ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜುಲೈ 15, 2026: ಇಂದು ಆದಾಯದ ಹೊಸ ಮಾರ್ಗಗಳು ಗೋಚರವಾಗುತ್ತವೆ

Horoscope Today July 15th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷ, ಅಮಾವಾಸ್ಯ ತಿಥಿಯ ಜುಲೈ 15ನೇ ತಾರೀಕಿನ ಈ ದಿನ ಆಷಾಢ ಅಮಾವಾಸ್ಯೆ. ಪಿತೃ ತರ್ಪಣ, ಪಿಂಡ ಪ್ರದಾನ ಮತ್ತು ಪೂರ್ವಜರ ಸ್ಮರಣೆಗಾಗಿ ಅತ್ಯಂತ ಮಹತ್ವದ ದಿನ ಇಂದಾಗಿದ್ದು ನದಿ, ಕೆರೆ ಅಥವಾ ಸಮುದ್ರ ತೀರದಲ್ಲಿ ತರ್ಪಣ ಮಾಡುವ ಸಂಪ್ರದಾಯವಿದೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದಾಯದಲ್ಲಿ ಅಭಿವೃದ್ಧಿಯಾಗಲಿದ್ದು, ಹೊಸದಾದ ಬಿಸೆನೆಸ್ ಪ್ಲಾನ್‌ ಕೈಗೂಡಬಹುದು‌. ಸ್ನೇಹಿತರಿಂದ ಖುಷಿ ನೆಮ್ಮದಿ ಸಿಗಲಿದ್ದು, ಮಕ್ಕಳ ವಿಚಾರದಲ್ಲೂ ಸಂತೋಷ ಸಿಗಲಿದೆ.

ವೃಷಭ ರಾಶಿ: ಈ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ.ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿವಹಿಸಿ ಯಶಸ್ಸು ಕಾಣುತ್ತೀರಿ. ಆದರೆ ಹಣಕಾಸಿನ ವ್ಯವಹಾರದಲ್ಲಿ ಜಾಗೃತಿ ವಹಿಸಬೇಕಾಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಇಂದು ಕೆಲಸದಲ್ಲಿ ಅಭಿವೃದ್ಧಿ ಕಾಣುವ ದಿನವಾಗಲಿದೆ. ಮಾತಿನಿಂದಲ್ಲೇ ಎಲ್ಲರನ್ನು ನೀವು ಗೆಲ್ಲುತ್ತೀರಿ. ಸೋಷಿಯಲ್ ಮೀಡಿಯಾ, ಬರವಣಿಗೆ, ಮಾಧ್ಯಮದಲ್ಲಿ ಇರೋರಿಗೆ ಲಾಭದಾಯಕವಾಗಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಗೌರವ, ಪ್ರತಿಷ್ಠೆ ಹೆಚ್ಚಾಗುವ ದಿನವಾಗಲಿದೆ. ಕುಟುಂಬದಲ್ಲೂ ನೆಮ್ಮದಿ ಪ್ರಾಪ್ತಿಯಾಗಿ ಖುಷಿಯಿಂದ ಇರುತ್ತೀರಿ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ‌

ಹಳೆಯ ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ಪಾಲಿಸಿ

ಸಿಂಹ ರಾಶಿ: ಸಿಂಹ ರಾಶಿಗೆ ವೈಯಕ್ತಿಕ ಜೀವನದಲ್ಲಿ ಇಂದು ಯಶಸ್ಸು ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಾಣುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕೆಲಸದ ಜವಾಬ್ದಾರಿ ಜಾಸ್ತಿಯಾಗುತ್ತವೆ. ಹಣಕಾಸಿನ ವಿಚಾರದಲ್ಲಿಯೂ ಎಚ್ಚರಿಕೆಯಿಂದಿರಿ. ಹಿರಿಯರ ಮಾತುಗಳನ್ನು ಗೌರವಿಸಿ ನಿರ್ಧಾರ ತೆಗೆದುಕೊಳ್ಳಿ.

ತುಲಾ ರಾಶಿ: ತುಲಾ ರಾಶಿಯವರು ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಕಾಣುತ್ತೀರಿ. ಪ್ರಯಾಣ ಮಾಡುವ ಅವಕಾಶಗಳು ಒದಗಿ ಬರಬಹುದು.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತಿ ಅಗತ್ಯ. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಅನಿರೀಕ್ಷಿತ ಅವಕಾಶ ನಿಮಗೆ ಸಿಗಲಿದ್ದು, ಯಶಸ್ಸು ಕಾಣುತ್ತೀರಿ. ಕೆಲಸ ಕಾರ್ಯದಲ್ಲೂ ಅಭಿವೃದ್ಧಿ.

ಮಕರ ರಾಶಿ: ಮಕರ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದ್ದು, ಆರೋಗ್ಯ ಕಡೆಯೂ ಗಮನ ಅಗತ್ಯ.

ಕುಂಭರಾಶಿ: ಇಂದು ಉತ್ತಮ ದಿನವಾಗಲಿದೆ. ಗುಂಪು ಕೆಲಸದಿಂದ ಯಶಸ್ಸು ಸಿಗಲಿದ್ದು, ನೆಮ್ಮದಿ ಕಾಣುತ್ತೀರಿ. ಸ್ನೇಹಿತರಿಂದ ಧನಾಗಮನದ ಸೂಚನೆಗಳು ಇವೆ‌.

ಮೀನ ರಾಶಿ: ಮೀನ ರಾಶಿಯವರಿಗೆ ಭಾವುಕತೆ ಹೆಚ್ಚಾಗಬಹುದು. ಕ್ರಿಯಾತ್ಮಕ ಕೆಲಸದಲ್ಲಿ ಯಶಸ್ಸು. ಆದರೆ ಖರ್ಚು ವ್ಯವಹಾರ ಬಗ್ಗೆ ಜಾಗೃತಿ ವಹಿಸಿ.