Vastu Tips: ಕೆಲಸ ಮಾಡುವ ಕಂಪ್ಯೂಟರ್ ಈ ದಿಕ್ಕಿನಲ್ಲಿದ್ದರೆ ಯಶಸ್ಸು ಗ್ಯಾರಂಟಿ
ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಕೆಲವೊಮ್ಮೆ ನಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು. ಕಚೇರಿ ಕೆಲಸಗಳಲ್ಲಿ ಯಶಸ್ಸು ಲಭ್ಯವಾಗಬೇಕಾದರೆ ನಾವು ಕೆಲಸ ಮಾಡುವ ಕಂಪ್ಯೂಟರ್ ಅನ್ನು ನಿರ್ದಿಷ್ಟ ದಿಕ್ಕಿನಲ್ಲಿರಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಆ ದಿಕ್ಕು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

-

ಬೆಂಗಳೂರು: ಕಚೇರಿ (Vastu for office) ಕೆಲಸಗಳು ಈಗ ಕೇವಲ ಕಚೇರಿಗೆ ಸೀಮಿತವಾಗಿಲ್ಲ. ಹೀಗಾಗಿ ಮನೆ, ಕಚೇರಿಯಲ್ಲೂ (Vastu for office work) ಕಂಪ್ಯೂಟರ್ (Vastu for computer) ಇದ್ದೇ ಇರುತ್ತದೆ. ಇದನ್ನು ಇಡುವಾಗ ಸರಿಯಾದ ದಿಕ್ಕು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಂದು ವಸ್ತುವಿಗೆ ವಿಶೇಷ ಶಕ್ತಿ ಇರುವಂತೆ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ ನಾವು ಮನೆ, ಕಚೇರಿಯಲ್ಲಿಡುವ ಕಂಪ್ಯೂಟರ್ ದಿಕ್ಕು ಕೆಲಸದಲ್ಲಿ ಪ್ರಗತಿ, ಉನ್ನತಿಗೆ ದಾರಿಯಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ವಾಸ್ತು ಶಾಸ್ತ್ರದ ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಕಂಪ್ಯೂಟರ್‌ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಆಗ್ನೇಯ ದಿಕ್ಕಿನಲ್ಲಿ ಅಂದರೆ ಅಗ್ನಿ ಕೋನದಲ್ಲಿ ಕಂಪ್ಯೂಟರ್ ಅನ್ನು ಇಡುವುದು ಶುಭ ಎನ್ನುತ್ತದೆ ವಾಸ್ತು ನಿಯಮಗಳು.
ಆಗ್ನೇಯ ದಿಕ್ಕನ್ನು ಶಕ್ತಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಲ್ಲಿ ಇರಿಸಲಾಗಿರುವ ಎಲೆಕ್ಟ್ರಾನಿಕ್ ವಸ್ತುಗಳು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕು ಬೆಂಕಿಯೊಂದಿಗೆ ಸಂಬಂಧ ಹೊಂದಿದೆ. ಕಂಪ್ಯೂಟರ್ ಮತ್ತು ಇತರ ತಾಂತ್ರಿಕ ಸಾಧನಗಳು ವಿದ್ಯುತ್ ನಿಂದ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಈ ದಿಕ್ಕಿನಲ್ಲಿ ಇರಿಸಿದಾಗ ಅವುಗಳ ಪರಿಣಾಮವು ಸಕಾರಾತ್ಮಕವಾಗಿರುತ್ತದೆ. ಈ ದಿಕ್ಕಿನಲ್ಲಿ ಇರಿಸಲಾದ ಕಂಪ್ಯೂಟರ್ ಅಧ್ಯಯನ ಮತ್ತು ಕೆಲಸದಲ್ಲಿ ಯಶಸ್ಸನ್ನು ತರುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ.
ಸರಿಯಾದ ದಿಕ್ಕಿನಲ್ಲಿ ಕಂಪ್ಯೂಟರ್ ಇರಿಸಬೇಕು ಎನ್ನುವುದು ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗಿಲ್ಲ. ಓದುತ್ತಿರುವ ಮಕ್ಕಳಿಗೂ ಇದು ಸಹಾಯಕವಾಗಿದೆ. ಕಂಪ್ಯೂಟರ್ ಅನ್ನು ಆಗ್ನೇಯ ಮೂಲೆಯಲ್ಲಿ ಇಡುವುದರಿಂದ ಮಕ್ಕಳ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ದಕ್ಷತೆ ಉತ್ತಮವಾಗಿರುತ್ತದೆ.
ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಕಂಪ್ಯೂಟರ್ ಇಡಬಾರದು. ಇದು ನಕಾರಾತ್ಮಕ ಪರಿಣಾಮ ಬಿರುವುದು. ಈಶಾನ್ಯ ದಿಕ್ಕು ಆಧ್ಯಾತ್ಮಿಕತೆ ಮತ್ತು ಶಾಂತಿಯ ಸ್ಥಳವಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಲ್ಲಿ ಇಡುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ನೈಋತ್ಯ ದಿಕ್ಕು ಸ್ಥಿರತೆಯ ಸಂಕೇತವಾಗಿದೆ. ಹೀಗಾಗಿ ಇಲ್ಲಿ ಕಂಪ್ಯೂಟರ್ ಇರಿಸಿದರೆ ಅದು ಏಕಾಗ್ರತೆಗೆ ಅಡ್ಡಿ ಉಂಟು ಮಾಡುತ್ತದೆ.
ಇದನ್ನೂ ಓದಿ: Vastu Tips: ಮನೆಯಲ್ಲಿ ಶಕ್ತಿ, ಸಮೃದ್ಧಿಯನ್ನು ಹೆಚ್ಚಿಸುತ್ತವೆ ಈ ಬಣ್ಣಗಳು
ಇದು ಕೇವಲ ಸಂಪ್ರದಾಯವಲ್ಲ ಶಕ್ತಿಯ ಸಮತೋಲನವಾಗಿದೆ. ಕಂಪ್ಯೂಟರ್‌ಗಳಂತಹ ಉಪಕರಣಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಬಳಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ, ಯಶಸ್ಸು ಮತ್ತು ಪ್ರಗತಿಯನ್ನು ಕಾಣಲು ಸಾಧ್ಯ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.