ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 16th: ರವಿ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದು, ಈ ರಾಶಿಗೆ ಶುಭಫಲ!

ನಿತ್ಯ ಭವಿಷ್ಯ ನವೆಂಬರ್‌ 16, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರದ ನವೆಂಬರ್ 16ನೇ ತಾರೀಖಿನ ಭಾನುವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ದಿನ ಭವಿಷ್ಯ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ, ಕೃಷ್ಣ ಪಕ್ಷದ ದ್ವಾದಶಿ ತಿಥಿ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ರವಿ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಇಂದು ಸಂಕ್ರಮಣ ವಾಗಿದ್ದು ಅತೀ ಒಳ್ಳೆಯ ದಿನ‌ವಾಗಿದೆ. ಮೇಷ ರಾಶಿಯವರಿಗೆ ಇಂದು ಕ್ಷೇಷಕರವಾದ ದಿನವಾಗಿದೆ. ನಾನಾ ರೀತಿಯ ಯೋಚನೆಗಳು ನಿಮ್ಮನ್ನು ಕಾಡಬಹುದು.‌ ಆಧ್ಯಾತ್ಮಿಕತೆಗೆ ಅತೀ ಹೆಚ್ಚಿನ ಸಮಯ ನೀಡಿದರೆ ನಿಮಗೆ ಒಳಿತು ಆಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ನೀವು ಎಲ್ಲರ ಜೊತೆಗೂ ಗೌರವಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಎಲ್ಲರ ಜೊತೆ ವಿನಯತೆಯಿಂದ ವರ್ತಿಸಿದರೆ ಮುಂದಿನ ದಿನದಲ್ಲಿ ನಿಮಗೆ ಒಳಿತು ಆಗಲಿದೆ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ದಿನವಾಗಿದೆ.‌ ಕಾರ್ಯ ಕ್ಷೇತ್ರದಲ್ಲಿ ಇದ್ದಂತಹ ಎಲ್ಲ ಅಡೆ- ತಡೆಗಳು ನಿವಾರಣೆಯಾಗಬಹುದು. ಧೈರ್ಯವಾಗಿ ನೀವು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು.

ಕಟಕ ರಾಶಿ: ಕಟಕ ರಾಶಿ ಅವರು ಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಬಿಸೆನೆಸ್ ವ್ಯವಹಾರ ಮಾಡುವವರಿಗೆ ಲಾಸ್ ಆಗುವ ಸಾಧ್ಯತೆ ಇದೆ. ನಿಮ್ಮ ಬುದ್ದಿ ಶಕ್ತಿಯನ್ನು ಉಪಯೋಗಿಸಿ ಕೊಂಡು ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ನಿಮಗೆ ಕೆಲಸದಲ್ಲಿ ಮುನ್ನಡೆ ಆಗಬಹುದು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ನಿಮ್ಮ ಚತುರ್ಥ ಭಾವಕ್ಕೆ ರವಿ ಬರುವುದರಿಂದ ತಾಯಿಯ ಆರೋಗ್ಯ,ಆಸ್ತಿ ಪಾಸ್ತಿ ವಿಚಾರವಾಗಿ ಗಮನ ನೀಡಬೇಕಾಗುತ್ತದೆ. ನಿಮ್ಮ ಮನೆಯ ನೆಮ್ಮದಿ ಬಗ್ಗೆ ನೀವೇ ಯೋಚನೆ ಮಾಡ ಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಅಂದುಕೊಂಡ ಕೆಲಸ ಕಾರ್ಯ ಗಳು ನಡೆಯಲಿದೆ. ನಿಮ್ಮ ಸ್ನೇಹಿತರು,ಸಹೋದರ- ಸಹೋದರಿ ಜೊತೆ ಉತ್ತಮ ರೀತಿಯಲ್ಲಿ ಸಮಯ ಕಳೆಯುವ ದಿನವಾಗಿದೆ.

ಇದನ್ನೂ ಓದಿ:Vastu tips: ತುಳಸಿ ಗಿಡ ಮನೆಯ ಈ ದಿಕ್ಕಿನಲ್ಲಿದ್ದರೆ ತುಂಬಾ ಶ್ರೇಷ್ಠ, ಇದು ನಿಮ್ಮ ಮನೆಯಲ್ಲಿದ್ದರೆ ಸಾಕ್ಷಾತ್‌ ಲಕ್ಷ್ಮಿಯೇ ಇದ್ದಂತೆ!

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನವಾಗಿದೆ.‌ ಹಣ ಕಾಸಿನ ವಿಚಾರದಲ್ಲಿ ತೊಂದರೆ ಆಗಬಹುದು.‌ ಹೆಚ್ಚು ಹಣವನ್ನು ನೀವು ವ್ಯಯ ಮಾಡಬಹುದು. ಮನೆಯಲ್ಲಿ, ಪ್ರೀತಿ ಪಾತ್ರರ ಜೊತೆ ನೆಮ್ಮದಿ ಇಲ್ಲದೆ ಇರಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಮ್ಮ ರಾಶಿಗೆ ರವಿ ಪ್ರವೇಶ ಮಾಡುವುದರಿಂದ ಎಲ್ಲ ಕೆಲಸ ಕಾರ್ಯವನ್ನು ನೀವೇ ನಿಭಾಯಿಸಬೇಕಾಗುತ್ತದೆ. ಎಲ್ಲರ ಜೊತೆ ವಿನಯತೆಯಿಂದ ಇಂದು ಅವ ಮಾನವನ್ನು ದೂರ ಮಾಡಬೇಕಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ವ್ಯಯ ಭಾಗಕ್ಕೆ ರವಿ ಬರುತ್ತಿದ್ದಾನೆ. ನಿಮ್ಮ ಪ್ರೀತಿ ಪಾತ್ರರಿಂದ ಸೌಹಾರ್ದ, ಸಹಕಾರ ಇಂದು ಕಡಿಮೆ ಆಗಬಹುದು. ಕೆಲಸ ಕಾರ್ಯದಲ್ಲಿ ಯಾವುದೇ ಯಶಸ್ಸು ಕೂಡ ಸಿಗದೇ ಇರಬಹುದು.

ಮಕರ ರಾಶಿ: ಮಕರ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿ ಯಾಗ ಲಿದ್ದು ಮನಸ್ಸಿಗೆ ಖುಷಿ ಸಿಗುತ್ತದೆ. ಧನ ಆಗಮನ ಆಗಲಿದ್ದು ಪ್ರಮೋಷನ್ ಇತ್ಯಾದಿ ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಪ್ರಮೋಷನ್ ಇತ್ಯಾದಿಯಲ್ಲಿ ಯಶಸ್ಸು ಸಿಗುತ್ತದೆ. ಎಲ್ಲ ರೀತಿಯಲ್ಲಿ ಕೂಡ ನಿಮಗೆ ಅನುಕೂಲಕರವಾಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದೆ. ಆಧ್ಯಾತ್ಮಿಕ ವಾಗಿ ಪ್ರಗತಿ ಕಂಡು ಬರಲಿದ್ದು ಅಂದು ಕೊಂಡ ಕೆಲಸ ಕಾರ್ಯಗಳು ನಡೆಯಲಿದೆ.‌