ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi 2026 Wishes: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು

ಯುಗಾದಿ ಹಿಂದೂ ಚಾಂದ್ರಮಾನ ಪ್ರಕಾರ ಹೊಸ ವರ್ಷದ ಆರಂಭವನ್ನು ಸೂಚಿಸುವ ಪವಿತ್ರ ಹಬ್ಬವಾಗಿದ್ದು, ಮಾರ್ಚ್ 19ರಂದು ಆಚರಿಸಲಾಗುತ್ತದೆ. ಈ ದಿನವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಮನೆ ಅಲಂಕಾರ, ಪೂಜೆಯ ಮೂಲಕ ಕೊಂಡಾಡಲಾಗುತ್ತದೆ. ‘ಯುಗಾದಿ ಪಚಡಿ’ ಮೂಲಕ ಜೀವನದ ಸಿಹಿ-ಕಹಿ ಅನುಭವಗಳನ್ನು ಸಂಕೇತಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಹಂಚಿಕೊಳ್ಳಲು ಅರ್ಥಪೂರ್ಣ ಶುಭಾಶಯ ಸಂದೇಶಗಳು ಇಲ್ಲಿವೆ.

ಯುಗಾದಿ ಹಬ್ಬ (ಎಐ ಚಿತ್ರ)

ಬೆಂಗಳೂರು, ಮಾ. 18: ಯುಗಾದಿ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬ (Ugadi 2026). ಇದನ್ನು ದೇಶದ ವಿವಿಧ ಭಾಗಗಳಲ್ಲಿ ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಯುಗಾದಿ ಹಬ್ಬವನ್ನು ಮಾರ್ಚ್ 19ರಂದು ಆಚರಿಸಲಾಗುತ್ತದೆ.

ಇದೇ ದಿನ ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಚೈತ್ರ ನವರಾತ್ರಿ ಕೂಡ ಆರಂಭವಾಗುತ್ತದೆ. ಸಂವತ್ಸರದಿಯೆಂದೂ ಕರೆಯಲ್ಪಡುವ ಯುಗಾದಿಯನ್ನು ಮುಖ್ಯವಾಗಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತದೆ.

ʼಯುಗಾದಿʼ ಎಂಬ ಪದವು ʼಯುಗʼ (ಹೊಸ ಕಾಲ) ಮತ್ತು ʼಆದಿʼ (ಆರಂಭ) ಎಂಬ ಎರಡು ಪದಗಳಿಂದ ಬಂದಿದೆ. ಅಂದರೆ ಇದು ಹೊಸ ಕಾಲದ ಆರಂಭವನ್ನು ಸೂಚಿಸುವ ಹಬ್ಬ. ಯುಗಾದಿಯ ದಿನ ಜನರು ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮನೆಗಳನ್ನು ಸ್ವಚ್ಛಗೊಳಿಸಿ ಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ಯುಗಾದಿಯ ದಿನ ಜನರು ಹೊಸ ಬಟ್ಟೆಗಳನ್ನು ಧರಿಸಿ, ಮನೆಗಳನ್ನು ಸ್ವಚ್ಛಗೊಳಿಸಿ ಮಾವಿನ ಎಲೆಗಳಿಂದ ಬಾಗಿಲುಗಳನ್ನು ಅಲಂಕರಿಸುತ್ತಾರೆ. ಜತೆಗೆ ‘ಯುಗಾದಿ ಪಚಡಿ’ ಎಂಬ ವಿಶೇಷ ಪದಾರ್ಥವನ್ನು ತಯಾರಿಸಿ ಕುಟುಂಬದವರೊಂದಿಗೆ ಸೇವಿಸುತ್ತಾರೆ. ಈ ಹಬ್ಬವು ಹೊಸ ನಿರೀಕ್ಷೆ, ಸಂತೋಷ ಮತ್ತು ಸಮೃದ್ಧಿಯನ್ನು ಜೀವನಕ್ಕೆ ತರಲಿದೆ ಎಂಬ ನಂಬಿಕೆ ಇದೆ.

ಈ ಶುಭ ಸಂದರ್ಭದಲ್ಲಿ ನಿಮ್ಮ ಆತ್ಮೀಯರಿಗೆ ಶುಭಾಶಯ ಕೋರಿ ಸಂತೋಷ ವಿನಿಮಯ ಮಾಡಿಕೊಳ್ಳಬೇಕೆಂಬ ಆಸೆ ನಿಮಗಿದ್ದರೆ, ಇಲ್ಲಿದೆ ನೋಡಿ ಸಿಹಿಯಾದ ಚಿಕ್ಕದಾದ ಸಂದೇಶಗಳ ಗುಚ್ಛ:

ಯುಗಾದಿ ಶುಭಾಶಯ ಸಂದೇಶಗಳು

  • ಹಸಿರು ಹೊನ್ನಿನಂತೆ ನಿಮ್ಮ ಜೀವನ ಬೆಳಗಲಿ,
    ಯುಗಾದಿಯ ಸಂಭ್ರಮದಲ್ಲಿ ಎಲ್ಲ ದುಃಖಗಳು ದೂರವಾಗಲಿ,
    ನಿಮ್ಮ ಬಾಳಲ್ಲಿ ಸದಾ ಸಂತೋಷ ತುಂಬಿರಲಿ.
    ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

  • ಹಳೆಯ ನೋವುಗಳನ್ನು ಮರೆತು,
    ಹೊಸ ಭರವಸೆಯೊಂದಿಗೆ ಹೊಸ ವರ್ಷ ಆರಂಭವಾಗಲಿ,
    ಎಲ್ಲರ ಜೀವನಕ್ಕೂ ಶುಭ ತರಲಿ.
    ಯುಗಾದಿ ಹಬ್ಬದ ಶುಭಾಶಯಗಳು.

ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

  • ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ
    ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ದೊರಕಲಿ.
    ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

  • ಯುಗಯುಗಗಳಿಂದ ಬರುತ್ತಿರುವ ಯುಗಾದಿ
    ಹೊಸ ಸಂತೋಷ, ಹೊಸ ಕನಸು, ಹೊಸ ನಿರೀಕ್ಷೆಗಳನ್ನು ತರಲಿ.
    ಯುಗಾದಿಯ ಶುಭಾಶಯಗಳು.

  • ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ನಿಮ್ಮ ಜೀವನದಲ್ಲಿ ಹೆಚ್ಚಾಗಲಿ,
    ಸುಖ, ಶಾಂತಿ ಮತ್ತು ಸಮೃದ್ಧಿ ಸದಾ ನಿಮ್ಮೊಂದಿಗಿರಲಿ.
    ಯುಗಾದಿ ಶುಭಾಶಯಗಳು.

  • ನಿಮ್ಮ ಎಲ್ಲ ಕನಸುಗಳು ಹೊಸ ವರ್ಷದ ಆಶೀರ್ವಾದದಿಂದ
    ನಿಜವಾಗಲಿ ಮತ್ತು ಯಶಸ್ಸು ತಂದುಕೊಡಲಿ.
    ಯುಗಾದಿ ಹಾರ್ಧಿಕ ಶುಭಾಶಯಗಳು.

  • ತೊಲಗಲಿ ದುಃಖ, ತೊಲಗಲಿ ಮತ್ಸರ,
    ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ ಈ ನವ ಸಂವತ್ಸರ.
    ಯುಗಾದಿಯ ಶುಭಾಶಯಗಳು.

  • ಬೇವು-ಬೆಲ್ಲದಂತೆ ಜೀವನದಲ್ಲಿ
    ಸುಖ ಮತ್ತು ದುಃಖ ಎರಡೂ ಇರಬಹುದು,
    ಆದರೆ ಧೈರ್ಯದಿಂದ ಬದುಕು ಸಾಗಲಿ.
    ಯುಗಾದಿ ಹಬ್ಬದ ಶುಭಾಶಯಗಳು.