ಬೆಂಗಳೂರು: ಸನಾತನ ಧರ್ಮದಲ್ಲಿ(Sanatana Dharma) ಶುಕ್ರವಾರ (Friday)ವನ್ನು ಲಕ್ಷ್ಮೀ ದೇವಿಗೆ (Laksmi Devi) ಅರ್ಪಿಸಲಾಗಿದೆ. ಅಂದು ಉಪವಾಸ ಆಚರಿಸಿ ತಾಯಿ ಲಕ್ಷ್ಮೀಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಹಾಗೂ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಎಂದು ನಂಬ ನಂಬಿಕೆ ಇದೆ. ಶುಕ್ರವಾರ ಲಕ್ಷ್ಮೀ ದೇವಿಯ ಹೆಸರಿನಲ್ಲಿ ಮಾಡುವ ಉಪವಾಸವು ಹಣಕಾಸಿನ ಸಂಕಷ್ಟಗಳಿಂದ ಪಾರು ಮಾಡುತ್ತದೆ ಎಂದು ಹಿಂದೂ ಧಾರ್ಮಿಕ ಗ್ರಂಥಗಳು ಹೇಳುತ್ತವೆ.
ವಾರದ ಪ್ರತಿದಿನವನ್ನೂ ನಿರ್ದಿಷ್ಟ ದೇವತೆಗಳಿಗೆ ಸಮರ್ಪಿಸಲಾಗಿದೆ. ಅದರಂತೆ ಶುಕ್ರವಾರ ತಾಯಿ ಲಕ್ಷ್ಮೀಯ ದಿ. ಅಂದು ಲಕ್ಷ್ಮೀಯನ್ನು ವಿಧಾನಬದ್ಧವಾಗಿ ಪೂಜಿಸಬೇಕು. ಈ ದಿನ ಮಾಡುವ ಪೂಜೆ ಮತ್ತು ಮಂತ್ರ ಜಪಗಳು ಆಕೆಯ ಅನುಗ್ರಹ ಪಡೆಯಲು ಅತ್ಯಂತ ಫಲಪ್ರದವೆಂದು ಪುರಾಣಗಳು ತಿಳಿಸುತ್ತವೆ. ಶುಕ್ರವಾರ ಲಕ್ಷ್ಮೀ ದೇವಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರ ಜತೆ ಕೆಲ ಮಂತ್ರಗಳನ್ನು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಸಮೃದ್ದಿ ತುಂಬು ತುಳುಕುತ್ತದೆ ಎನ್ನುವ ನಂಬಿಕೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಲಕ್ಷ್ಮೀ ಮಂತ್ರಗಳನ್ನು ಈ ದಿನ ಪಠಿಸುವುದರಿಂದ ದೇವಿಯೂ ಪ್ರಸನ್ನಳಾಗುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಹಾಗಾದ್ರೆ ಬನ್ನಿ ಆ ಮಂತ್ರಗಳು ಯಾವುವು ಎಂಬುದನ್ನು ನೋಡೋಣ...
ಲಕ್ಷ್ಮಿ ಬೀಜ ಮಂತ್ರ
ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೀ ನಮಃ
ಇದು ಲಕ್ಷ್ಮಿ ಬೀಜ ಮಂತ್ರವಾಗಿದ್ದು, ಶುಕ್ರವಾರದ ಇದನ್ನು ಜಪಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುವುದರ ಜತೆ ಅವಳ ಕೃಪೆಯಿಂದ ಸಕಾಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.
ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕಾಡಲಿದೆ ದಾರಿದ್ರ್ಯ
ಲಕ್ಷ್ಮಿ ಸ್ತೋತ್ರ
ಯಾ ರಕ್ತಾಂಬುಜವಾಸಿನೀ ವಿಲಾಸಿನೀ ಚಂಡಾಂಶು ತೇಜಸ್ವಿನೀ|
ಯಾ ರಕ್ತಾ ರುಧಿರಾಂಬರ ಹರಿಸಖೀ ಯಾ ಶ್ರೀ ಮನೋಲ್ಹಾದಿನೀ||
ಯಾ ರತ್ನಾಕರಮಂತನಾತ್ಪ್ರಗಟಿತಾ ವಿಷ್ಣೋಸ್ವಯಾ ಗೇಹಿನೀ|
ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾವತಿ||
ಶುಕ್ರವಾರ ಈ ಲಕ್ಷ್ಮೀ ಸ್ತೋತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಕುಟುಂಬ ಸದಸ್ಯರ ಆಯುಷ್ಯ ಹೆಚ್ಚುತ್ತದೆ ಎಂದು ಪುರಾಣಗಳು ಹೇಳುತ್ತವೆ. ಮಂತ್ರ ಪಠಣದ ಸಮಯದಲ್ಲಿ ಸುಗಂಧ ಮತ್ತು ಸುಗಂಧದ್ರವ್ಯಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಸಮೃದ್ಧಿಯ ವಾತಾವರಣ ಉಂಟಾಗುತ್ತದೆ ಎನ್ನಲಾಗಿದೆ.
ಶ್ರೀ ಲಕ್ಷ್ಮೀ ಮಹಾಮಂತ್ರ
ಓಂ ಶ್ರೀಂ ಕ್ಲೀಂ ಮಹಾಲಕ್ಷ್ಮಿ ಮಹಾಲಕ್ಷ್ಮಿ ಯದ್ಯೇಹಿ ಸರ್ವ ಸೌಭಾಗ್ಯಂ ದೇಹಿ ಮೇ ಸ್ವಾಹಾ
ಇದು ಸಕಲ ಸೌಭಾಗ್ಯಗಳನ್ನು ಮತ್ತು ಸಂಪತ್ತನ್ನು ನೀಡುವ ಮಹಾಮಂತ್ರವೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಮಂತ್ರ ಪಠಿಸುವುದರಿಂದ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇನ್ನು ಇದರ ಹೊರತಾಗಿ ಶುಕ್ರವಾರ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು.
ಐಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯ್ಯಾ ಹ್ರೀಂ ಸಿದ್ಧಯೇ ಮಾಂ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ
ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.