇದ್ದರೂ ನಾವು ದಿನ ಹೆಚ್ಚಾಗಿ ನೋಡುವ, ಬಳಸುವ ವಸ್ತುಗಳು ಹೇಗಿರಬೇಕು ಎಂಬುದನ್ನು ವಾಸ್ತು ತಜ್ಞರು ಹೇಳಿದ್ದಾರೆ. ಹೀಗಾಗಿ ನಾವು ಇಂದು ಹೆಚ್ಚಾಗಿ ಬಳಸುವ, ನೋಡುವ ಸಾಧನಗಳಲ್ಲಿ ಒಂದಾದ ಮೊಬೈಲ್ ಸ್ಕ್ರೀನ್ ಗಳು ಹೇಗಿರಬೇಕು, ಯಾವ ರೀತಿಯ ವಾಲ್‌ಪೇಪರ್ ಹಾಕಿಕೊಳ್ಳಬೇಕು.. ಹೀಗೆ ಹಲವು ರೀತಿಯ ಪ್ರಶ್ನೆಗಳಿಗೆ ವಾಸ್ತು ತಜ್ಞರು ನೀಡಿರುವ ಉತ್ತರ ಇಲ್ಲಿದೆ.


ಎಲ್ಲರ ಕೈಯಲ್ಲೂ ಇಂದು ಮೊಬೈಲ್ (Vastu for Mobile) ಇದ್ದೇ ಇರುತ್ತೆ. ಇದು ನಮ್ಮ ಮನಸ್ಸು, ಆರೋಗ್ಯದ ಮೇಲೆ ಬೀರುವ ಪರಿಣಾಮ ಕಡಿಮೆಯೇನಲ್ಲ. ಹೀಗಾಗಿ ನಾವು ನಿತ್ಯ ಹೆಚ್ಚಾಗಿ ಬಳಸುವ ಮೊಬೈಲ್ ನ ಸ್ಕ್ರೀನ್ (vastu for mobile screen) ಹೇಗಿರಬೇಕು, ಅದಕ್ಕೆ ಯಾವ ರೀತಿಯ ವಾಲ್‌ಪೇಪರ್ ಹಾಕಬೇಕು, ಯಾವ ರೀತಿಯ ವಾಲ್‌ಪೇಪರ್ (vastu for mobile wallpaper) ಹಾಕಬಾರದು ಎನ್ನುವ ಕುರಿತು ವಾಸ್ತು (Vastu Tips) ನಿಯಮಗಳಿವೆ. ಇದನ್ನು ನಿರ್ಲಕ್ಷಿಸಿದರೆ ಅದು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನೇ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಸಾಮಾನ್ಯವಾಗಿ ನಾವು ಮೊಬೈಲ್ ನಲ್ಲಿ ಬಳಸುವ ವಾಲ್‌ಪೇಪರ್ ಅನ್ನು ನಾವು ಹೆಚ್ಚಾಗಿ ನೋಡುತ್ತಿರುತ್ತೇವೆ. ಹೀಗಾಗಿ ಅದು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ವಾಲ್‌ಪೇಪರ್ ಹಾಕುವಾಗ ಅದು ನಮ್ಮ ವ್ಯಕ್ತಿತ್ವದ ಮೇಲೆ ಅಥವಾ ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವಾಲ್‌ಪೇಪರನ್ನೇ ಹಾಕಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಒಂದು ವೇಳೆ ಹಾಕದೇ ಇದ್ದರೆ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು.
ಸಾಮಾನ್ಯವಾಗಿ ನಾವು ಮೊಬೈಲ್ ಗೆ ಹಾಕುವ ವಾಲ್‌ಪೇಪರ್ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನೋಡಲು ಸುಂದರವಾಗಿ ಕಾಣುವಂತಹ ಅಥವಾ ಯಾವುದಾದರೂ ಹೆಚ್ಚು ಖುಷಿ ಕೊಡುವ ವಿಷಯದ ಚಿತ್ರವನ್ನು ವಾಲ್‌ಪೇಪರ್ ಮಾಡಿಬಿಡುತ್ತೇವೆ. ಆದರೆ ಇದು ಸರಿಯಲ್ಲ.
ವಾಸ್ತು ಶಾಸ್ತ್ರವು ವ್ಯಕ್ತಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಬಗ್ಗೆಯೂ ಹೇಳುತ್ತದೆ. ಯಾಕೆಂದರೆ ಪ್ರತಿಯೊಂದು ವಸ್ತುವು ವ್ಯಕ್ತಿಯ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಇಂತಹ ಸಂದರ್ಭದಲ್ಲಿ ನಾವು ಬಳಸುವ ಮೊಬೈಲ್ ಬಗ್ಗೆಯೂ ವಾಸ್ತು ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಅವರು ಮೊಬೈಲ್‌ಗೆ ಸಂಬಂಧಿಸಿದ ವಾಸ್ತು ನಿಯಮಗಳ ಕುರಿತು ಹೇಳುವುದು ಹೀಗೆ..

ವಾಲ್‌ಪೇಪರ್ ಹೇಗಿರಬೇಕು?
ಮೊಬೈಲ್ ಪರದೆಯ ಮೇಲಿನ ವಾಲ್‌ಪೇಪರ್ ನಮ್ಮ ವ್ಯಕ್ತಿತ್ವ ಅಥವಾ ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಬಗ್ಗೆ ಚೆನ್ನಾಗಿ ಚಿಂತನೆ ಮಾಡಿ ಬಳಿಕ ವಾಲ್‌ಪೇಪರ್ ಹಾಕಿಕೊಳ್ಳುವುದು ಉತ್ತಮ.ಮೊಬೈಲ್ ಪರದೆಯ ಮೇಲಿನ ವಾಲ್‌ಪೇಪರ್ ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಪರದೆಯ ಮೇಲೆ ಯಾವ ರೀತಿಯ ವಾಲ್‌ಪೇಪರ್ ಬಳಸಬಾರದು ಎಂಬುದು ತಿಳಿದಿರಬೇಕು.
ಮೊಬೈಲ್‌ನಲ್ಲಿ ಯಾವತ್ತೂ ಧಾರ್ಮಿಕ ಸ್ಥಳಗಳ ವಾಲ್‌ಪೇಪರ್ ಅನ್ನು ಬಳಸಬಾರದು. ಯಾಕೆಂದರೆ ನಾವು ಮೊಬೈಲ್ ಫೋನ್ ಅನ್ನು ಕೊಳಕು ಕೈಗಳಿಂದ ಹಿಡಿದಿಟ್ಟುಕೊಳ್ಳುತ್ತೇವೆ. ಎಲ್ಲೆಂದರಲ್ಲಿ ಇಟ್ಟು ಬಿಡುತ್ತೇವೆ. ಕೆಲವರು ಮೊಬೈಲ್ ಫೋನ್ ಅನ್ನು ಶೌಚಾಲಯ ಅಥವಾ ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ, ಧಾರ್ಮಿಕ ಸ್ಥಳದ ಫೋಟೋವನ್ನು ಹಾಕುವುದು ಸರಿಯಲ್ಲ. ಯಾಕೆಂದರೆ ಅದು ಆ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾದ ದೇವರಿಗೆ ಅವಮಾನ ಮಾಡಿದಂತೆ. ಇದರಿಂದ ನಕಾರಾತ್ಮಕ ದೃಷ್ಟಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.
ವಾಲ್‌ಪೇಪರ್ ನಲ್ಲಿ ಯಾವತ್ತೂ ಭಾವನಾತ್ಮಕ ಚಿತ್ರವನ್ನು ಹಾಕಬಾರದು. ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳಲ್ಲಿ ದುಃಖ, ಸಾವು, ಕೋಪ, ಅಸೂಯೆ ಅಥವಾ ದುರಾಸೆಯನ್ನು ಚಿತ್ರಿಸುವ ವಾಲ್‌ಪೇಪರ್‌ಗಳು ಮನಸ್ಸಿನ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಕೋಪ, ಬೇಸರ, ಹತಾಶೆ ಹೆಚ್ಚಾಗುತ್ತದೆ.
ಇದನ್ನೂ ಓದಿ: Vastu Tips: ಗೃಹ ಪ್ರವೇಶಕ್ಕೆ ಯಾವ ಉಡುಗೊರೆ ನೀಡಬಾರದು ಗೊತ್ತಿದೆಯೆ?
ದೇವರ ಚಿತ್ರಗಳನ್ನು ಯಾವತ್ತೂ ಮೊಬೈಲ್‌ನಲ್ಲಿ ವಾಲ್‌ಪೇಪರ್ ಹಾಕಬಾರದು. ಇದು ಸಂಪೂರ್ಣವಾಗಿ ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ದೇವರ ಚಿತ್ರಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಗ್ರಹ ದೋಷ ಉಂಟಾಗುತ್ತದೆ ಮತ್ತು ಒಂಬತ್ತು ಗ್ರಹಗಳು ಜೀವನದಲ್ಲಿ ಅಶುಭ ಪರಿಣಾಮವನ್ನು ಬೀರತೊಡಗುತ್ತದೆವೆ.
ಕೆಲವೊಂದು ಬಣ್ಣಗಳನ್ನು ವಾಲ್‌ಪೇಪರ್ ಗೆ ಹಾಕುವುದನ್ನು ತಪ್ಪಿಸಬೇಕು. ಅವುಗಳಲ್ಲಿ ಮುಖ್ಯವಾಗಿ ಕಪ್ಪು, ನೀಲಿ, ನೇರಳೆ, ಕಂದು ಇತ್ಯಾದಿ ಗಾಢ ಬಣ್ಣದ ವಾಲ್‌ಪೇಪರ್‌ಗಳನ್ನು ಮೊಬೈಲ್ ಪರದೆಯ ಮೇಲೆ ಬಳಸಬಾರದು. ಇದು ಜೀವನದಲ್ಲಿ ಯಶಸ್ಸಿಗೆ ಅಡ್ಡಿಯಾಗುತ್ತದೆ. ಉದ್ಯೋಗ, ವೃತ್ತಿ ಅಥವಾ ವ್ಯವಹಾರದಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ.