ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಸಂಸಾರದಲ್ಲಿ ಉತ್ತಮ ಸಮಯ ಕಳೆಯುವ ದಿನವಾಗಿದೆ. ಅದೇ ರೀತಿ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಕೈಗೊಳ್ಳುವ ದಿನವಾಗಿದೆ.
ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಹೆಚ್ಚಿನ ನೆಮ್ಮದಿ ತರುವ ದಿನವಾಗಿದೆ. ಎರಡು ಮೂರು ದಿನಗಳಲ್ಲಿ ಇದ್ದ ನೋವೆಲ್ಲ ಇಂದು ಮಯವಾಗುತ್ತದೆ. ಸ್ನೇಹಿತರ ಜೊತೆ ಉಂಟಾದ ಒಡಕುಗಳು ನಿವಾರಣೆಯಾಗುತ್ತದೆ.
ಮಿಥುನ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರವನ್ನು ಕೈಗೊಳ್ಳಲು ಹೋಗಬೇಡಿ. ಸಂಸಾರದಲ್ಲೂ ನಿಮಗೆ ಬೇಸರ ಉಂಟಾಗುವ ದಿನವಾಗಿದೆ.
ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಧನ ಲಾಭದ ಸೂಚನೆಗಳು ಇದ್ದು ಆರ್ಥಿಕವಾಗಿ ಹೆಚ್ಚಿನ ಯಶಸ್ಸು ಪಡೆಯುತ್ತೀರಿ.
ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಕೈಗೊಳ್ಳುವ ದಿನವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಪರಿಹಾರ ಸಿಗಲಿದ್ದು ಯಶಸ್ವಿ ಜೀವನ ನಿಮ್ಮದಾಗುತ್ತದೆ.
Vastu Tips: ಮನೆಯಲ್ಲಿ ಮೆಣಸಿನ ಗಿಡ ನೆಡಬಹುದೇ? ವಾಸ್ತು ಶಾಸ್ತ್ರ ಏನು ಹೇಳುತ್ತದೆ ಮೊದಲು ತಿಳಿಯಿರಿ!
ಕನ್ಯಾ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಮುಖ್ಯವಾಗಿ ತಾಯಿ, ಅಣ್ಣ- ತಮ್ಮಂದಿರ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರಿ.
ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಇಂದು ಸಿಟ್ಟು ಹೆಚ್ಚಾಗಿ ಭಾವುಕತೆ ಉಂಟಾಗಬಹುದು. ಹಾಗಾಗಿ ಯಾವುದೇ ನಿರ್ಧಾರವನ್ನು ಯೋಚಿಸಿ ಮಾಡಿದರೆ ಒಳಿತು.
ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಪ್ರೀತಿ ಪಾತ್ರರಿಗೆ ಇಂದು ದೊಡ್ಡದಾದ ಯಶಸ್ಸು ನೀವು ಕೊಡಬಹುದು.
ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಬಿಸಿನೆಸ್ ವ್ಯವಹಾರದಲ್ಲಿ ಯಶಸ್ಸು ಹಾಗೂ ಇಷ್ಟಾರ್ಥ ಸಿದ್ದಿಯಾಗಲಿದೆ.
ಮಕರ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ತೊಂದರೆಯನ್ನು ನೀವು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳಲು ಹೋಗಬೇಡಿ.
ಕುಂಭ ರಾಶಿ: ಇಂದು ಮನೆಯಲ್ಲಿ ಹೆಚ್ಚಿನ ಸಮಯ ಕೊಡುತ್ತೀರಿ. ಕೋರ್ಟ್ ಕಛೇರಿಯಲ್ಲಿ ತೊಂದರೆ ಎದುರಾಗಬಹುದು. ಅದೇ ರೀತಿ ಮಾತಿನಲ್ಲಿ ಹಿಡಿತ ಇದ್ದರೆ ಒಳಿತು.
ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ಕಷ್ಟಗಳೆಲ್ಲಾ ಇಂದು ನಿವಾರಣೆ ಯಾಗುತ್ತದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ.