ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪ್ರತಿಪ ತಿಥಿಯ ಅಕ್ಟೋಬರ್ 8ನೇ ದಿನಾಂಕದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಅಶ್ವಿನಿ ನಕ್ಷತ್ರ ಇದ್ದು, ಇದರ ಅಧಿಪತಿ ಕೇತು ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಇಂದು ಹಿಂದಿನ ಎರಡು ಮೂರು ದಿನಗಳ ಕ್ಷೇಷ ಮಾಯವಾಗಿ ಮುಂದೆ ಏನು ಮಾಡಬೇಕು ಎನ್ನುವ ಮಾರ್ಗ ದರ್ಶನ ನಿಮಗೆ ಸಿಗಲಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ನಿಮ್ಮ ಮಿತೃತ್ವದಲ್ಲಿ ಶತ್ರುತ್ವ ಹುಟ್ಟಿಕೊಳ್ಳಬಹುದು. ಸ್ನೇಹಿತರ ಜತೆ ಕಲಹ ಉಂಟಾಗಬಹುದು. ವ್ಯವಹಾರಗಳಿಗೆ ಇಂದು ಅಷ್ಟೊಂದು ಒಳ್ಳೆಯ ದಿನ ಆಗಿಲ್ಲ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಆತ್ಯುತ್ತಮ ದಿನವಾಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಧನಾಗಮನ ಕೂಡ ಆಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಜವಾಬ್ದಾರಿ ಹೆಚ್ಚಾಗಿರುತ್ತದೆ. ನಿಮ್ಮ ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಮನೆ ಮತ್ತು ಸಂಸಾರದ ಜಂಜಾಟಗಳು ಹೆಚ್ಚಾಗಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಆದರೂ ಕೂಡ ಹಿರಿಯರ ಹಾಗೂ ಭಗವಂತನ ಆಶೀರ್ವಾದ ಇಲ್ಲದೆ ಏನೂ ಇಂದು ನಡೆಯುವುದಿಲ್ಲ.ಹಾಗಾಗಿ ಬಹಳಷ್ಟು ವಿನಯದಿಂದ ನಡೆದುಕೊಳ್ಳಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಮನಸ್ಸಿಗೆ ನೋವು ಆಗಬಹುದು. ಮನಸ್ಸಿನಲ್ಲಿ ಯೋಚನೆ ಆತಂಕ ಹೆಚ್ಚು ಇರುತ್ತದೆ. ಧ್ಯಾನಾದಿಗಳ ಮೂಲಕ ಸಮಯ ಕಳೆಯಬೇಕು.
ಇದನ್ನು ಓದಿ:Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ಬಣ್ಣಗಳನ್ನು ಬಳಸಬಾರದು
ತುಲಾ ರಾಶಿ: ತುಲಾ ರಾಶಿಯಲ್ಲಿರುವವರಿಗೆ ಉತ್ತಮ ದಿನವಾಗಲಿದೆ. ಇಂದು ನಿಮಗೆ ಸೌಹಾರ್ದ ಪ್ರಾಪ್ತಿಯಾಗಲಿದ್ದು ದಾಂಪತ್ಯದಲ್ಲೂ ಯಶಸ್ಸು ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಮನಸ್ಸಿಗೆ ನೆಮ್ಮದಿ ಇರುತ್ತದೆ. ನಿಮ್ಮ ಸಾಮಾಜಿಕ ಕೆಲಸ ಕಾರ್ಯದಲ್ಲಿ ಮುನ್ನಡೆ ಕಾಣುತ್ತೀರಿ. ಶತ್ರುಗಳ ಕಡೆಗೆ ಮುನ್ನುಗುತ್ತೀರಿ. ಜೀಮ್, ಕ್ರೀಡೆ, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಕಷ್ಟದ ದಿನ ಆಗಲಿದೆ. ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ ಕೆಲಸ ಕಾರ್ಯವನ್ನು ಮಾಡಬೇಕಾಗುತ್ತದೆ. ಪೋಷಕರಿಗೆ ಮಕ್ಕಳಿಂದ ಇಂದು ಕಿರಿ ಕಿರಿ ಆಗಬಹುದು. ಷೇರು ಮಾರುಕಟ್ಟೆಯಲ್ಲಿ ಇರುವವರಿಗೆ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನ. ನಿಮ್ಮ ಮನೆಯ ಜವಾಬ್ದಾರಿಗಳು ಇಂದು ಹೆಚ್ಚಾಗಿರುತ್ತದೆ. ಕೋರ್ಟ್, ಟ್ಯಾಕ್ಸ್ ವ್ಯವಹಾರದಲ್ಲಿ ಇರುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಾಧ್ಯಮ, ರಾಜಕೀಯದಲ್ಲಿರುವವರಿಗೆ ಉತ್ತಮ ದಿನ. ಮಾತಿನ ಕೌಶಲದಿಂದ ನೀವು ಎಲ್ಲರನ್ನು ಗೆಲ್ಲಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಸಂಸಾರದ ಬಗ್ಗೆ ಜವಾಬ್ದಾರಿ ಹೆಚ್ಚು ಇರುತ್ತದೆ. ಮನೆಯವರ ಜತೆ ಖುಷಿಯಿಂದ ದಿನವನ್ನು ನೀವು ಕಳೆಯಲಿದ್ದೀರಿ.