ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ದಿನ ಈ ರಾಶಿಯವರ ಮೇಲೆ ಕೇತುವಿನ ಪ್ರಭಾವ

ಇಂದು ಶ್ರೀ ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನೆ, ವರ್ಷ ಋತು, ಶ್ರಾವಣಮಾಸ, ಶುಕ್ಲಪಕ್ಷೆ, ದಿನ ಜುಲೈ 27ನೇ ತಾರೀಕಿನಂದು ಆಯಾ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನೆ ವರ್ಷ ಋತು ಶ್ರಾವಣಮಾಸ ಶುಕ್ಲಪಕ್ಷೆ, ಮಘಾನಕ್ಷತ್ರದ ಈ ದಿನದಂದು (ಜು. 27) ದ್ವಾದಶ ರಾಶಿಯ ಮೇಲೆ ಕೇತುವಿನ ಪ್ರಭಾವ ಇರಲಿದೆ. ಸಿಂಹರಾಶಿಯಲ್ಲಿ ಬರುವ ಮಘಾ ನಕ್ಷತ್ರದ ಅಧಿಪತಿ ಕೇತುವಾಗಿದೆ. ಸಿಂಹ ರಾಶಿ ಅಧಿಪತಿ ರವಿ ಮತ್ತು ಕೇತು ಎರಡು ಸಂಗಮವಾಗುದರಿಂದ ಅತೀ ಮೊಂಡುತನದ ಸ್ವಭಾವ ಬರಲಿದೆ. ತಮ್ಮ ಮಾತೇ ಆಗಬೇಕು, ತಮ್ಮ ಹಠವೇ ಗೆಲ್ಲಬೇಕು ಎಂಬ ಧೋರಣೆ ಬಹುತೇಕ ಎಲ್ಲ ರಾಶಿಯವರಲ್ಲಿಯೂ ಇರಲಿದೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಈ ದಿನ ಬಹಳ ಕ್ಲಿಷ್ಟಕರವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಕಿರಿಕಿರಿ, ಬಹಳ ಹತ್ತಿರದ ಸಂಬಂಧದಲ್ಲಿ ಸಾಕಷ್ಟು ವೈಮನಸ್ಸು ಮೂಡುವ ಸಾಧ್ಯತೆ ಇದೆ. ಅದಾಗ್ಯೂ ನಿಮ್ಮ ಕ್ರಿಯಾಶೀಲತೆ ಅತ್ಯುತ್ತಮವಾಗಿರಲಿದೆ. ಇದರಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ಸಾಧಿಸಿಕೊಳ್ಳಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿಯವರು ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಆಸ್ತಿ ಪಾಸ್ತಿ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವವರಿಗೆ ಈ ದಿನ ಸಾಕಷ್ಟು ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಲಿದೆ. ನಿಮ್ಮ ಬಂಧು ಬಾಂಧವರಿಂದ ನಿಮಗೆ ಬೇಕಾದ ಎಲ್ಲ ರೀತಿಯ ಸಹಕಾರ ದೊರೆಯಲಿದೆ. ಈ ರಾಶಿಯಲ್ಲಿರುವ ರಾಜಕಾರಣಿಗಳು, ಮಾಧ್ಯಮ ರಂಗದವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಸಂಸಾರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕಾಯ್ದುಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ ಆಗಿದ್ದು, ಆದಷ್ಟು ಜಾಗರೂಕತೆ ಯಿಂದ ಕೆಲಸ ಕಾರ್ಯ ಮಾಡಬೇಕು.

ಸಿಂಹ ರಾಶಿ: ಸಿಂಹ ರಾಶಿಯವರು ಈ ಹಿಂದೆ ಅನುಭವಿಸಿದ್ದ ತೊಂದರೆ ತಾಪತ್ರಯಗಳಿಂದ ಮುಕ್ತರಾಗಲಿದ್ದಾರೆ. ಹಾಗಾಗಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ನೀವು ಕಾಣಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಬಹಳ ಕಷ್ಟವಾಗಲಿದೆ. ಜೀವನದ ಅತೀ ಮುಖ್ಯ ಅಂಶಗಳ ಕುರಿತು ನಿರ್ಧಾರ ಕೈಗೊಳ್ಳಲು ಸ್ಪಷ್ಟ ನಿರ್ಣಯ ಇರಲಾರದು. ವ್ಯಾಪಾರ ವ್ಯವಹಾರದ ನಿರ್ಧಾರದಿಂದ ಆಪ್ತರೊಡನೆ ವೈಮನಸ್ಸು ಮೂಡಬಹುದು. ಹೀಗಾಗಿ ಯಾವುದೇ ಹೊಸ ಯೋಜನೆ ಇದ್ದರೆ ಅದನ್ನು ಈಗ ಮಾಡದಿರುವುದು ಉತ್ತಮ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಇಷ್ಟಾರ್ಥ ಸಿದ್ಧಿಯಾಗಲಿದೆ. ಧನಾಗಮವಾಗಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಕೆಲಸ ಕಾರ್ಯದಲ್ಲಿ ಬರಲಿದ್ದು, ಅವುಗಳ ಕುರಿತು ಸರಿಯಾದ ನೀತಿ ನಿರ್ಧಾರ ಕೈಗೊಳ್ಳಬೇಕು.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಶುಕ್ರನ ಪ್ರವೇಶದಿಂದ ಯಾವ ರಾಶಿಗೆ ಶುಭ ಫಲ ಇದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಮನೆಯ ಕೆಲಸ ಕಾರ್ಯ, ಜವಾಬ್ದಾರಿಗಳ ಹಂಚಿಕೆಯಲ್ಲಿ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಾಡುವ ಕೆಲಸವನ್ನು ಸರಿಯಾದ ತರನಾಗಿ ಗಮನ ಹರಿಸಿ ಮಾಡಬೇಕು.

ಧನಸ್ಸು ರಾಶಿ: ಧನಸ್ಸು ರಾಶಿಯವರ ಪಾಲಿಗೆ ಭಾಗ್ಯೋದ್ಯಯವಾಗಲಿದೆ. ದೊಡ್ಡವರ ಅನುಗ್ರಹ, ಆಶೀರ್ವಾದ ಇಲ್ಲದೆ ಹೊಸ ಯೋಜನೆ ಅಥವಾ ಕೆಲಸ ಕಾರ್ಯಗಳಿಗೆ ಮುಂದಾಗುವುದು ಒಳ್ಳೆಯದಲ್ಲ. ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸಾಕಷ್ಟು ವಿಷಯಕ್ಕೆ ಮನಸ್ಸಿಗೆ ಗೊಂದಲ ಕಿರಿ ಕಿರಿ ಉಂಟಾಗುವ ದಿನವಾಗಿದೆ. ಕುಟುಂಬ ಮತ್ತು ಸ್ನೇಹಿತರ ಬಳಗದಿಂದ ಸಹಕಾರವನ್ನು ನೀವು ನಿರೀಕ್ಷಿಸಿದರೂ ಈ ದಿನ ನಿಮಗೆ ಬೇಕಾದ ಸಹಕಾರ ಸಿಗಲಾರದು. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಈ ದಿನ ಕೈಗೊಳ್ಳಬಾರದು.

ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲ ವಿಚಾರದಲ್ಲಿಯೂ ಇಂದು ಕುಂಭ ರಾಶಿ ಅವರಿಗೆ ಯಶಸ್ಸು ಪ್ರಾಪ್ತವಾಗಲಿದೆ. ಮಿತ್ರರು ನಿಮ್ಮ ಒಳಿತಿಗೆ ಬೇಕಾದ ಸಹಕಾರ ನೀಡಿದರೆ ನಿಮ್ಮ ಶತ್ರುಗಳು ಹಿಮ್ಮೆಟ್ಟಲಿದ್ದಾರೆ. ಕೆಲ ಸಮಸ್ಯೆ ಇಂದು ಪರಿಹಾರ ಕಂಡು ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮೀನ ರಾಶಿ: ಮೀನ ರಾಶಿಯವರು ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು ಬೇಕಾದ ಗೆಲುವು ಪಡೆಯಲಿದ್ದಾರೆ. ಅಲ್ಲದೆ ಈ ರಾಶಿಯವರ ಆರೋಗ್ಯ ಸುಧಾರಿಸಲಿದ್ದು, ಹೊಸ ವ್ಯಕ್ತಿಯ ಪರಿಚಯದಿಂದ ಸಾಕಷ್ಟು ಉತ್ತಮ ಯೋಜನೆ ಕೂಡ ರೂಪುಗೊಳ್ಳಲಿದೆ.