ಬೆಂಗಳೂರು, ಮಾ. 24: ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.
ಮೇಷ ರಾಶಿ: ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರ. ಹಾಗಾಗಿ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಸಂಸಾರದ ವಿಚಾರದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. ಧನ ಆಗಮನವಾಗಲಿದ್ದು, ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತೀರಿ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೂ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಹೆಚ್ಚಿನ ನೆಮ್ಮದಿ ಇರುತ್ತದೆ. ಶತ್ರುಗಳನ್ನು ಕೂಡ ಹಿಮ್ಮೆಟ್ಟಿಸಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತೀ ಭಾವುಕತೆಯಿಂದ ಇರುವ ದಿನವಾಗಲಿದೆ. ನಿಮ್ಮ ಪ್ರೀತಿ ಪಾತ್ರರ ಜತೆ ಮನಸ್ತಾಪ ಇಂದು ಕಾಡಬಹುದು. ಎರಡು ದಿನಗಳ ನಂತರ ಎಲ್ಲವೂ ಸರಿಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಅದೃಷ್ಟದ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ.
ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಭಾವುಕತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚಿನ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಅದೃಷ್ಟದ ದಿನ ನಿಮ್ಮದಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಯಾರ ಸಹಕಾರ ಕೂಡ ನಿಮಗೆ ಸಿಗುವುದಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯದಲ್ಲೂ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಕಾರ್ಯಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಬಹುದು. ಯಾರಿಂದಲೂ ತೊಂದರೆ ನಿಮಗೆ ಉಂಟಾಗುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟದ ದಿನವಾಗಿದೆ. ಮಕ್ಕಳ ಜತೆ ವ್ಯವಹಾರ ಏರುಪೇರು ಆಗಬಹುದು. ಆದರೆ ಬಿಸೆನೆಸ್ ವ್ಯವಹಾರದಲ್ಲಿ ಗಮನ ನೀಡಬೇಕು.
ಕುಂಭರಾಶಿ: ಈ ರಾಶಿಯವರಿಗೆ ಆಸ್ತಿ ವ್ಯವಹಾರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕೋರ್ಟ್, ವ್ಯವಹಾರದ ಸಮಸ್ಯೆ ನಿಮಗೆ ಜಾಸ್ತಿಯಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಾಧ್ಯಮ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋರಿಗೆ ಉತ್ತಮ ದಿನವಾಗಲಿದೆ.