ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಗೃಹ ಪ್ರವೇಶಕ್ಕೆ ಯಾವ ಉಡುಗೊರೆ ನೀಡಬಾರದು ಗೊತ್ತಿದೆಯೆ?

ಶುಭ ಸಮಾರಂಭಗಳ ವೇಳೆ ಉಡುಗೊರೆಗಳನ್ನು ಕೊಡುವುದು ಶಾಸ್ತ್ರ. ಅದರಲ್ಲೂ ಸ್ನೇಹಿತರು, ಬಂಧು-ಬಳಗದವರ ಗೃಹಪ್ರವೇಶ ಸಂದರ್ಭದಲ್ಲಿ ಬರಿಗೈಯಲ್ಲಿ ಹೋಗುವುದು ಬೇಸರದ ಸಂಗತಿ. ಹೀಗಾಗಿ ಮನೆಯ ಉಪಯೋಗಕ್ಕೆ ಆಗುತ್ತೆ ಅಥವಾ ಅವರು ನಮ್ಮ ನೆನಪಿಗಾಗಿ ಇಟ್ಟುಕೊಳ್ಳುತ್ತಾರೆ ಎಂದುಕೊಂಡು ನಾವು ತೆಗೆದುಕೊಂಡು ಹೋಗುವ ಉಡುಗೊರೆಗಳು ಅವರ ಮನೆಗೆ ಅಶುಭವನ್ನು ಉಂಟು ಮಾಡಬಹುದು. ಹೀಗಾಗಿ ಗೃಹಪ್ರವೇಶ ಸಮಾರಂಭಕ್ಕೆ ಹೋಗುವಾಗ ಯಾವ ಉಡುಗೊರೆ ತೆಗೆದುಕೊಂಡು ಹೋಗಬಾರದು ಎನ್ನುವುದನ್ನು ಮೊದಲೇ ತಿಳಿದಿದ್ದರೆ ಉತ್ತಮ.

ಗೃಹ ಪ್ರವೇಶಕ್ಕೆ ನೀಡಲೇಬಾರದ ಉಡುಗೊರೆಗಳು ಇವು

ಬೆಂಗಳೂರು: ಶುಭ ಸಮಾರಂಭಗಳಿಗೆ ಹೋದಾಗ ಉಡುಗೊರೆಗಳನ್ನು (Vastu for gift) ಕೊಡುವ ಸಂಪ್ರದಾಯ ಹಿಂದೂ ಶಾಸ್ತ್ರದಲ್ಲಿದೆ. ಹಾಗಂತ ಏನೋ ಕೊಟ್ಟು ಬಂದರಾಯಿತು ಎಂದುಕೊಂಡರೆ ಅದರ ದುಷ್ಪರಿಣಾಮಗಳು ಮುಂದೆ ನಮ್ಮ ಪ್ರೀತಿಪಾತ್ರರು ಅನುಭವಿಸಬೇಕಾಗುತ್ತದೆ ಎಚ್ಚರ. ಸ್ನೇಹಿತರು, ಬಂಧು-ಬಳಗದವರ ಗೃಹಪ್ರವೇಶಕ್ಕೆ ಹೋದಾಗ ಏನಾದರೊಂದು ಉಡುಗೊರೆ (vastu for Housewarming Presents) ತೆಗೆದುಕೊಂಡು ಹೋಗುವುದು ವಾಡಿಕೆ. ಆದರೆ ನಾವು ತೆಗೆದುಕೊಂಡು ಹೋಗುವ ಉಡುಗೊರೆಗಳು ಹೊಸ ಮನೆಯಲ್ಲಿ ನಕಾರಾತ್ಮಕತೆಯನ್ನು ಆಕರ್ಷಿಸಬಾರದು. ಅದಕ್ಕಾಗಿ ಗೃಹಪ್ರವೇಶ ಸಂದರ್ಭದಲ್ಲಿ ಏನು ಉಡುಗೊರೆ ನೀಡಬೇಕು, ಏನು ನೀಡಬಾರದು ಎಂದು ಮೊದಲೇ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಕುರಿತು ವಾಸ್ತು ನಿಯಮಗಳು ಏನಿವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರವುದು ಬಹಳ ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.

ಸ್ನೇಹಿತರು, ಬಂಧು-ಬಳಗದವರು ಖರೀದಿ ಮಾಡಿದ ಅಥವಾ ಕಟ್ಟಿಸಿದ ಹೊಸ ಮನೆಯ ಗೃಹ ಪ್ರವೇಶಕ್ಕೆ ಹೋದಾಗ ಉಡುಗೊರೆ ನೀಡುವುದು ಸಂಪ್ರದಾಯ ಮಾತ್ರವಲ್ಲ ಉತ್ತಮ ನಡವಳಿಕೆಯೂ ಹೌದು. ಇದು ಅವರ ಮೇಲೆ ನಿಮಗಿರುವ ಪ್ರೀತಿ, ವಿಶ್ವಾಸ ಮತ್ತು ಕಾಳಜಿಯನ್ನು ತೋರಿಸುತ್ತದೆ. ಕೆಲವೊಮ್ಮೆ ಈ ಉಡುಗೊರೆಗಳು ಅದನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಸಂತೋಷವನ್ನೂ ಕೊಡುತ್ತದೆ.

ಸಾಮಾನ್ಯವಾಗಿ ಗೃಹಪ್ರವೇಶದ ವೇಳೆ ನೀಡಬಾರದ ಕೆಲವೊಂದು ಉಡುಗೊರೆಗಳಿವೆ. ಇದರಿಂದ ಹೊಸ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ನಿಷ್ಪ್ರಯೋಜಕ ಉಡುಗೊರೆ ನೀಡುವ ಬದಲು ಏನಾದರೂ ಉಪಯುಕ್ತವಾದುದನ್ನು ನೀಡುವ ಎಂದು ಯೋಚಿಸಿದರೆ ಆದರಲ್ಲಿ ನೀಡಬಾರದ ವಸ್ತುಗಳ ಬಗ್ಗೆ ಮೊದಲು ತಿಳಿದಿರಲಿ. ನೀವೇನೋ ಸಹಾಯ ಮಾಡುವ ಉದ್ದೇಶದಿಂದ ಕೊಟ್ಟರೂ ಅದನ್ನು ತೆಗೆದುಕೊಂಡವರಿಗೆ ತೊಂದರೆಯಾದರೆ ಬೇಸರ, ದುಃಖ ಎಲ್ಲರಿಗೂ ಆಗುತ್ತದೆ ಅಲ್ಲವೇ?

ಗೃಹಪ್ರವೇಶದ ಸಮಯದಲ್ಲಿ ನೀಡಲೇಬಾರದ ಕೆಲವೊಂದು ಉಡುಗೊರೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಇಂತಿವೆ.

gift2

ಚಾಕು-ಚೂರಿ

ಅಡುಗೆ ಮನೆಯಲ್ಲಿ ಉಪಯೋಗವಾಗುವ ಚಾಕುಗಳನ್ನು ಎಂದಿಗೂ ಗೃಹಪ್ರವೇಶದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಬಾರದು. ಯಾಕೆಂದರೆ ಅವು ದುರದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಅನೇಕ ಸಂಸ್ಕೃತಿಗಳಲ್ಲಿ ತೀಕ್ಷ್ಣವಾದ ವಸ್ತುಗಳನ್ನು ನೀಡುವುದು ಎಂದರೆ ಸ್ನೇಹವನ್ನು ಕತ್ತರಿಸುವುದು ಎಂದು ಹೇಳಲಾಗುತ್ತದೆ. ಅಲಂಕಾರಿಕವಾಗಿ ಅವು ಕಂಡರೂ ಅದನ್ನು ನೀಡದೇ ಇರುವುದು ಉತ್ತಮ.

ಆರೈಕೆಗೆ ಕಷ್ಟವಾದ ಗಿಡಗಳು

ಸಸ್ಯಗಳು ಸುಂದರವಾಗಿದ್ದರೂ ಅವುಗಳನ್ನು ನೋಡಿಕೊಳ್ಳಲು ಎಲ್ಲರಿಗೂ ಸಮಯ ಅಥವಾ ಕೌಶಲವಿರುವುದಿಲ್ಲ. ಕೆಲವು ಸಸ್ಯಗಳು ಹೆಚ್ಚು ನಿರ್ವಹಣೆಯನ್ನು ಬಯಸುತ್ತವೆ. ಇದು ಸಂತೋಷಕ್ಕಿಂತ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಹೀಗಾಗಿ ಇಂತಹ ಸಸ್ಯಗಳನ್ನು ನೀಡದೇ ಇರುವುದು ಒಳ್ಳೆಯದು.

ಅಲಂಕಾರ ವಸ್ತುಗಳು

ಕಲಾಕೃತಿ, ಹೂದಾನಿ ಅಥವಾ ಪ್ರತಿಮೆಗಳಂತಹ ವಸ್ತುಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಇದು ಮನೆಯ ಅಲಂಕಾರಕ್ಕಿಂತ ತುಂಬಾ ವೈಯಕ್ತಿಕ ಆಯ್ಕೆಯಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರು ಏನು ಇಷ್ಟಪಡುತ್ತಾರೆ ಎಂಬುದನ್ನು ತಿಳಿಯದೆ ಈ ಉಡುಗೊರೆಗಳನ್ನು ನೀಡುವುದು ಸರಿಯಲ್ಲ.

ಪರಿಮಳಯುಕ್ತ ಮೇಣದಬತ್ತಿ ಅಥವಾ ಸ್ಪ್ರೇಗಳು

ಸುಗಂಧ ದ್ರವ್ಯಗಳು ಒಳ್ಳೆಯದು ಎಂದೆನಿಸಬಹುದು. ಆದರೆ ಎಲ್ಲರಿಗೂ ಇದು ಇಷ್ಟವಾಗುವುದಿಲ್ಲ. ಕೆಲವರು ಬಲವಾದ ವಾಸನೆಗಳಿಂದ ಅಲರ್ಜಿ ತೊಂದರೆಯನ್ನು ಅನುಭವಿಸುತ್ತಾರೆ. ಒಂದುವೇಳೆ ಈ ಉಡುಗೊರೆ ನೀಡುವುದಾದರೆ ನೈಸರ್ಗಿಕ ಪರಿಮಳವನ್ನು ಆಯ್ಕೆ ಮಾಡಿಕೊಳ್ಳಿ.

ಗಡಿಯಾರಗಳು

ಕೆಲವು ಸಂಪ್ರದಾಯಗಳಲ್ಲಿ ಗಡಿಯಾರವನ್ನು ಉಡುಗೊರೆಯಾಗಿ ನೀಡಲೇಬಾರದು. ಇದು ಅಶುಭವೆಂದು ಪರಿಗಣಿಸಲಾಗುತ್ತದೆ . ಇದನ್ನು ಉಡುಗೊರೆಯಾಗಿ ನೀಡುವುದು ಎಂದರೆ ಸಂಬಂಧದ ಅಂತ್ಯವನ್ನು ಎಣಿಸುವುದು ಎಂದರ್ಥ. ಗಡಿಯಾರವು ಸುಂದರವಾಗಿ ಕಂಡರೂ ಅದನ್ನು ನೀಡದೇ ಇರುವುದು ಒಳ್ಳೆಯದು.

ಬಳಸಿದ ವಸ್ತುಗಳು

ಸೆಕೆಂಡ್ ಹ್ಯಾಂಡ್ ವಸ್ತುಗಳು ಪರಿಸರ ಸ್ನೇಹಿಯಾಗಿರಬಹುದು. ಆದರೆ ವಿಶೇಷವಾಗಿ ಹೊಸ ಮನೆಗೆ ಹೋಗುವಂತಹ ವಿಶೇಷ ಸಮಯದಲ್ಲಿ ಅವುಗಳನ್ನು ಉಡುಗೊರೆಯಾಗಿ ನೀಡಬಾರದು. ಹೆಚ್ಚಿನ ಹೊಸ ಮನೆಯಲ್ಲಿ ಹೊಸ ಜೀವನ ಪ್ರಾರಂಭಿಸುವಾಗ ಹೊಸತನ್ನು ಬಯಸುತ್ತಾರೆ.

ಇದನ್ನೂ ಓದಿ: Viral Video: ಪಾಕೆಟ್‌ ಮನಿಯನ್ನು ಭಾರತೀಯ ಸೇನೆಗೆ ನೀಡಿದ ಪುಟ್ಟ ಪೋರ; ಈ ಬಾಲಕನ ದೇಶಪ್ರೇಮಕ್ಕೆ ಸಾಟಿಯೇ ಇಲ್ಲ!

ಸಾಕುಪ್ರಾಣಿಗಳು

ಪ್ರಾಣಿ ಪಕ್ಷಿಗಳು ಮುದ್ದಾಗಿ ಕಂಡರೂ ಅವುಗಳನ್ನು ಉಡುಗೊರೆಯಾಗಿ ನೀಡುವುದು ಸರಿಯಲ್ಲ. ಯಾಕೆಂದರೆ ಇದು ದೊಡ್ಡ ಜವಾಬ್ದಾರಿಯಾಗಿದೆ. ಹೊಸ ಮನೆಯವರ ಅನುಮತಿ ಪಡೆಯದೆ ಅವುಗಳನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದಲ್ಲ.

ಬೃಹತ್ ವಸ್ತುಗಳು

ದೊಡ್ಡ ಕನ್ನಡಿ, ಪೀಠೋಪಕರಣಗಳ ತುಂಡು ಅಥವಾ ದೊಡ್ಡ ಉಪಕರಣವು ಸಂತೋಷಕ್ಕಿಂತ ಹೆಚ್ಚಿನ ತೊಂದರೆಯನ್ನು ಉಂಟು ಮಾಡುತ್ತದೆ. ಇದನ್ನು ಇಡಲು ಸರಿಯಾದ ಜಾಗ ಇಲ್ಲದಿದ್ದರೆ ಹೊಸ ಮನೆಯಲ್ಲಿ ಕಿರಿಕಿರಿಯ ಅನುಭವ ಉಂಟು ಮಾಡಬಹುದು.

ಶುಚಿಗೊಳಿಸುವ ವಸ್ತುಗಳು

ಶುಚಿಗೊಳಿಸುವ ಉತ್ಪನ್ನಗಳನ್ನು ನೀಡುವುದು ಸರಿಯಲ್ಲ. ಇದು ಅವರು ಮತ್ತೆ ಅವರ ಮನೆ ಕೊಳಕು ಎಂದು ನೀವು ಹೇಳುತ್ತಿರುವಂತೆ ಅವರಿಗೆ ಭಾಸವಾಗಬಹುದು. ಇದನ್ನು ಉಡುಗೊರೆಯಾಗಿ ನೀಡದೇ ಇರುವುದೇ ಒಳ್ಳೆಯದು.

ಹಣ ಅಥವಾ ಉಡುಗೊರೆ ಕಾರ್ಡ್‌ಗಳು

ಹಣ ಅಥವಾ ವೋಚರ್‌ಗಳು ಉಪಯುಕ್ತ ಎಂದೆನಿಸಿದರೂ ಅದು ತೆಗೆದುಕೊಳ್ಳುವವರಿಗೆ ಬೇಸರವೆಂದೆನಿಸಬಹುದು. ಯಾಕೆಂದರೆ ಸಾಮಾನ್ಯವಾಗಿ ಗೃಹಪ್ರವೇಶದ ಬಳಿಕ ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗುತ್ತಾರೆ. ಈ ನಡುವೆ ಹಣ ಖರ್ಚಾಗಿ ಹೋಗಬಹುದು. ವೋಚರ್‌ಗಳು ಮರೆತು ಹೋಗಬಹುದು. ಹೀಗಾಗಿ ಇದನ್ನು ಉಡೊಗೊರೆಯಾಗಿ ನೀಡದೇ ಇರುವುದು ಒಳ್ಳೆಯದು.