ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಉತ್ತರಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡಂತೆ ಯಶಸ್ಸು ಕಾಣಬಹುದು. ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ.
ವೃಷಭ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಅಷ್ಟೊಂದು ಉತ್ತಮ ದಿನವಲ್ಲ. ಮುಖ್ಯವಾದ ನಿರ್ಧಾರಗಳು ಯಾವುದು ಬೇಡ. ನಾಳೆಯವರೆಗೆ ಕಾಯುವುದು ಒಳ್ಳೆಯದು.
ಕರ್ಕಾಟಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಕೂಡ ಸಹಕಾರ ಪ್ರಾಪ್ತಿಯಾಗುತ್ತದೆ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಸೃಜನಶೀಲ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅಭಿವೃದ್ಧಿ ಕಾಣುತ್ತೀರಿ.
ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ
ಕನ್ಯಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಆದರೆ ಕೋರ್ಟ್, ಕಚೇರಿ ವ್ಯವಹಾರದಲ್ಲಿ ಇರೋರಿಗೆ ತೊಂದರೆ ಎದುರಾಗುವ ಸಾಧ್ಯತೆ. ಮಕ್ಕಳ ವಿಚಾರದಲ್ಲಿಯೂ ತಲೆಬೀಸಿ ಉಂಟಾಗಬಹುದು.
ತುಲಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಟ್ಯಾಕ್ಸ್ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಯಾವುದೇ ಕೆಲಸಗಳನ್ನು ಯೋಚಿಸಿ ಮಾಡಿದರೆ ಒಳಿತು.
ವೃಶ್ಚಿಕ ರಾಶಿ: ಉತ್ತಮ ದಿನವಾಗಿದ್ದು ಬಂಧು- ಬಾಂಧವರಿಂದ ನೆಮ್ಮದಿ ಕಾಣುತ್ತೀರಿ. ಎಲ್ಲರ ಸಹಕಾರ ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ.
ಧನು ರಾಶಿ: ಇಂದು ಯಶಸ್ಸು ಲಭಿಸುವ ದಿನ ನಿಮ್ಮದಾಗುತ್ತದೆ. ಮನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ಮಕರ ರಾಶಿ: ಇಂದು ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ. ಮುಂದಿನ ಕೆಲಸಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ.
ಕುಂಭ ರಾಶಿ: ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರ ಯಾವುದೇ ಬೇಡ. ಕೆಲಸ ಕಾರ್ಯದಲ್ಲೂ ತೊಂದರೆ ಎದುರಾಗಬಹುದು. ಆರ್ಥಿಕವಾಗಿಯೂ ನಷ್ಟ ಉಂಟಾಗಬಹುದು.
ಮೀನ ರಾಶಿ: ಉತ್ತಮ ದಿನವಾಗಲಿದ್ದು, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಹಾಗೂ ನೆಮ್ಮದಿ ಸಿಗುತ್ತದೆ. ಎಲ್ಲ ರೀತಿಯಿಂದಲೂ ಮನಸ್ಸಿಗೆ ಸಂತೋಷದ ವಾತಾವರಣ ಇರುತ್ತದೆ.