ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಕೃತಿಕಾ ನಕ್ಷತ್ರದ ಈ ದಿನ ಈ ರಾಶಿಯವರಿಗೆ ಪ್ರಭಾವ ಬೀರಲಿದೆ!

ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ಥಿ ತಿಥಿ, ಕೃತಿಕಾ ನಕ್ಷತ್ರ, ಅಕ್ಟೋಬರ್‌ 10ನೇ ತಾರೀ‌ಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Horoscope

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ಥಿ ತಿಥಿ, ಅಕ್ಟೋಬರ್ 10ನೇ ತಾರೀಖಿನ ಶುಕ್ರವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಕೃತಿಕಾ ನಕ್ಷತ್ರದ ಅಧಿಪತಿ ರವಿ ಯಾಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ನಿಮ್ಮ ಮನೆಯವರು ನಿಮ್ಮ ಮೇಲೆ ಹಠ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಮನೆಯಿಂದಲೇ ಒಡಕು ಉಂಟಾಗುವ ಸಾಧ್ಯತೆ ಇದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ನೀವು ಅಂದುಕೊಂಡದ್ದೆಲ್ಲ ನೇರವೆರಲಿದೆ. ನೀವು ಹೇಳಿದ್ದೆಲ್ಲ ಇಂದು ನಡೆಯಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನ ಆಗಲಿದೆ. ನಿಮ್ಮ ಅತೀ ಮುಖ್ಯವಾದ ಮಿತೃತ್ವದಲ್ಲಿ ಒಡಕು ಆಗಬಹುದು. ಹಾಗಾಗಿ ಸ್ನೇಹಿತರ ಜೊತೆ ನಯವಾಗಿ ವರ್ತನೆ ಮಾಡಿದರೆ ಒಳಿತು.‌ ಎಲ್ಲರ ಜೊತೆ ವಿನಯದಿಂದ ವರ್ತಿಸಬೇಕು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ.‌ ಗುಂಪು ಕೆಲಸಗಳಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಿ ಇರಲಿದೆ. ಎಲ್ಲರ ಜೊತೆ ಗೌರವ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಿಮ್ಮ ಕೆಲಸ ಕಾರ್ಯದಲ್ಲಿ ಬಾಸ್ ಗಳು ಕಿರಿ ಕಿರಿ ಮಾಡಬಹುದು.‌ನಿಮ್ಮ ಭಾವನೆಗಳು ಅವರಿಗೆ ತಪ್ಪು ಅಭಿಪ್ರಾಯ ಕಾಡಬಹುದು.‌ ಹಾಗಾಗಿ ಬಹಳ ಜಾಗೃತೆ ಯಿಂದ ಇರಬೇಕಾಗುತ್ತದೆ. ಆದರೂ ಕೂಡ ಹಿರಿಯರು ನಿಮ್ಮ ಜೊತೆ ಅಸಮಾಧಾನ ವ್ಯಕ್ತ ಪಡಿಸಬಹುದು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮ ವಾದ ದಿನವಾಗಿದೆ. ಆದರೆ ಹಿರಿಯರು ನಿಮ್ಮ ಜೊತೆ ಅಸಮಾಧಾನ ವ್ಯಕ್ಯ ಪಡಿಸಬಹುದು. ಹಾಗಾಗಿ ಹಿರಿಯರ ಜೊತೆ ಆಶೀರ್ವಾದ ಇಟ್ಟುಕೊಳ್ಳುವುದು ಅಗತ್ಯವಾಗಿ ಇರುತ್ತದೆ

ಇದನ್ನು ಓದಿ:Vastu Tips: ಹೊಸ ಫ್ಲಾಟ್ ಖರೀದಿ ಯೋಚನೆಯೇ? ಹಾಗಿದ್ದರೆ ಇವು ತಿಳಿದಿರಲಿ

ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನ ಮನಸ್ಸಿಗೆ ನೆಮ್ಮದಿ ಇರು ವುದಿಲ್ಲ. ಅತೀ ಹತ್ತಿರವಾದ ಸಂಬಂಧದಲ್ಲಿ ಒಡಕು ಉಂಟಾಗಬಹುದು. ಹಾಗಾಗಿ ಧ್ಯಾನಧಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. .ಬೇರೆಯವರಿಂದ ನಿಮಗೆ ಸಹಕಾರ ಪ್ರಾಪ್ತಿ ಯಾಗುತ್ತದೆ. ಎಲ್ಲರೂ ಕೂಡ ನೀವು ಹೇಳಿದ್ದನ್ನು ನಡೆಸಿಕೊಡುತ್ತಾರೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಕಷ್ಟಕರವಾದ ದಿನ ಆಗಲಿದ್ದು ಗೋಚರ ಅಷ್ಟೊಂದು ಉತ್ತಮವಾಗಿಲ್ಲ.‌ ಮುಖ್ಯವಾದ ವಿಚಾರದಲ್ಲಿ ಏನು ಮಾಡಬೇಕು ಎಂಬುದು ನಿಮಗೆ ತಿಳಿಯುವುದಿಲ್ಲ. ಶತ್ರುಗಳು ನಿಮ್ಮ ಜೊತೆ ಮಿತ್ರರಾಗುವ ಸಂದರ್ಭ ಕೂಡ ಬರಬಹುದು. ಆದರೂ ಈ ನಿರ್ಧಾರ ನೀವೆ ಮಾಡಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಬಿಸೆನೆಸ್ ವ್ಯವಹಾರ ದಲ್ಲಿ ಕಷ್ಟ ಉಂಟಾಗಬಹುದು. ನಿಮ್ಮ ಬಾಸ್ ಗಳಿಂದ ಬೈಗುಳ ಉಂಟಾಗಬಹುದು.‌. ಪೋಷಕರು ಮಕ್ಕಳ ಬಗ್ಗೆ ಸಮಾಧಾನ ವಹಿಸಬೇಕು.

ಕುಂಭರಾಶಿ: ಕುಂಭ ರಾಶಿ ಯವರಿಗೆ ಕಷ್ಟಕರವಾದ ದಿನವಾಗಿದೆ. ಟ್ಯಾಕ್ಸ್ , ಮಾರ್ಕೆಟ್ ವ್ಯವಹಾರದಲ್ಲಿ ಇರುವವರಿಗೂ ಕಷ್ಟ ಕರವಾದ ದಿನ. ಎಲ್ಲರ ಜೊತೆ ವಿನಯ ಪೂರ್ವಕವಾಗಿ ವರ್ತಿಸಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮ ದಿನವಾಗಿದೆ. ಯಾರೆಲ್ಲ ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇದ್ದಾರೋ ಅಂತವರಿಗೆ ಉತ್ತಮ ದಿನ.‌ ಬರಹಗಾರರು, ಭಾಷಣಕಾರರಿಗೆ ಅತ್ಯುತ್ತಮ ದಿನವಾಗಿದೆ.