ಬೆಂಗಳೂರು, ನ. 25: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ಪಂಚಮಿ ತಿಥಿ, ಉತ್ತರಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಉತ್ತರಷಾಢ ನಕ್ಷತ್ರದ ಅಧಿಪತಿ ರವಿ. ಹೀಗಾಗಿ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂದು ಕೆಲವೊಂದು ರಾಶಿಯವರಿಗೆ ತನ್ನದೇ ಮಾತು ಕೇಳಬೇಕು, ಅದೇ ನಡೆಯಬೇಕು ಎನ್ನುವ ಅಹಂಕಾರ ಭಾವನೆಗಳು ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಿ ಯಶಸ್ಸು ಉಂಟಾಗುತ್ತದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅದೃಷ್ಟದ ದಿನ. ಆದರೂ ಕೂಡ ಭಗವಂತನ ಅನುಗ್ರಹ ಪಡೆಯಬೇಕಾಗುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಅವರ ಆಶೀರ್ವಾದವನ್ನು ಪಡೆಯಲು ಮರೆಯದಿರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ. ಯಾವುದೇ ವ್ಯವಹಾರ, ಮೀಟಿಂಗ್ ಇದ್ದರೂ ಮುಂದೂಡಿ.
ಕಟಕ ರಾಶಿ: ಕಟಕ ರಾಶಿಯವರಿಗೂ ಇಂದು ಉತ್ತಮ ದಿನವಾಗಿದ್ದು ಪ್ರೀತಿ ಪಾತ್ರರಿಂದ ಸಹಕಾರ ಪ್ರಾಪ್ತಿಯಾಗುತ್ತದೆ. ನಿಮ್ಮ ಕೆಲಸ ಕಾರ್ಯಕ್ಕೆ ಪ್ರೀತಿ ಪಾತ್ರರಿಂದ ಹೆಚ್ಚಿನ ಒಲವು ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಜಯ ಪ್ರಾಪ್ತಿಯಾಗುವ ದಿನ ಇಂದು. ಶತ್ರುಗಳನ್ನು ನೀವು ಹೆಮ್ಮೆಟ್ಟಿಸಬಹುದು.
ವಾಸ್ತು ಪ್ರಕಾರ, ಮನೆಯೊಳಗೆ ಏಳು ಕುದುರೆ ಫೋಟೋ ಹಾಕಲು ಸೂಕ್ತ ಸ್ಥಳ ಯಾವುದು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನ. ಆದರೂ ಕೂಡ ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ಹಾಗೂ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಕಿರಿಕಿರಿಯಾಬಹುದು. ಈ ಬಗ್ಗೆ ಜಾಗೃತರಾಗಿರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಕೋರ್ಟ್, ಕಚೇರಿ, ವ್ಯವಹಾರ ಇತ್ಯಾದಿಯಲ್ಲಿ ಕಷ್ಟ ಆಗಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಯಾರೆಲ್ಲ ಸೋಶಿಯಲ್ ಮೀಡಿಯಾ, ಮಾರ್ಕೆಟಿಂಗ್ ವ್ಯವಹಾರದಲ್ಲಿ ಇದ್ದೀರೋ ಅವರಿಗೆಲ್ಲ ಹೆಚ್ಚಿನ ಪ್ರಗತಿ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರು ನಿಮ್ಮ ಕುಟುಂಬದ ವಿಚಾರಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಂಸಾರದಲ್ಲಿ ನೆಮ್ಮದಿಯ ಜತೆಗೆ ಮನಸ್ಸಿಗೂ ಖುಷಿ ಇರಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಪ್ರವೇಶ ಮಾಡುವುದರಿಂದ ಇವತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಎಲ್ಲವೂ ಮಾಯವಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಇಂದು ಬೇಡ. ಮುಖ್ಯವಾದ ಮೀಟಿಂಗ್, ವ್ಯವಹಾರದಲ್ಲಿ ನೆಮ್ಮದಿ ಇರುವುದಿಲ್ಲ.ಅತೀ ಭಾವುಕತೆ ಇರಲಿದ್ದು ಆತಂಕ ಹೆಚ್ಚಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಇಷ್ಟಾರ್ಥ ಸಿದ್ದಿಯಾಗಲಿದೆ. ಗುಂಪು ಕೆಲಸಗಳಿಂದ ನೀವು ಸಂತೋಷ ಪಡೆಯಬಹುದು.