ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ಹೆಚ್ಚಿನ ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಹೊಸ ಉದ್ಯೋಗ,ಕಂಕಣ ಭಾಗ್ಯ, ಮಕ್ಕಳ ಭಾಗ್ಯವನ್ನು ಒದಗಿಸಿಕೊಡುವಂತಹ ದಿನವಾಗಿದೆ
ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಜವಾಬ್ದಾರಿಯುತ ನಡವಳಿಕೆ ಇರುತ್ತದೆ. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.
ಮಿಥುನ ರಾಶಿ: ಇಂದು ಈ ರಾಶಿಗೆ ಕಷ್ಟಕರವಾದ ದಿನ ವಾಗಿದೆ. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಿ ಮುಂದೆ ಏನು ಮಾಡಬೇಕೆಂಬ ಗೊಂದಲ ಮೂಡಬಹುದು. ಆತ್ಮವಿಶ್ವಾಸ ಕೂಡ ಕುಗ್ಗಬಹುದು.
ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ನೆಮ್ಮದಿ ಕಾಣುತ್ತೀರಿ. ಮುಖ್ಯ ವಾದ ಕೆಲಸ ಕಾರ್ಯದಲ್ಲೂ ನೀವು ಅಭಿವೃದ್ಧಿ ಕಾಣುತ್ತೀರಿ.
Vastu Tips: ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಎಲ್ಲಿರಬೇಕು? ದಾಂಪತ್ಯ ಸುಖಕ್ಕೆ ವಾಸ್ತು ಹೇಳುವ ನಿಯಮ ಇದು!
ಸಿಂಹ ರಾಶಿ: ಇಂದು ಮಿಶ್ರಫಲದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕೆಲಸ ಕಾರ್ಯದಲ್ಲಿ ಜಯ. ಆದರೆ ಇಂದು ನಿಮ್ಮ ವ್ಯಕ್ತಿತ್ವದಲ್ಲಿ ಕೆಲವೊಂದು ಬದಲಾವಣೆ ಅಗತ್ಯವಾಗಿ ಇರುತ್ತದೆ
ಕನ್ಯಾರಾಶಿ: ಈ ದಿನ ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ತೊಂದರೆ ಕಾಣುತ್ತೀರಿ. ಹಣಕಾಸಿನ ವಿಚಾರದಲ್ಲಿಯೂ ಕ್ಲೇಶ ಉಂಟಾಗಬಹುದು.
ತುಲಾ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಲಾಭವಾಗುತ್ತದೆ. ಮಿತ್ರರಿಂದ ಖುಷಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ತಿರುವು ಉಂಟಾಗುತ್ತದೆ.
ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಹಾಗೂ ಪ್ರೀತಿ ಪಾತ್ರರಿಂದ ಸಹಕಾರ ಪ್ರಾಪ್ತಿಯಾಗುತ್ತದೆ. ದಾಂಪತ್ಯ ಹಾಗೂ ಸಂತಾನ ಭಾಗ್ಯ ಇಂದು ಇರುತ್ತದೆ
ಮಕರ ರಾಶಿ: ಇಂದು ಕಷ್ಟಕರವಾದದ ದಿನ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಧ್ಯಾತ್ಮಿಕವಾಗಿ ಕೆಲವೊಂದಿಷ್ಟು ಬದಲಾವಣೆ ಅಗತ್ಯ.
ಕುಂಭ ರಾಶಿ: ಇಂದು ಉತ್ತಮವಾದ ದಿನವಾಗಿದೆ ಕೆಲಸ ಕಾರ್ಯದಲ್ಲಿ ಯಶಸ್ಸು, ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಮಾನಸಿಕವಾಗಿಯೂ ಹೆಚ್ಚಿನ ನೆಮ್ಮದಿ
ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲೂ ಪ್ರಗತಿ ಕಾಣುತ್ತೀರಿ.