ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 22: ಇಂದು ಈ ರಾಶಿಯವರು ಯಾವುದೇ ಮುಖ್ಯ ನಿರ್ಧಾರಕ್ಕೂ ಮುನ್ನ ಎಚ್ಚರ!

ನಿತ್ಯ ಭವಿಷ್ಯ ನವೆಂಬರ್‌ 22, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ದ್ವೀತಿಯ ತಿಥಿ, ಜೇಷ್ಠ ನಕ್ಷತ್ರದ ನವೆಂಬರ್ 22ನೇ ತಾರೀಖಿನ ಶನಿವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ನಿತ್ಯ ಭವಿಷ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಶರದೃತು ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ದ್ವೀತಿಯ ತಿಥಿ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ (Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಜೇಷ್ಠ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ.‌ ಅದ್ದರಿಂದ ಎಲ್ಲ ರಾಶಿಗೂ ಇಂದು ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಕ್ಲೀಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಮುಖ್ಯವಾದ ಕೆಲಸ, ಮೀಟೀಂಗ್ ನಲ್ಲಿ ಭಾಗವಹಿಸುವುದು ಇಂದು ಸರಿಯಲ್ಲ. ಆತಂಕಗಳು ಎದುರಾಗುವ ಸಾಧ್ಯತೆ ಇದ್ದು ಧ್ಯಾನ ಮಾಡಿ ಸಮಯ ಕಳೆಯಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ನಿಮ್ಮ ಪ್ರೀತಿ- ಪಾತ್ರರೊಡನೆ ಬಹಳನೇ ಒಳ್ಳೆಯ ಸಮಯ ಕಳೆಯುವಂತಹ ದಿನವಾಗಿದೆ. ಬಹಳ ಸಂತೋಷಕರ ದಿನ ನಿಮ್ಮದು ಅಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ದಿನವಾಗಿದೆ.‌ ಸಾಮಾಜಿಕ ವ್ಯವಹಾರದಲ್ಲಿ ಜಯ ಪ್ರಾಪ್ತಿಯಾಗಲಿದೆ. ನಿಮ್ಮ ಮಾತುಕತೆಯಿಂದ ನೀವು ಇಂದು ಎಲ್ಲರನ್ನು ಗೆಲ್ಲಬಹುದು‌.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನವಾಗಿದೆ. ಏನೇ ಕೆಲಸ ಮಾಡಿದರೂ ಉತ್ತಮ ಪ್ರತಿಫಲ ನಿಮಗೆ ಪ್ರಾಪ್ತಿ ಯಾಗುವುದಿಲ್ಲ. ಮನಸ್ಸಿಗೂ ಹೆಚ್ಚು ಬೇಸರ ಉಂಟಾಗುತ್ತದೆ. ಬಿಸಿನೆಸ್, ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಕೂಡ ಇಂದು ಒಳ್ಳೆಯದು ಅಲ್ಲ.

ಸಿಂಹ ರಾಶಿ: ಸಿಂಹ ರಾಶಿ ಅವರು ತಾಯಿಯ ಆರೋಗ್ಯ, ಆಸ್ತಿ ಪಾಸ್ತಿ ವಿಚಾರವಾಗಿ ಗಮನ ನೀಡಬೇಕಾಗುತ್ತದೆ. ಇಂದು ಕೆಲಸ ಕಾರ್ಯಕ್ಕಿಂತಲೂ ಮನೆಯ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತದೆ ‌

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.. ಯಾರೆಲ್ಲ ಪತ್ರಿ‌ಕೋದ್ಯಮ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡಲಿದ್ದೀರೋ ಅಂತವರಿಗೂ ಉತ್ತಮ ದಿನ...ಲಾಭದಾಯಕ ಕೂಡ ಅಗಲಿದೆ

ಇದನ್ನು ಓದಿ:Vastu Tips: ವಾಸ್ತು ಪ್ರಕಾರ, ಮನೆಯೊಳಗೆ ಏಳು ಕುದುರೆ ಫೋಟೋ ಹಾಕಲು ಸೂಕ್ತ ಸ್ಥಳ ಯಾವುದು?

ತುಲಾ ರಾಶಿ: ತುಲಾ ರಾಶಿ ಅವರಿಗೆ ಮನೆಯ ವಿಚಾರ, ಹಣಕಾಸಿನ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ದಿನವಾಗಿದೆ.‌ ಆದ್ದರಿಂದ ಯಾವುದಕ್ಕೂ ಆತಂಕ ಪಡದೇ ವಿನಯತೆ ಇದ್ದರೆ ಕೆಲವೊಂದಿಷ್ಟು ಸಮಸ್ಯೆಗೆ ಪರಿಹಾರ ಸಿಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಎಲ್ಲ ರೀತಿಯಿಂದಲೂ ನೀವು ಮಾರ್ಗದರ್ಶನ ಪಡೆದುಕೊಳ್ಳುತ್ತೀರಿ. ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಲೇಷ ಎಲ್ಲವೂ ಬಗೆಹರಿಯಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಮೀಟಿಂಗ್ ಇಮೇಲ್ ಕಳುಹಿಸುವುದು ಇತ್ಯಾದಿ ಯಾವುದೇ ಬೇಡ. ಹಾಗಾಗಿ ಬಹಳಷ್ಟು ವಿನಯತೆಯಿಂದ ನೀವು ಇರಬೇಕಾಗುತ್ತದೆ

ಮಕರ ರಾಶಿ: ಮಕರ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿ ಯಾಗಲಿದ್ದು ಮನಸ್ಸಿಗೆ ಖುಷಿ ಸಿಗುತ್ತದೆ. ಧನ ಆಗಮನ ಆಗಲಿದ್ದು ಮಿತ್ರರಿಂದ ಒಳಿತು ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಇತರರಿಂದ ಹೆಚ್ಚು ಗೌರವ ಕೂಡ ನಿಮಗೆ ಸಿಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗದರ್ಶನ ಸಿಗುತ್ತದೆ.