ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಯಾವುದೇ ಕೆಲಸದಲ್ಲಿ ಜಯ ನಿಮ್ಮದಾಗುವುದಿಲ್ಲ. ಮಾತುಕತೆಯಲ್ಲಿ ಇತರರ ಜತೆ ಜಗಳ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಧ್ಯಾನಗಳ ಮೂಲಕ ಸಮಯ ಕಳೆಯುವುದು ಒಳ್ಳೆಯದು.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ವೈಯಕ್ತಿಕ ವಿಚಾರದಲ್ಲಿ ಹಾಗೂ ಮಿತ್ರರಿಂದ ನಿಮಗೆ ಒಳ್ಳೆದಾಯದಾಗುತ್ತದೆ. ಧನಲಾಭದ ಸೂಚನೆ ಇದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ. ಆದರೆ ಮಾತಿನ ಮೇಲೆ ನಿಗಾ ಇರಲಿದೆ. ಇದರಿಂದ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚು.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ ಕೆಲಸ ಕಾರ್ಯದಲ್ಲಿ ಸ್ವಲ್ಪ ಹಿಂಜರಿಕೆ ಉಂಟಾಗಬಹುದು. ಧೈರ್ಯದಿಂದ ನೀವು ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಯಾವುದೇ ಇಂದು ಮುಖ್ಯ ನಿರ್ಧಾರವನ್ನು ಕೈಗೊಳ್ಳಲು ಹೋಗಬೇಡಿ. ಪ್ರೇಮ ಪ್ರೀತಿ ವಿಚಾರದಲ್ಲಿ ತೊಂದರೆ ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಎಲ್ಲ ಕಡೆಯಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗುತ್ತದೆ. ಮಾನಸಿಕ ನೆಮ್ಮದಿ ಇದ್ದು ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕವಾಗಿ ಅತೀ ಹೆಚ್ಚಿನ ಯಶಸ್ಸು ನೀವು ಕಾಣಬಹುದು. ಆತ್ಮವಿಶ್ವಾಸ ಕೂಡ ನಿಮ್ಮಲ್ಲಿ ಹೆಚ್ಚಾಗಿ ಇರುತ್ತದೆ.
ನಿಮ್ಮ ಆದಾಯ ಹೆಚ್ಚಾಗಿ ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮಿಶ್ರಫಲ ಕೊಡುವ ದಿನವಾಗಲಿದೆ. ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮಾನಸಿಕವಾಗಿ ನೆಮ್ಮದಿ ಇದ್ದು ಆರ್ಥಿಕವಾಗಿಯೂ ಲಾಭ ನಿಮ್ಮದಾಗುತ್ತದೆ. ಆದರೆ ಕೋರ್ಟ್, ಕಚೇರಿ ವ್ಯವಹಾರದಲ್ಲಿ ಇರೋರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ.
ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಸಿಗಲಿದೆ. ಮಾದ್ಯಮ, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಉತ್ತಮ ದಿನವಾಗಲಿದೆ. ಮಾತಿನಿಂದ ನೀವು ಯಶಸ್ಸು ಕಾಣುತ್ತೀರಿ .
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕುಟುಂಬದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಗೌರವ ಕೂಡ ಇಂದು ಹೆಚ್ಚಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಹೆಚ್ಚು ಯಶಸ್ಸು, ಅಭಿವೃದ್ಧಿ ಕಾಣಬಹುದು. ಆರ್ಥಿಕವಾಗಿ ಲಾಭ ತರುವ ದಿನವಾಗಲಿದೆ.