ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ ನವೆಂಬರ್ 4, 2026: ವೃಷಭ ರಾಶಿಗೆ ಚಂದ್ರನ ಪ್ರವೇಶ; ಮುಟ್ಟಿದ್ದೆಲ್ಲ ಚಿನ್ನ

Horoscope Today November 4: ಕಾರ್ತಿಕ ಮಾಸ, ಕೃಷ್ಣ ಪಕ್ಷದ ನವಮಿ ತಿಥಿ, ಮಘಾ ನಕ್ಷತ್ರದ, ಕೃಷ್ಣ ಪಕ್ಷದ ನವೆಂಬರ್‌ 4ರ ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ ಎನ್ನುವ ಸಮಗ್ರ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾರ್ತಿಕ ಮಾಸ, ಕೃಷ್ಣ ಪಕ್ಷದ ನವಮಿ ತಿಥಿ, ಮಘಾ ನಕ್ಷತ್ರದ, ಕೃಷ್ಣ ಪಕ್ಷದ ನವೆಂಬರ್‌ 4ರ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವ ಇಲ್ಲಿದೆ.

ಮೇಷ ರಾಶಿ: ನಿಮ್ಮ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಬೆಳಗ್ಗೆ ಸ್ವಲ್ಪ ತಲೆ ನೋವು, ಗೊಂದಲ ಇರಲಿದೆ. ಮುಖ್ಯ ಮೀಟಿಂಗ್ ಮಧ್ಯಾಹ್ನ ಇಟ್ಕೊಳ್ಳಿ.

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಆರೋಗ್ಯದ ಕಡೆ ಗಮನ ಕೊಡಿ. ಚಂದ್ರ ನಿಮ್ಮ ರಾಶಿಯಲ್ಲಿರುವುದರಿಂದ ಏನು ಮುಟ್ಟಿದ್ರೂ ಚಿನ್ನವಾಗುತ್ತೆ.

ಮಿಥುನ ರಾಶಿ: ಇಂದು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಬಹುದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಲಾಭ ಸಿಗಬಹುದು. ಸ್ನೇಹಿತರ ಭೇಟಿ ಸಂತಸ ತರಲಿದೆ.

ಕರ್ಕಾಟಕ ರಾಶಿ: ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕುಟುಂಬದ ಹಿರಿಯರ ಸಲಹೆ ಪಡೆಯುವುದು ಉತ್ತಮ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಕುಟುಂಬದಲ್ಲಿ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ನಿಮ್ಮ ಮಾತಿಗೆ ಇಂದು ಪವರ್ ಜಾಸ್ತಿ. ಯಾರನ್ನಾದರೂ ಒಪ್ಪಿಸಬೇಕು ಅಂದ್ರೆ ಇಂದೇ ಹೇಳಿ ಆಗುತ್ತೆ.

ನವೆಂಬರ್ 1ರಿಂದ ಅಯೋಧ್ಯೆ ರಾಮಮಂದಿರ ದರ್ಶನದ ಸಮಯ ಬದಲು

ಕನ್ಯಾ ರಾಶಿ: ಇಂದು ಮಿಶ್ರ ಫಲಗಳ ದಿನ. ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಆತುರದ ನಿರ್ಧಾರಗಳನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕೆಲಸದ ಒತ್ತಡ ಸ್ವಲ್ಪ ಜಾಸ್ತಿ. ಲ್ಯಾಪ್‌ಟಾಪ್, ಸಿಸ್ಟಂ ಸ್ಲೋ ಆಗಬಹುದು.

ತುಲಾ ರಾಶಿ: ಆರ್ಥಿಕವಾಗಿ ಅನುಕೂಲಕರ ದಿನವಾಗಿರಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ಸಮಯ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಸ್ನೇಹಿತರ ನೆರವು ದೊರೆಯಲಿದೆ. ಹಣಕಾಸು ವಿಷಯದಲ್ಲಿ ಲಕ್ಕಿ.

ವೃಶ್ಚಿಕ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ರಹಸ್ಯ ಬಯಲಾಗುವ ಭಯ ಇದೆ.

ಧನು ರಾಶಿ: ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ. ಪ್ರಯಾಣದ ಯೋಗವಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವಿರಿ. ಸ್ವಲ್ಪ ಬೇಗ ಹೊರಡಿ.

ಮಕರ ರಾಶಿ: ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ಎದುರಾಗಬಹುದು. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಯೋಜಿತ ನಿರ್ಧಾರಗಳನ್ನು ತೆಗೆದುಕೊಳ್ಳಿ. ಆರೋಗ್ಯದ ಕಡೆ ಗಮನ ಹರಿಸಿ. ತಂದೆ-ತಾಯಿ ಆರೋಗ್ಯದ ಕಡೆ ಗಮನ ಕೊಡಿ.

ಕುಂಭ ರಾಶಿ: ಇಂದು ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಹೊಸ ಕಲಿಕೆ ಶುರು ಮಾಡಲು ಒಳ್ಳೆಯ ದಿನ.

ಮೀನ ರಾಶಿ: ಮನಸ್ಸಿನಲ್ಲಿರುವ ಕೆಲವು ಆಸೆಗಳು ಈಡೇರುವ ಸಾಧ್ಯತೆ ಇದೆ. ಆರ್ಥಿಕ ಲಾಭದ ಸೂಚನೆಗಳಿವೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಪ್ರೀತಿಯಲ್ಲಿ ಸ್ವಲ್ಪ ಗೊಂದಲ ಮೂಡಲಿದೆ. ನಿಮ್ಮ ಕ್ರಶ್ ರಿಪ್ಲೈ ಲೇಟ್ ಮಾಡಬಹುದು.

Ramesh Ballamoole

View all posts by this author