ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ,ಅಕ್ಟೋಬರ್ 11, 2026: ಇಂದು ನವರಾತ್ರಿ ಆರಂಭ! ಈ ರಾಶಿಗೆ ದುರ್ಗೆಯ ಅನುಗ್ರಹ!

Horoscope Today October 11th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಪ್ರತಿಭಾ ತಿಥಿ, ಚಿತ್ತಾ ನಕ್ಷತ್ರದ ಅಕ್ಟೋಬರ್‌ 11ನೇ ತಾರೀಖಿನ ಭಾನುವಾರದ ಈ ದಿನ ನವರಾತ್ರಿ ಆರಂಭ, ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಚಿತ್ತಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಇಂದು ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಉತ್ತಮ ಸಮಯವನ್ನು ನೀವು ಕಳೆಯಬಹುದು.

ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಹೆಚ್ಚಿನ ಲಾಭ ತರುವ ದಿನವಾಗಿದೆ. ಮನಸ್ಸಿನ ನೋವೆಲ್ಲ ಇಂದು ದೂರವಾಗಬಹುದು. ಕಾರ್ಯಕ್ಷೇತ್ರದಲ್ಲೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು.

ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆ ಹಾಗೂ ಕೋರ್ಟ್, ಕಛೇರಿ ವ್ಯವಹಾರದಲ್ಲಿ ಜಾಗೃತಿ ವಹಿಸಿ.

ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ.  ಮಾಧ್ಯಮದಲ್ಲಿ ಇರೋರಿಗೆ ಹಾಗೂ ಮಾರ್ಕೆಂಟಿಗ್ ವ್ಯವಹಾರದಲ್ಲಿ ಇರೋರಿಗೆ ಯಶಸ್ಸು ಸಿಗುತ್ತದೆ.

‌ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದರೆ ಸಂಸಾರದ ಬಗ್ಗೆ ಹೆಚ್ಚಿನ ಒತ್ತು ನೀವು ನೀಡಬೇಕಾಗುತ್ತದೆ.

ಕನ್ಯಾರಾಶಿ: ಈ ದಿನ ಮಧ್ಯಾಹ್ನವರೆಗೆ ಕಷ್ಟಕರವಾದ ದಿನವಾಗಿದ್ದರೂ ಮಧ್ಯಾಹ್ನ ಬಳಿಕ ಕೆಲವೊಂದು ಸಮಸ್ಯೆಗೆ ಪರಿಹಾರ ಸಿಗಬಹುದು. ಮುಂದಿನ ಕೆಲಸ ಕಾರ್ಯಗಳಿಗೆ ಸರಿಯಾದ ಮಾರ್ಗದರ್ಶನ ಇಂದು ದೊರಕುತ್ತದೆ.

Vastu Tips: ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು? ಈ ಕುರಿತು ಪಾಲಿಸಬೇಕಾದ ವಾಸ್ತು ನಿಯಮಗಳು ಇವು

ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯ ದಲ್ಲಿ ಯಾರ ಸಹಕಾರವು ಸಿಗುವುದಿಲ್ಲ. ಮನಸ್ಸಿನಲ್ಲಿ ಹೆಚ್ಚಿನ ಒತ್ತಡ, ತುಮುಲಗಳು ಕಾಡಬಹುದು.

ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಧನಲಾಭದ ಸೂಚನೆಗಳು ಕೂಡ ಇಂದು ಇವೆ.

ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪರಿಹಾರವು ಸಿಗುವ ದಿನ ನಿಮ್ಮದಾಗಿದೆ.

ಮಕರ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಮಾಯವಾಗುತ್ತದೆ.

ಕುಂಭ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯ ನಿರ್ಧಾರದಲ್ಲಿ ಅಡಚಣೆ ಉಂಟಾಗಬಹುದು. ಯಾವುದೇ ಬಿಸಿನೆಸ್ ವ್ಯವಹಾರ ಬೇಡ.

ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಎಲ್ಲರ ಸಹಕಾರ,ಗೌರವ ನಿಮಗೆ ಸಿಗುತ್ತದೆ. ದಾಂಪತ್ಯದಲ್ಲೂ ನೆಮ್ಮದಿ ಕಾಣುತ್ತೀರಿ..