ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಅಕ್ಟೋಬರ್ 7, 2026: ಈ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ; ಅಂದುಕೊಂಡದ್ದೆಲ್ಲ ನೆರವೇರುತ್ತೆ

Horoscope Today October 7th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ, ಪೂರ್ವ ಪಾಲ್ಗುಣ ನಕ್ಷತ್ರದ ಅಕ್ಟೋಬರ್‌ 7ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಆಶ್ಲೇಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದ್ದು, ಸ್ನೇಹ- ಸಂಬಂಧದಲ್ಲಿ ಒಡಕು ಮೂಡಬಹುದು. ಹಣಕಾಸಿನ ವಿಚಾರದಲ್ಲೂ ತೊಂದರೆ ಎದುರಾಗಬಹುದು.

ವೃಷಭ ರಾಶಿ: ಈ ರಾಶಿಯಚರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಇರುತ್ತದೆ. ಸೇಲ್ಸ್, ಮಾರ್ಕೆಟಿಂಗ್, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಲಾಭದ ದಿನವಾಗಲಿದೆ. ಮನೆಯಲ್ಲೂ ಇಂದು ನೆಮ್ಮದಿಯ ವಾತಾವರಣ ಇರುತ್ತದೆ.

ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಹಣಕಾಸಿನ ವಿಚಾರದಲ್ಲೂ ಹೆಚ್ಚಿನ ಅಭಿವೃದ್ಧಿ ಕಾಣುತ್ತೀರಿ.

ಕಟಕರಾಶಿ: ಇಂದು ಉತ್ತಮವಾದ ದಿನವಾಗಲಿದೆ. ಕುಟುಂಬದಲ್ಲಿ ಖುಷಿಯಿಂದ ಸಮಯ ಕಳೆಯುತ್ತೀರಿ. ಸಂಸಾರದಲ್ಲಿ ಇಂದು ಉತ್ತಮ ಬಾಂಧವ್ಯ ಮೂಡುತ್ತದೆ.

‌ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗುತ್ತದೆ. ಹೊಸ ಸ್ನೇಹ-ಪರಿಚಯದಿಂದ ಇಂದು ಲಾಭ ಉಂಟಾಗಬಹುದು.

ಕನ್ಯಾ ರಾಶಿ: ಇಂದು ಕಷ್ಟದ ದಿನವಾಗಿದ್ದು, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ‌. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಜಗಳ ಉಂಟಾಗಬಹುದು‌

ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗಬಹುದು. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಇದ್ದು ಯಶಸ್ಸು, ಅದೃಷ್ಟ ನಿಮ್ಮದಾಗುತ್ತದೆ.

ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!

ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗಲಿದೆ. ಅವಕಾಶಗಳು ಹೆಚ್ಚಾಗಬಹುದು. ಹೊಸ ಸ್ನೇಹಿತರ ಪರಿಚಯವಾಗಬಹುದು.

ಧನು ರಾಶಿ: ಇಂದು ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆಗೆ ಪರಿಹಾರ ಸಿಗುತ್ತದೆ.‌ ಕೆಲಸದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ: ಇಂದು ಕಷ್ಟದ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಅದೇ ರೀತಿ ಯಾರ ಸಹಕಾರವು ನಿಮಗೆ ಸಿಗದೇ ಇರಬಹುದು.

ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಕೆಲಸ ಕಾರ್ಯದಲ್ಲಿ ಪ್ರತಿಷ್ಠೆ ಹೆಚ್ಚಾಗುವ ದಿನ ನಿಮ್ಮದಾಗುತ್ತದೆ.

ಮೀನ ರಾಶಿ: ಇಂದು ಉತ್ತಮ ದಿನವಾಗಲಿದೆ. ನಿಮ್ಮ ಕ್ರಿಯಾಶೀಲತೆಯಿಂದ ಇಂದು ಜಯವನ್ನು ಕಾಣುತ್ತೀರಿ. ಶತ್ರುನಾಶ ಹಾಗೂ ಧ್ವಂಸವಾಗಲಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗಲಿದೆ.