ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಅಕ್ಟೋಬರ್ 30, 2026: ಹಿಂದಿನ ಸಮಸ್ಯೆಗಳೆಲ್ಲ ದೂರ, ಅಡೆತಡೆಗಳಿಗೆ ಸಿಗಲಿದೆ ಪರಿಹಾರ!

Horoscope Today October 30th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಪಂಚಮಿ ತಿಥಿ, ಮೃಗಶಿರಾ ನಕ್ಷತ್ರದ ಅಕ್ಟೋಬರ್‌ 30ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಮೃಗಶಿರ ನಕ್ಷತ್ರದ ಅಧಿಪತಿ ಕುಜ. ಹೀಗಾಗಿ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.‌ ಈ ರಾಶಿಯವರಿಗೆ ಉತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರಲಿದೆ. ಜನರೊಂದಿಗೆ ಹೆಚ್ಚಾಗಿ ಬೆರೆತು ಖುಷಿಯಿಂದ ಸಮಯ ಕಳೆಯುತ್ತೀರಿ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಅತೀ ಉತ್ತಮ ದಿನವಾಗಲಿದೆ. ಮನೆಯಲ್ಲಿ ಜವಾಬ್ದಾರಿಯುತ ನಡವಳಿಕೆಯಿಂದ ಪ್ರಶಂಸೆ ಗಳಿಸುತ್ತೀರಿ‌.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಚಂದ್ರ ಮಂಗಳ ಯೋಗವಿರಲಿದ್ದು ಬೇರೆಯವರಿಂದ ಹೆಚ್ಚಿನ ನೆರವು ಸಿಗಬಹುದು. ಆತ್ಮವಿಶ್ವಾಸ ಕೂಡ ಹೆಚ್ಚಾಗಬಹುದು.

ವಾಸ್ತು ಪ್ರಕಾರ ಈ ಗಿಡಗಳನ್ನು ಗಿಫ್ಟ್ ಮಾಡಬೇಡಿ! ಅದೃಷ್ಟಕ್ಕಿಂತ ದುಷ್ಪರಿಣಾಮವೇ ಹೆಚ್ಚು?

ಕಟಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ನಿಮ್ಮ ವೈರಿಗಳು ಯಶಸ್ಸು ಹೊಂದಲಿದ್ದಾರೆ. ಹೀಗಾಗಿ ಮನಸ್ಸಿಗೆ ಹೆಚ್ಚಿನ ಕ್ಷೇಶ ಉಂಟಾಗಬಹುದು.

ಸಿಂಹ ರಾಶಿ: ಇಂದು ಅತ್ಯುತ್ತ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕೆಲಸ ಕಾರ್ಯದಲ್ಲಿ ಧನ ಲಾಭವಾಗುತ್ತದೆ. ಎಲ್ಲರ ಸಹಕಾರ ಕೂಡ ನಿಮಗೆ ದೊರೆಯುತ್ತದೆ.

ಕನ್ಯಾ ರಾಶಿ: ಈ ದಿನ ಉತ್ತಮ ದಿನವಾಗಲಿದೆ. ಇಂದು ದೊಡ್ಡದಾದ ಯಶಸ್ಸು ಸಿಗಬಹುದು. ನಿಮ್ಮ ಗೌರವ ಹೆಚ್ಚಾಗಲಿದ್ದು, ಕೀರ್ತಿ ಗಳಿಸಬಹುದು.

ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಆದರೆ ಭಗವಂತನ ಅನುಗ್ರಹ ಇಲ್ಲದೆ ಇಂದು ಏನು ಮಾಡಲೂ ಸಾಧ್ಯವಿಲ್ಲ. ಹಿರಿಯರ ಆಶೀರ್ವಾದ ಇಂದು ಆವಶ್ಯಕ.

ವೃಶ್ಚಿಕ ರಾಶಿ: ಕಷ್ಟಕದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಪ್ರೇಮ, ಪ್ರೀತಿ ವಿಚಾರದಲ್ಲಿ ಬೇಸರ ಉಂಟಾಗಬಹುದು.

ಧನು ರಾಶಿ: ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಹಾಗೂ ಪ್ರೀತಿ ಪಾತ್ರರಿಂದ ಸಹಕಾರ ಪ್ರಾಪ್ತಿಯಾಗುತ್ತದೆ. ದಾಂಪತ್ಯ ಹಾಗೂ ಪಾರ್ಟನರ್‌ಶಿಪ್‌ ವಿಚಾರದಲ್ಲಿ ಯಶಸ್ಸು ಸಿಗುತ್ತದೆ.

ಮಕರ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು. ಪ್ರೇಮ, ಪ್ರೀತಿ ವಿಚಾರದಲ್ಲಿ ನೆಮ್ಮದಿ.

ಕುಂಭ ರಾಶಿ: ಇಂದು  ಕಷ್ಟದ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಬಹುದು. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ.

ಮೀನ ರಾಶಿ: ಉತ್ತಮ ದಿನವಾಗಲಿದೆ. ಮನೆಯಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿ ಯಶಸ್ಸು.