ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ತುಲಾ ರಾಶಿಗೆ ಬುಧ ಪ್ರವೇಶ; ಯಾವೆಲ್ಲ ರಾಶಿಗೆ ಶುಭ ಫಲ?

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಏಕಾದಶಿ ತಿಥಿ, ಮತ್ತು ಶ್ರವಣ ನಕ್ಷತ್ರ ಇದ್ದು ಬುಧ ತುಲಾ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಅಕ್ಟೋಬರ್‌ 3ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಬುಧ ತುಲಾ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದು ಈ ರಾಶಿಗೆ ಅನುಕೂಲ

Horoscope -

Profile Pushpa Kumari Oct 3, 2025 6:00 AM

ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಏಕಾದಶಿ ತಿಥಿ, ಅಕ್ಟೋಬರ್ 3ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಕಷ್ಟದ ದಿನ ಆಗಲಿದೆ.‌ ಪಾರ್ಟ್ನರ್ ಶೀಪ್ ವ್ಯವಹಾರ ಮತ್ತು ಇತರ ಕೆಲಸ ಕಾರ್ಯದಲ್ಲಿ ನಿಮಗೆ ತೊಂದರೆ ಆಗಬಹುದು.‌ ದಾಂಪತ್ಯ ಜೀವನದಲ್ಲೂ ನಿಮ್ಮ ಮಾತಿನಿಂದ ತೊಂದರೆ ಆಗಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಸಾಮಾಜಿಕವಾಗಿ ಎಲ್ಲವೂ ನಿಮ್ಮ ಪರವಾಗಿಯೇ ಇರುತ್ತದೆ.‌ ಆದ್ದರಿಂದ ಮನಸ್ಸಿಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಅತೀ ಉತ್ತಮ ದಿನ ನಿಮ್ಮದು ಆಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಪಂಚಮ ಭಾಗಕ್ಕೆ ಬುಧ ಬರುವುದರಿಂದ ಮಕ್ಕಳು ಇರುವ ಪೋಷಕರಿಗೆ ಅಸಮಾಧಾನ ಉಂಟಾಗಬಹುದು. ವ್ಯವಹಾರದಲ್ಲಿ ಅಡಚಣೆ ಆಗಬಹುದು. ಪ್ರೇಮ, ಪ್ರೀತಿ ವಿಚಾರದಲ್ಲೂ ತೊಂದರೆ ಆಗಬಹುದು. ನಿಮ್ಮಿಂದ ಬೇರೆಯವರಿಗೆ ಅಸಮಾಧಾನ ಉಂಟಾಗಬಹುದು.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನೆಯಲ್ಲಿ, ಕುಟುಂಬದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ. ಆಸ್ತಿ ಪಾಸ್ತಿ, ಹೊಸ ಮನೆ, ಹೊಸ ವಾಹನ ಖರೀದಿಗೆ ಉತ್ತಮ ಸಮಯ. ತಾಯಿಯಿಂದ ಸಹಕಾರ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟದ ದಿನ ಆಗಲಿದೆ.‌ ಮುಖ್ಯವಾದ ವಿಚಾರದಲ್ಲಿ ನೆಮ್ಮದಿ ಇಲ್ಲ‌. ನಿಮ್ಮ ಪ್ರೀತಿ ಪಾತ್ರರಿಂದಲೂ ಯಾವುದೇ ಸಹಕಾರ ಸಿಗುವುದಿಲ್ಲ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ, ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಯಾರ ಜತೆಗೆ ನೀವು ವಾಸ ಮಾಡ್ತಾ ಇದ್ದೀರಿ ಅಂತವರಿಂದ ಖುಷಿ ಸಿಗಲಿದೆ. ಧನ ಆಗಮನ ಕೂಡ ಆಗಲಿದೆ.

ತುಲಾ ರಾಶಿ: ತುಲಾ ರಾಶಿಯಲಲಿ ಬುಧ ಬಂದಿರುವುದರಿಂದ ನೀವು ಆಡುವ ಮಾತಿನಿಂದ ಅತೀ ಹೆಚ್ಚಿನ ಗಮನ ನೀಡಬೇಕಾಗುತ್ತದೆ.‌ ಬೇರೆಯವರ ಮಾತಿನಿಂದ ನಿಮಗೆ ಬೇಸರವಾಗಬಹುದು. ಆದರೆ ಯಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಳ್ಳದೆ ಮಾತು ಕಡಿಮೆ ಮಾಡಿದರೆ ಉತ್ತಮ.

ಇದನ್ನು ಓದಿ:Vastu Tips: ಕೆಲಸ ಮಾಡುವ ಕಂಪ್ಯೂಟರ್ ಈ ದಿಕ್ಕಿನಲ್ಲಿದ್ದರೆ ಯಶಸ್ಸು ಗ್ಯಾರಂಟಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ಗೋಚರ ಇರಲಿದೆ. ಮಿತ್ರರು ನಿಮ್ಮನ್ನು ದೂರ ಮಾಡಬಹುದು. ಬೇಕಾದಂತಹ ಸಹಕಾರ ಸಿಗುವುದಿಲ್ಲ.‌ ಅತಿಯಾದ ಖರ್ಚು ಆಗಬಹುದು.‌

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಿತ್ರರಿಂದ ಇಷ್ಟಾರ್ಥ ಸಿದ್ದಿಯಾಗಲಿದ್ದು, ಬಂಧು ಬಾಂಧವರಿಂದ ನೆಮ್ಮದಿ ಇರುತ್ತದೆ. ಗುಂಪು ಕೆಲಸದಲ್ಲಿ, ಬಿಸೆನೆಸ್ ವ್ಯವಹಾರದಲ್ಲಿ ಪ್ರಗತಿ ಇರಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಮಾತಿನಿಂದ ಯಶಸ್ಸು ಸಿಗಲಿದೆ. ಆದರೆ ವಿವೇಕವಾಗಿ ಮಾತನಾಡಬೇಕಾಗುತ್ತದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ ಇರುತ್ತದೆ.‌ ಆದರೆ ಇಂದು ಹಿರಿಯರ ಆಶೀರ್ವಾದ ಮುಖ್ಯವಾಗಿದ್ದು ಅವರ ಜತೆ ವಿವೇಕವಾಗಿ ಮಾತನಾಡಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಅತ್ಯುತ್ತಮ ದಿನ‌ವಾಗಲಿದೆ. ಕಳೆದ ದಿನದಲ್ಲಿ ಬಹಳಷ್ಟು ನೋವಿತ್ತು. ಇದೀಗ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಆರೋಗ್ಯದಲ್ಲೂ ಸುಧಾರಣೆ ಆಗಲಿದೆ.